ನ್ಯೂಯಾರ್ಕ್: ಇಂದು ವಿಶ್ವ ಇಮೋಜಿ ದಿನದ ಪ್ರಯುಕ್ತ ಆ್ಯಪಲ್ ಮತ್ತು ಗೂಗಲ್ ಎರಡೂ ಕೂಡ ಹೊಸ ಹೊಸ ಇಮೋಜಿಗಳನ್ನು ಪರಿಚಯಿಸಿದ್ದು ಬಳಕೆದಾರರು ಮತ್ತಷ್ಟು ಸಂತುಷ್ಟರಾಗುವುದರಲ್ಲಿ ಅನುಮಾನವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆ್ಯಪ್, ಫೇಸ್ ಬುಕ್‌ಗಳಲ್ಲಿ ಮಾತಿಗಿಂತ ಜಾಸ್ತಿ ಇಮೋಜಿಗಳದ್ದೇ ಕಾರುಬಾರು. ನಗು, ಅಳು, ಕೋಪ, ಬೇಜಾರು, ಉತ್ಸಾಹ, ಆಶ್ವರ್ಯ, ವ್ಯಂಗ್ಯ, ನಾಚಿಕೆ ಇನ್ನಿತರ ಎಲ್ಲಾ ಭಾವನೆಗಳನ್ನು ಪುಟ್ಟ ಇಮೋಜಿಗಳ ಮೂಲಕ ವ್ಯಕ್ತಪಡಿಸಬಹುದು.
ಈ ಡಿಜಿಟಲ್ ಯುಗದಲ್ಲಿ ಹಲವಾರು ಜನರು ಬರಹಗಳಲ್ಲಿ ಹೇಳಲಾಗದಿದ್ದನ್ನು ಇಮೋಜಿ ಮೂಲಕವೇ ತಿಳಿಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಸಾವಿರಾರು ಇಮೋಜಿಗಳಿದ್ದು, ಇದರ ಜೊತೆಗೆ ಸ್ಟಿಕ್ಕರ್ಸ್ ಹಾಗೂ ಜಿಫ್ ಪೈಲ್ ಕೂಡ ಜನಪ್ರಿಯತೆ ಪಡೆದಿದೆ.
ಇದೀಗ ಆ್ಯಪಲ್ ಸಂಸ್ಥೆ ನೂತನ ಸರಣಿಯ 13 ಇಮೋಜಿಗಳನ್ನು ಬಿಡುಗಡೆ ಮಾಡಿದ್ದು ಹೊಸ ಐಫೋನ್, ಐ ಪ್ಯಾಡ್, ಮ್ಯಾಕ್ ಅಪ್ ಡೆಟ್ ಗಳಲ್ಲಿ ಜನರಿಗೆ ಲಭ್ಯವಾಗಲಿದೆ. ಅದರಲ್ಲಿ ಬಬಲ್ ಟೀ, ಪಿಂಚ್ ಫಿಂಗರ್, ಬೂಮರಂಗ್, ತೃತೀಯಲಿಂಗಿ ಚಿಹ್ನೆ, ಡೋಡೋ, ಬೀವರ್, ಕಾಯಿನ್, ನೆಸ್ಟಿಂಗ್ ಡಾಲ್, ಅನಾಟಾಮಿಕಲ್ ಹಾರ್ಟ್, ಲಂಗ್ಸ್, ನಿಂಜಾ ಸಹಿತ ಹೊಸ ಆಕರ್ಷಕ ಎಮೋಜಿಗಳನ್ನು ಆ್ಯಪಲ್ ಪರಿಚಯಿಸುತ್ತಿದೆ.
ಮಾತ್ರವಲ್ಲದೆ ಆ್ಯಪಲ್ ಶೀಘ್ರದಲ್ಲಿ ಹೊಸ ರೂಪದ ಸ್ಮೈಲಿಂಗ್ ಫೇಸ್, ಅಲಿಂಗನ, ಕಣ್ಣೀರು, ಕೋಪದ ಭಾವನೆ ಮುಂತಾದ ಇಮೋಜಿಗಳನ್ನು ಬಳಕೆಗೆ ತರುತ್ತಿದೆ. ಇದಿನ್ನೂ ಪರಿಶೀಲನೆಯ ಹಂತದಲ್ಲಿದೆ.
ಗೂಗಲ್ ಕೂಡ ತನ್ನ ಆ್ಯಂಡ್ರಾಯ್ಡ್ ಬಳಕೆದಾರರಿಗೆ 117 ಹೊಸ ಸ್ವರೂಪದ ಇಮೋಜಿಗಳನ್ನು ತರುತ್ತಿದೆ ಎಂದು ವರದಿ ತಿಳಿಸಿದೆ. ಇವುಗಳಲ್ಲಿ ಕೆಲವು ಆ್ಯಪಲ್ ಇಮೋಜಿ ಮಾದರಿಗಳನ್ನೇ ಒಳಗೊಂಡಿದೆ. ಬಬಲ್ ಟೀ, ಪಿಂಚ್ ಫಿಂಗರ್, ನಾಟಾಮಿಕಲ್ ಹಾರ್ಟ್ ಮುಂತಾದವು. ಈ ಇಮೋಜಿಗಳೆಲ್ಲವೂ ಈ ವರ್ಷವೇ ಬಳಕೆಗೆ ಬರಲಿದ್ದು, ಕೆಲವೊಂದು ಕ್ಲಾಸಿಕ್ ಇಮೋಜಿಗಳು ಕೂಡ ಇ ರುವುದು ವಿಶೇಷ. ಮಾತ್ರವಲ್ಲದೆ 62 ಹೊಸ ಕ್ಯಾರೆಕ್ಟರ್ ಗಳು ಈ ಬಾರಿ ಪರಿಚಯವಾಗಲಿದೆ.