Advertisement
ಕೆಳ ಹೊಸೂರಿನ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಲಲಿತಾಚಂದ್ರ ಪಟಗಾರ ಮತ್ತು ಐಟಿಐ ಶಿಕ್ಷಕ ಶಿವಾನಂದಯ್ಯ ಹಿರೇಮಠ ದಂಪತಿ ತಾವು ಸಾಕಿ ಸಲಹಿದ ಗೋವು ವಯೋಸಹಜವಾಗಿ ಮೊನ್ನೆ ಗೋಕುಲಾಷ್ಟಮಿಯಂದೇ ಮೃತಪಟ್ಟಿತು. ಪುರೋಹಿತರನ್ನು ಕರೆಸಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಪೂರೈಸಿದ ದಂಪತಿ ಅಷ್ಟಕ್ಕೇ ತಮ್ಮ ಹಸುವನ್ನು ಮರೆತುಬಿಡಲಿಲ್ಲ; ಬದಲಿಗೆ ಮನೆಯಂಗಳದಲ್ಲಿ ಅದಕ್ಕೊಂದು ಪುಟ್ಟ ಗುಡಿ ಕಟ್ಟಿಸಿ ಅದರ ಕರು ಸಹಿತವಾದ ಪಂಚಲೋಹದ ಮೂರ್ತಿಯನ್ನಿಟ್ಟು ಪೂಜಿಸಲಾರಂಭಿಸಿದ್ದಾರೆ. ಪ್ರತಿದಿನ ಬೆಳಗ್ಗೆ – ಸಂಜೆ ಪೂಜೆ ನಡೆಯುತ್ತದೆ. ಈ ಮೂಲಕ ಅಮೃತ ಸದೃಶ ಹಾಲನ್ನು ನೀಡಿ ನಮ್ಮನ್ನು ಸಲಹುವ ಗೋಮಾತೆ ಸಾವಿನ ಬಳಿಕವೂ ಪೂಜನೀಯ ಎಂಬುದನ್ನು ಈ ದಂಪತಿ ಸಾರಿದ್ದಾರೆ. Advertisement
ಇಲ್ಲೊಂದು ಗೋ ದೇಗುಲ!ಮಮತೆಯ ಗೋಮಾತೆಗೆ ಗುಡಿ ಕಟ್ಟಿದ ದಂಪತಿ
12:32 AM Sep 02, 2019 | Sriram |
Advertisement
Udayavani is now on Telegram. Click here to join our channel and stay updated with the latest news.