Advertisement
ಒಂದು ಸಿನಿಮಾ ಎರಡೂವರೆ ಗಂಟೆಗಿಂತ ಜಾಸ್ತಿ ಇದ್ದರೂ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಇದರ ಜೊತೆ ಕೆಲವೊಮ್ಮೆ ಸಿನಿಮಾ ಚೆನ್ನಾಗಿಲ್ಲ ಎಂದು ಅರ್ಧದಲ್ಲೇ ಥಿಯೇಟರ್ ನಿಂದ ಜನ ವಾಪಾಸ್ ಬರುತ್ತಾರೆ. ಬಾಲಿವುಡ್ ನಲ್ಲಿ ಒಂದು ಸಿನಿಮಾ 3 ಗಂಟೆಗಿಂತ ಹೆಚ್ಚಿನ ಅವಧಿ ಹೊಂದಿರುವುದು ಇದೇ ಮೊದಲಲ್ಲ. ಸುದೀರ್ಘ ಅವಧಿ ಹೊಂದಿರುವ ಬಾಲಿವುಡ್ ನ 7 ಸಿನಿಮಾಗಳ ಪಟ್ಟಿ ಇಲ್ಲಿದೆ.
Related Articles
Advertisement
ಮೊಹಬ್ಬತೇನ್ (2000) : ಶಾರುಖ್ ಖಾನ್ ಸಿನಿ ಕೆರಿಯರ್ ನಲ್ಲಿ ರೊಮ್ಯಾಂಟಿಕ್ ಹಿಟ್ ಕೊಟ್ಟ ಸಿನಿಮಾಗಳಲ್ಲಿ ʼ ಮೊಹಬ್ಬತೇನ್ʼ ಸಿನಿಮಾ ಕೂಡ ಒಂದು. ಗುರುಕುಲದಲ್ಲಿ ಹುಟ್ಟುವ ಸಿನಿಮಾದ ಕಥೆ ಅಂದಿನ ಕಾಲದಲ್ಲಿ ಪ್ರೇಕ್ಷಕರ ಮನಗೆದ್ದಿತ್ತು. ಲವ್ ಸ್ಟೋರಿ ಸಿನಿಮಾವಾಗಿ ಬಾಲಿವುಡ್ ನಲ್ಲಿ ʼ ಮೊಹಬ್ಬತೇನ್ʼ ಇಂದಿಗೂ ಎವರ್ ಗ್ರೀನ್ ಸಿನಿಮಾವಾಗಿದೆ. ಆದಿತ್ಯ ಚೋಪ್ರಾ ನಿರ್ದೇಶನದ ಈ ಸಿನಿಮಾದ ರನ್ ಟೈಮ್ 3 ಗಂಟೆ 36 ನಿಮಿಷ ಇತ್ತು. ಆದರೂ ಥಿಯೇಟರ್ ನಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ಲಗಾನ್: ಒನ್ಸ್ ಅಪಾನ್ ಎ ಟೈಮ್ ಇನ್ ಇಂಡಿಯಾ: (2001): ಆಮಿರ್ ಖಾನ್ ಕೆರಿಯರ್ ನಲ್ಲಿ ಬಿಗ್ ಹಿಟ್ ಕೊಟ್ಟ ಹಾಗೂ ಕ್ರಿಕೆಟ್ ಕಥಾಹಂದರದ ಸಿನಿಮಾವಾಗಿ ಹಿಟ್ ಕೊಟ್ಟ ಸಿನಿಮಾಗಳಲ್ಲಿ ಎವರ್ ಗ್ರೀನ್ ಆಗಿ ನಿಲ್ಲು ʼಲಗಾನ್ʼ ಸಿನಿಮಾವನ್ನು ಅಶುತೋಷ್ ಗೋವಾರಿಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಹಿಟ್ ಜೊತೆಗೆ ಆಸ್ಕರ್ ಗೆ ಹೋಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಸಿನಿಮಾದ ಅವಧಿ ನಿಜವಾಗಿಯೂ ಕ್ರಿಕೆಟ್ ಮ್ಯಾಚ್ ನ ಅವಧಿಯಂತೆ ದೀರ್ಘವಾಗಿತ್ತು. 3 ಗಂಟೆ 44 ನಿಮಿಷ ಸಿನಿಮಾದ ಅವಧಿ ಇತ್ತು.
ಮೇರಾ ನಾಮ್ ಜೋಕರ್: (1970) : ರಾಜ್ ಕಪೂರ್ ಅವರ ವೃತ್ತಿ ಬದುಕಿನಲ್ಲಿ ಈ ಸಿನಿಮಾ ವಿಶೇಷ ಸಿನಿಮಾ. ಡ್ರೀಮ್ ಪ್ರಾಜೆಕ್ಟ್ ಸಿನಿಮಾವಾಗಿತ್ತು. ಆದರೆ ಅಂದುಕೊಂಡ ಮಟ್ಟಿಗೆ ಸಿನಿಮಾ ಕ್ಲಿಕ್ ಆಗಿಲ್ಲ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ಇದೊಂದು ಇದು ಬರೀ ಸಿನಿಮಾವಲ್ಲ ಒಂದು ಎಮೋಷನ್ ಎನ್ನುವುದು ಇಂದಿಗೂ ಅನೇಕರ ಅಭಿಪ್ರಾಯ. ಸಿನಿಮಾ ರಿಲೀಸ್ ವೇಳೆ ರಾಜ್ ಕಪೂರ್ ಅವರ ಅಭಿನಯಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಆ ವೇಳೆ ಸಿನಿಮಾದ ಅವಧಿ ಬಗ್ಗೆಯೂ ಸುದ್ದಿಯಾಗಿತ್ತು. 4 ಗಂಟೆ 4 ನಿಮಿಷ ಅವಧಿಯನ್ನು ಹೊಂದಿದ್ದ ʼಮೇರಾ ನಾಮ್ ಜೋಕರ್ʼ ಬಹುಶಃ ಇಂದಿನ ಕಾಲದಲ್ಲಿ ಬಿಡುಗಡೆ ಆಗಿದ್ದರೆ, ಅದರ ರನ್ ಟೈಮ್ ಕಾರಣದಿಂದ ಒಂದು ವೆಬ್ ಸಿರೀಸ್ ಆಗಿ ರಿಲೀಸ್ ಆಗುತ್ತಿತ್ತೋ ಏನೋ.
ಗ್ಯಾಂಗ್ಸ್ ಆಫ್ ವಾಸೇಪುರ್: (2012): ಅನುರಾಗ್ ಕಶ್ಯಪ್ ಅವರ ಕ್ರೈಮ್ ಡ್ರಾಮಾ ʼ ಗ್ಯಾಂಗ್ಸ್ ಆಫ್ ವಾಸೇಪುರ್ʼ ಸಿನಿಮಾ ಲವ್, ರೊಮ್ಯಾನ್ಸ್, ಕ್ರೈಮ್ ಹೀಗೆ ಎಲ್ಲಾ ಆಯಾಮದಲ್ಲೂ ಸಾಗುವ ಸಿನಿಮಾ. ಕ್ರೈಮ್ ನ್ನು ತುಸು ಹೆಚ್ಚಾಗಿಯೇ ಸಿನಿಮಾದಲ್ಲಿ ತೋರಿಸಲಾಗಿದೆ. ಎರಡು ಭಾಗಗದಲ್ಲಿ ತೆರೆಕಂಡ ಸಿನಿಮಾದ ಹಿಂದಿನ ಅಸಲಿ ಕಹಾನಿಯೇ ಬೇರೆ. ನಿರ್ದೇಶಕ ಅನುರಾಗ್ ಕಶ್ಯಪ್ ಮೊದಲು ʼ ಗ್ಯಾಂಗ್ಸ್ ಆಫ್ ವಾಸೇಪುರ್ʼ ಸಿನಿಮಾವನ್ನು ಒಂದೇ ಪಾರ್ಟ್ ನಲ್ಲಿ ರಿಲೀಸ್ ಮಾಡುವವರಿದ್ದರು. ಆದರೆ ಅದರ ಅವಧಿ ಕೇಳಿ ಥಿಯೇಟರ್ ಮಾಲಕರು ಸಿನಿಮಾವನ್ನು ರಿಲೀಸ್ ಮಾಡಲು ಮುಂದೆ ಬರಲಿಲ್ಲ. ಮೊದಲು ಈ ಸಿನಿಮಾದ ಅವಧಿ 5 ಗಂಟೆ 19 ನಿಮಿಷ ಇತ್ತು. ಥಿಯೇಟರ್ ಮಾಲಕರು ಇಷ್ಟು ದೀರ್ಘ ರನ್ ಟೈಮ್ ಇರುವ ಸಿನಿಮಾವನ್ನು ರಿಲೀಸ್ ಮಾಡಲು ಒಪ್ಪದಿದ್ದಾಗ, ಅನಿವಾರ್ಯವಾಗಿ ಅನುರಾಗ್ ಎರಡು ಭಾಗಗಳಾಗಿ ಸಿನಿಮಾವನ್ನು ರಿಲೀಸ್ ಮಾಡುವ ಯೋಜನೆಯನ್ನು ಹಾಕಿಕೊಂಡರು.