Advertisement

“ಕೋಮುವಾದಿ’ಕರೆಸಿಕೊಳ್ಳುವುದು ಇಲ್ಲಿ  ಮಾತ್ರ

08:51 AM Nov 22, 2017 | Team Udayavani |

ಉಡುಪಿ: ಭಾರತ ದೇಶದಲ್ಲಿ “ಹಿಂದೂ’ ಎಂದವರನ್ನು “ಕಮ್ಯೂನಲ್‌’ (ಕೋಮುವಾದಿ) ಎಂದು ಕರೆಯಲಾಗುತ್ತದೆ. ಇಂತಹ ಸ್ಥಿತಿ ಭಾರತದಲ್ಲಿ ಮಾತ್ರವೇ ಇದೆ ಎಂದು ಮಣಿಪಾಲ ಗ್ಲೋಬಲ್‌ ಎಜು ಕೇಶನ್‌ನ ಚೇರ್‌ಮನ್‌ ಟಿ.ವಿ. ಮೋಹನದಾಸ ಪೈ ಹೇಳಿದರು.

Advertisement

ಅವರು ಮಂಗಳವಾರ ಉಡುಪಿ ಕಲ್ಸಂಕ ರೋಯಲ್‌ ಗಾರ್ಡನ್‌ನಲ್ಲಿ ಧರ್ಮಸಂಸದ್‌ ಕಚೇರಿ ಉದ್ಘಾಟಿಸಿ ಮಾತನಾಡಿದರು. ಬೇರೆ ದೇಶಗಳಲ್ಲಿ ಅಲ್ಲಿನ ಬಹು ಸಂಖ್ಯಾಕ ಜನರು ಒಂದಾಗಿ ನಾವು ಕ್ರೈಸ್ತ ಅಥವಾ ಬೇರೆ ಧರ್ಮವನ್ನು ಅನುಸರಿಸುವವರು ಎಂದು ಹೇಳಿ ಕೊಂಡರೆ ಅವರನ್ನು ಯಾರು ಕೂಡ ಕೋಮು ವಾದಿಗಳು ಎಂದು ಕರೆ ಯುವು ದಿಲ್ಲ. ಆದರೆ ಭಾರತ ದಲ್ಲಿ ಹಿಂದೂ ಎಂದರೆ ಅವ ನನ್ನು ಕೋಮು ವಾದಿ ಎಂದು ಕರೆಯಲಾಗುತ್ತದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಕಾರಣ. ರಾಜಕೀಯ ಪಕ್ಷಗಳು ಓಟ್‌ಬ್ಯಾಂಕ್‌ಗಾಗಿ ನಮ್ಮನ್ನು ವಿಭಜಿ ಸಿವೆ. ಹಿಂದೂಗಳು ಒಂದಾದರೆ ಮಾತ್ರ ಹಿಂದೂಗಳ ಬೇಡಿಕೆಯನ್ನು ಸರಕಾರ ಗಳು ಈಡೇರಿಸುತ್ತವೆ ಎಂದು ಮೋಹನದಾಸ ಪೈ ಹೇಳಿದರು.

ಹಿಂದೂಗಳ ಸಂಖ್ಯೆ ಇಳಿಕೆ
ಸ್ವಾತಂತ್ರ್ಯ ದೊರೆತಾಗ ಭಾರತದಲ್ಲಿ ಶೇ. 85ರಷ್ಟು ಹಿಂದೂಗಳಿದ್ದರು. ಆದರೆ ಈಗ ಅದು ಶೇ. 77ಕ್ಕೆ ಇಳಿ ದಿದೆ. ಇದಕ್ಕೆ ಮತಾಂತರ ಕಾರಣ. ಮತಾಂ ತರ  ಕ್ಕಾಗಿ ಅಮೆರಿಕ, ಯುರೋಪ್‌ ನಿಂದ ವರ್ಷಕ್ಕೆ 12,000 ಕೋ.ರೂ. ಹರಿದು ಬರು ತ್ತದೆ ಎಂಬ ಮಾಹಿತಿ ಇದೆ. ಬಡವ ರನ್ನು ಮತಾಂತರ ಮಾಡ ಲಾಗುತ್ತಿದೆ. ಕಮ್ಯುನಿಸ್ಟ್‌ , ಎಡ ಪಂಥೀಯ ವಾಗಿ ಇರುವ ಮೀಡಿಯಾ ಗಳನ್ನು ಕೂಡ ಅವರ ಪರವಾಗಿ ಬಳಸ ಲಾಗುತ್ತಿದೆ ಎಂದು ಹೇಳಿದರು.

ಹೀಯಾಳಿಸುವವರಿಗೆ ಉತ್ತರಿಸಿ
ಭಾರತದಲ್ಲಿ 3 ಕೋಟಿ ದೇವರಿದ್ದಾರೆ ಎಂದು ಕೆಲವು ಪಾಶ್ಚಾತ್ಯ ಬರಹಗಾರರು ಹೀಯಾಳಿಸುತ್ತಾರೆ. ನಿಜವಾಗಿ ಇರು ವುದು ಒಬ್ಬರೇ ದೇವರು. ನಮ್ಮ ಇಷ್ಟದೇವತಾ ಪರಿಕಲ್ಪನೆ, ತಣ್ತೀ ಅವರಿಗೆ ಅರ್ಥವಾಗುವುದಿಲ್ಲ. ಜವಾಹರ್‌ ಲಾಲ್‌ ವಿ.ವಿ.ಯಲ್ಲಿ ಶಿಕ್ಷಣ ಪಡೆದ ಕೆಲವು ಮಂದಿ ಕೂಡ ಹಿಂದೂ ಧರ್ಮ ವೆಂಬುದು ಧರ್ಮವೇ ಅಲ್ಲ ಎಂದು ವಾದಿಸುತ್ತಾರೆ. ಅವರಿಗೆ ಅರ್ಥ ಮಾಡಿಸಿಕೊಡುವ ಆವಶ್ಯಕತೆ ಇದೆ. ಕೆಲವು ಆಂಗ್ಲಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೂ ಹಿಂದೂ ಧರ್ಮ, ಸಂಸ್ಕೃತಿ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಂತಾಗಿದೆ. 5ರಿಂದ 6 ಸಾವಿರದಷ್ಟು ಇತಿಹಾಸವಿರುವ ಹಿಂದೂ ಧರ್ಮದ ಶ್ರೇಷ್ಠತೆಯ ಕುರಿತು ಮಕ್ಕಳು, ಯುವಕರಿಗೆ ತಿಳಿಸ ಬೇಕು. ಟೀಕಿಸುವವರಿಗೆ ಸಮರ್ಥ ವಾಗಿ ಉತ್ತರಿಸಬೇಕು. ಹಿಂದೂಗಳು ಒಂದಾಗಬೇಕು. ಶಿಕ್ಷಣ, ಮಹಿಳೆಯರ ಸುರಕ್ಷತೆ, ಬಡತನ ನಿವಾರಣೆಗೆ ಆದ್ಯತೆ ನೀಡಬೇಕು. ಹಿಂದೂ ಸಮಾಜದ ಒಗ್ಗಟ್ಟಿಗೆ ಇಂತಹ ಧರ್ಮಸಂಸದ್‌ಗಳು ಅಲ್ಲಲ್ಲಿ ನಡೆದು ಸಂತರು, ಹಿರಿಯ ರಿಂದ ಮಾರ್ಗದರ್ಶನ ದೊರೆ ಯು ವಂತಾಗಬೇಕು ಎಂದು ಮೋಹನ್‌ದಾಸ್‌ ಪೈ ಹೇಳಿದರು. 

ಬಲಿಷ್ಠವಾಗುತ್ತಿದೆ ಭಾರತ 
ಸರಕಾರದ ಪ್ರಯತ್ನದಿಂದ ದೇಶದ ಆರ್ಥಿಕ ಬೆಳವಣಿಗೆ ವೇಗವಾಗಿದೆ. ಜಿಡಿಪಿ ದರ 2030ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಲಿದೆ. ವಿಶ್ವದ ಮೂರನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮಲಿದೆ ಎಂದರು ಪೈ. ವಿಹಿಂಪ ಕೇಂದ್ರೀಯ ಕಾರ್ಯ ದರ್ಶಿ ರಾಜೇಂದ್ರ ಪಂಕಜ್‌, ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್‌ ಜಿ., ಪ್ರಾಂತ ಕಾರ್ಯದರ್ಶಿ ಟಿ.ಎ.ಪಿ. ಶೆಣೈ, ಜಿಲ್ಲಾಧ್ಯಕ್ಷ ವಿಲಾಸ್‌ ನಾಯಕ್‌ ಉಪಸ್ಥಿತರಿದ್ದರು. ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌ ಸ್ವಾಗತಿಸಿ ಭಾಗ್ಯಶ್ರೀ ಐತಾಳ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸಿಂಹ ಗರ್ಜನೆಯ ದಿನ
ನಮ್ಮತನವನ್ನು ನಾವು ಅರಿತುಕೊಳ್ಳದೆ ಯಾರೋ ಏನೋ ಅಂದಾಗ ಕಸಿವಿಸಿ ಗೊಂಡು ಸುಮ್ಮನಾಗುತ್ತೇವೆ. ಅಂತಃಸತ್ವ ಅರಿತುಕೊಳ್ಳದೆ ಕೊರಗು ತ್ತಿದ್ದೇವೆ. ಸಂತ, ಮಹಂತರ ಮಾರ್ಗದರ್ಶನದಲ್ಲಿ ನಡೆಯುವ ಧರ್ಮ ಸಂಸತ್ತಿನಲ್ಲಿ ನಮ್ಮತನ ವನ್ನು ಮತ್ತೆ ಕಂಡುಕೊಂಡು ಸಿಂಹಗರ್ಜನೆ ಹೊರಡಿ ಸುವ ದಿನ ಹತ್ತಿರ ವಾಗಿದೆ ಎಂದು ಆಶೀರ್ವಚನ ನೀಡಿದ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next