Advertisement

ಇಲ್ಲಿ ಎಲ್ಲರ ಜನ್ಮ ದಿನಾಂಕವೂ ಜ.1: ಆಧಾರ್‌ ಎಡವಟ್ಟು!

11:17 AM May 21, 2017 | Team Udayavani |

ಅಲಹಾಬಾದ್‌: ಒಂದು ಊರಿನಲ್ಲಿ 10,000 ಜನರಿದ್ದರೆ ಅದರಲ್ಲಿ ಎಷ್ಟು ಜನರು ಒಂದೇ ದಿನ ಜನಿಸಲು ಸಾಧ್ಯ? ಹೆಚ್ಚೆಂದರೆ 100 ಜನ ಇರಬಹುದಾ?

Advertisement

ಆದರೆ, ಉತ್ತರ ಪ್ರದೇಶದ 10,000 ಜನಸಂಖ್ಯೆ ಇರುವ ಹಳ್ಳಿಯೊಂದರಲ್ಲಿ ಎಲ್ಲ 10,000 ಜನರೂ ಜ. 1ರಂದೇ ಜನಿಸಿದ್ದಾರೆ. ಹೀಗೆಂದು ಅವರ ಆಧಾರ್‌ ಕಾರ್ಡ್‌ ಹೇಳುತ್ತಿದೆ. ಅಲಹಾಬಾದ್‌ ಬಳಿಯ ಕಂಜಾಸ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಎಲ್ಲರ ಗುರುತಿನ ಚೀಟಿ ಮೇಲೂ ಅವರ ಅಧಿಕೃತ ಜನ್ಮ ದಿನಾಂಕ ಜ.1 ಎಂದು ಇರುವುದು ಗ್ರಾಮಸ್ಥರ ಗಮನಕ್ಕೂ ಬಂದಿರಲಿಲ್ಲ.

ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ದಾಖಲಿಸಿಕೊಳ್ಳಲು ಗ್ರಾಮಕ್ಕೆ ಬಂದಾಗಲೇ ವಿಷಯ ಗೊತ್ತಾದದ್ದುª. ಇದು ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕುಪಿತರಾಗಿದ್ದಾರೆ. ಆಧಾರ್‌ ಗುರುತಿನ ಚೀಟಿ ಹೊಂದಲು ನಾವು ಬಹಳ ದಿನ ಕಾದಿದ್ದೇವೆ. ಬಿಸಿಲಲ್ಲಿ ದಿನಗಟ್ಟಲೆ ನಿಂತಿದ್ದೇವೆ. ಆದರೆ ನಮ್ಮ ಜನ್ಮ ದಿನಾಂಕ ನಮೂದಿಸುವಾಗ ಏಕೆ ಇಂಥ ತಪ್ಪು ನಡೆದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next