Advertisement

2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?

06:10 PM Dec 17, 2024 | Team Udayavani |

2024ಕ್ಕೆ ವಿದಾಯ ಹೇಳಿ ಹೊಸ ವರ್ಷ  ವೆಲ್ ಕಮ್ ಮಾಡುವ ಸಮಯ ಬಂದಾಗಿದೆ. ಹೋಟೆಲ್ ಫುಡ್, ಆನ್ ಲೈನ್ ಆರ್ಡರ್ ಹೊರತಾಗಿಯೂ ನಮ್ಮ ದೇಶದ ಜನರು ಅಡುಗೆ ಮಾಡೋದ್ರಲ್ಲೂ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯೇ ಗೂಗಲ್ ನಲ್ಲಿ ರುಚಿಕರ ಆಹಾರಗಳನ್ನ ತಯಾರಿಸುವ ವಿಧಾನವನ್ನು ಹುಡುಕಿರುವುದು. ಇದೀಗ ಗೂಗಲ್‌ನಲ್ಲಿ ಭಾರತೀಯರು ಅತೀ ಹೆಚ್ಚಾಗಿ ಸರ್ಚ್‌ ಮಾಡಿರುವ ಟಾಪ್‌ ರೆಸಿಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮಸಾಲೆಯುಕ್ತ ಹಾಗೂ ರುಚಿಕರ ರೆಸಿಪಿ ಜೊತೆಗೆ ಹಬ್ಬ- ಹರಿದಿನ, ರಜಾದಿನಗಳಲ್ಲಿ ಮಾಡಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದರಲ್ಲಿ ಮಾವಿನ ಉಪ್ಪಿನಕಾಯಿ ಅಥವಾ ‘ಆಮ್ ಕಾ ಆಚಾರ್’ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದ್ರೆ ಗೂಗಲ್ ನಲ್ಲಿ ಸರ್ಚ್ ಮಾಡಲಾದ ಟಾಪ್ 10 ಆಹಾರಗಳು ಯಾವುದು ಅನ್ನೋ ವಿವರ ಇಲ್ಲಿದೆ..

1.ಪೋರ್ನ್ ಸ್ಟಾರ್ ಮಾರ್ಟಿನಿ( PORNSTAR MARTINI) : ಭಾರತೀಯರು ಈ ವರ್ಷ ಗೂಗಲ್ ನಲ್ಲಿ ಹುಡುಕಾಡಿದ ರೆಸಿಪಿಯಲ್ಲಿ ಪೋರ್ನ್ ಸ್ಟಾರ್ ಮಾರ್ಟಿನಿ ಮೊದಲ ಸ್ಥಾನದಲ್ಲಿದ್ದು, ಫ್ಯಾಶನ್ ಫ್ರೂಟ್, ವೆನಿಲ್ಲಾ ಮತ್ತು ಸ್ಪಾರ್ಕ್ಲಿಂಗ್ ವೈನ್‌ ಈ ಮೂರನ್ನು ಒಟ್ಟು ಸೇರಿಸಿ ಖಾದ್ಯವನ್ನು ತಯಾರಿಸಲಾಗಿದ್ದು ಇದು ಒಂದು ಕ್ಲಾಸಿಕ್ ಕಾಕ್‌ಟೈಲ್ ಆಗಿದೆ.

2.ಊಟದ ರುಚಿ ಹೆಚ್ಚಿಸಿದ ಉಪ್ಪಿನಕಾಯಿ!(MANGO PICKLE)
ಭಾರತೀಯ ಆಹಾರದಲ್ಲಿ ಉಪ್ಪಿನಕಾಯಿಗೆ ವಿಶೇಷ ಸ್ಥಾನವಿದೆ. ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ರೆ ಗಂಟಲಲ್ಲಿ ಇಳಿಯಲ್ವೇನೋ ಎಂಬಂತೆ ಕೆಲವರು ಆಡುತ್ತಾರೆ. ಅಷ್ಟರ ಮಟ್ಟಿಗೆ ಉಪ್ಪಿನಕಾಯಿಯನ್ನು ಇಷ್ಟಪಡುತ್ತಾರೆ. ಉಪ್ಪಿನ ಕಾಯಿಯಲ್ಲೂ ಸಾಕಷ್ಟು ವೆರೈಟಿಗಳಿವೆ. ಅದ್ರಲ್ಲೂ ಮಾವಿನ ಉಪ್ಪಿನ ಕಾಯಿ ಬಹುತೇಕರಿಗೆ ಇಷ್ಟ. ಭಾರತೀಯರು ಉಪ್ಪಿನಕಾಯಿ ತಿನ್ನೋದ್ರ ಜೊತೆಗೆ ಉಪ್ಪಿನಕಾಯಿ ಹೇಗೆ ಮಾಡೋದು ಅನ್ನೋದನ್ನ ಕೂಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ. ಮಾವಿನ ಉಪ್ಪಿನಕಾಯಿ ಪಾಕವಿಧಾನವು 2024 ರಲ್ಲಿ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ರೆಸಿಪಿಗಳಲ್ಲಿಎರಡನೇ ಸ್ಥಾನದಲ್ಲಿದೆ.

Advertisement

3.ಧನಿಯಾ ಪಂಜಿರಿ (DHANIYA PANJIRI):
ಮೂರನೇ ಸ್ಥಾನವನ್ನು ಧನಿಯಾ ಪಂಜಿರಿ ಪಡೆದುಕೊಂಡಿದೆ. ಇದನ್ನು ಸಾಂಪ್ರದಾಯಿಕವಾಗಿ ಕೃಷ್ಣ ಜನ್ಮಾಷ್ಟಮಿಯಂದು ತಯಾರಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಅನೇಕರು ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಜನಪ್ರಿಯ ಆಹಾರವಾದ ಮತ್ತು ದೇವರಿಗೆ ನೈವೇದ್ಯಕ್ಕಿಡುವ ಧನಿಯಾ ಪಂಜಿರಿ ಆಹಾರವನ್ನ ತಯಾರಿಸಲಾಗುತ್ತದೆ. ಇದು ರುಚಿಯ ಜೊತೆಗೆ ಶಕ್ತಿಯನ್ನು ನೀಡುತ್ತದೆ. ಪಾಕವಿಧಾನದಲ್ಲಿನ ಎಲ್ಲಾ ಪದಾರ್ಥಗಳು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿವೆ. ಇದು ಉಪವಾಸದ ಸಮಯದಲ್ಲಿ ಶಕ್ತಿ ನೀಡುತ್ತದೆ. ಇದನ್ನು ತಯಾರಿಸಲು, ಹುರಿದ ಕೊತ್ತಂಬರಿ ಪುಡಿ, ಮಖಾನಾ, ತುರಿದ ತೆಂಗಿನಕಾಯಿ, ಸಕ್ಕರೆ / ಬೆಲ್ಲ ಮತ್ತು ಡ್ರೈ ಫ್ರೂಟ್‌ಗಳಿಂದ ಮಾಡಲಾಗುವುದು. ಈ ವರ್ಷ ಗೂಗಲ್ ನಲ್ಲಿ ಈ ರೆಸಿಪಿ ಮಾಡೋದು ಹೇಗೆ ಎಂದು ಭಾರತೀಯರು ಹುಡುಕಾಡಿದ್ದಾರೆ.

4. ಯುಗಾದಿ ಸ್ಪೆಷಲ್ ಪಚಡಿಗೆ ಫುಲ್ ಡಿಮ್ಯಾಂಡ್! (UGADI PACHADI)
ಹಬ್ಬದ ದಿನ ತಿನ್ನಬೇಕೆಂದೆನಿಸುವ ಅಚ್ಚುಮೆಚ್ಚಿನ ಖಾದ್ಯ ಅಂದ್ರೆ ಪಚಡಿ. ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಈ ತಿನಿಸು ಜನಪ್ರಿಯವಾಗಿದೆ. ಯುಗಾದಿಯ ಶುಭ ಸಂದರ್ಭದಲ್ಲಿ ತಯಾರಿಸಲಾಗುವ ಇದು ಆರು ರುಚಿಗಳ ಸಂಯೋಜನೆಯನ್ನು ನೀಡುತ್ತದೆ. ಬೇವಿನ ಹೂವುಗಳು, ಮಾವು, ಬೆಲ್ಲ, ಮೆಣಸಿನ ಪುಡಿ, ತೆಂಗಿನಕಾಯಿ ಮತ್ತು ಉಪ್ಪನ್ನು ಸೇರಿಸುವ ಮೂಲಕ ಈ ಪಾಕವಿಧಾನವನ್ನು ತಯಾರಿಸಲಾಗುತ್ತದೆ.

5.ಪಂಚಾಮೃತಕ್ಕೆ ಒತ್ತು ಕೊಟ್ಟ ಭಾರತೀಯರು!(CHARNAMRIT)
ಭಾರತದಲ್ಲಿ ಮಾಡುವ ಪವಿತ್ರ ಪಾನೀಯ ಪಂಚಾಮೃತ. ಇದನ್ನು ಶುಭ ಸಂದರ್ಭಗಳಲ್ಲಿ, ಹೆಚ್ಚಾಗಿ ಪೂಜಾ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಇದನ್ನು ಪ್ರಾಥಮಿಕವಾಗಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿದಂತೆ ಐದು ಅಥವಾ ಪಂಚ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದನ್ನು ಮೊದಲು ದೇವತೆಗಳಿಗೆ ಅರ್ಪಿಸಲಾಗುತ್ತದೆ ಮತ್ತು ನಂತರ ಪ್ರಸಾದವಾಗಿ ವಿತರಿಸಲಾಗುತ್ತದೆ. ಗೂಗಲ್ ಸರ್ಚ್ ನಲ್ಲಿ ಹುಡುಕಲಾದ ಪಾಕ ವಿಧಾನಗಳಲ್ಲಿ ಪಂಚಾಮೃತ ಐದನೇ ಸ್ಥಾನ ಪಡೆದಿದೆ.

6. ಎಮಾ ದಟ್ಶಿ(EMA DATSHI)
ಭೂತಾನ್‌ನಲ್ಲಿ ಅತೀ ಹೆಚ್ಚು ಫೇಮಸ್ ಆಗಿರುವ ಖಾದ್ಯವೆಂದ್ರೆ ಅದು ಎಮಾ ದಟ್ಶಿ. 2024 ರಲ್ಲಿ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ರೆಸಿಪಿಗಳಲ್ಲಿ ಎಮಾ ದಟ್ಶಿ 6 ನೇ ಸ್ಥಾನ ಪಡೆದಿದೆ. ಅದಲ್ಲದೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೂ ಈ ರೆಸಿಪಿ ತುಂಬಾನೇ ಇಷ್ಟವಂತೆ. ಹಸಿಮೆಣಸಿನಕಾಯಿ, ಎಣ್ಣೆ,ಬೆಳ್ಳುಳ್ಳಿ, ಟೊಮೆಟೊ ಮತ್ತು ಚೀಸ್‌ ನಿಂದ ಮಾಡುವ ಈ ಖಾದ್ಯ ಜನಪ್ರಿಯತೆಗಳಿಸಿದೆ.

7. ಫ್ಲಾಟ್ ವೈಟ್ (FLAT WHITE)
ಎಸ್ಪ್ರೆಸೊ(Espressos) ಮತ್ತು ಕುದಿಸಿದ ಹಾಲನ್ನು ಬಳಸಿ ತಯಾರಿಸಲಾಗುವ ಪಾನೀಯವಾಗಿದೆ. ಈ ವರ್ಷ ಗೂಗಲ್ ನಲ್ಲಿ ಈ ರೆಸಿಪಿ ಮಾಡೋದು ಹೇಗೆ ಎಂದು ಭಾರತೀಯರು ಹುಡುಕಾಡಿದ್ದಾರೆ.

8. ಕಾಂಜಿ ( KANJI)
ಕಾಂಜಿಯು ಹೋಳಿ ಸಮಯದಲ್ಲಿ ತಯಾರಿಸಲಾದ ಪಾನೀಯವಾಗಿದ್ದು, ನೀರು, ಕ್ಯಾರೆಟ್, ಬೀಟ್ರೂಟ್, ಸಾಸಿವೆ ಮತ್ತು ಇಂಗಿನಿಂದ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಈ ವರ್ಷ ಭಾರತೀಯರು ಗೂಗಲ್ ನಲ್ಲಿ ಹೆಚ್ಚು ಹುಡುಕಾಡಿದ್ದಾರೆ.

9.ಶಂಕರಪಾಲಿ(SHANKARPALI)
ಶಂಕರಪಾಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಜನಪ್ರಿಯವಾದ ಖಾದ್ಯಗಳಲ್ಲಿ ಒಂದು. ಇದು ಗೋಧಿಹಿಟ್ಟಿನಿಂದ ತಯಾರಿಸುವ ತಿನಿಸಾಗಿದ್ದು ,ತಿನ್ನಲು ಅಷ್ಟೇ ರುಚಿಕರ. ಹಾಗಾಗಿ ಗೂಗಲ್ ನಲ್ಲಿ ಭಾರತೀಯರು ಅತೀ ಹೆಚ್ಚಾಗಿ ಹುಡುಕಿರುವುದು.

10. ಚಮ್ಮಂತಿ ಪೋಡಿ(CHAMMANTHI PODI)
ಇದು ಕೇರಳ ಶೈಲಿಯ ಚಟ್ನಿಯಾಗಿದ್ದು, ತೆಂಗಿನಕಾಯಿ, ಈರುಳ್ಳಿ, ಶುಂಠಿ, ಕರಿಬೇವಿನ ಎಲೆಗಳು, ಒಣ ಮೆಣಸಿನಕಾಯಿ ಮತ್ತು ತೆಂಗಿನ ಎಣ್ಣೆಯಿಂದ ಮಾಡಿದ ತಾಜಾ ಚಟ್ನಿಯಾಗಿದ್ದು, ಪಟ್ಟಿಯಲ್ಲಿ 10 ನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next