Advertisement
1.ರಿಬ್ಬನ್ ಪಕೋಡಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿಹಿಟ್ಟು, 1ಕಪ್ ಕಡಲೆಹಿಟ್ಟು, 1ಚಮಚ ಎಳ್ಳು, 1/2ಚಮಚ ಜೀರಿಗೆ ಪುಡಿ, 1/4ಚಮಚ ಅರಶಿನ ಪುಡಿ, 1 ಚಮಚ ಖಾರದ ಪುಡಿ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ನೀರು.
ಬೇಕಾಗುವ ಸಾಮಗ್ರಿ: ತೆಳು ಅವಲಕ್ಕಿ 1/2 ಕಪ್, ತೆಳುವಾಗಿ ಕತ್ತರಿಸಿದ ಒಣ ಕೊಬ್ಬರಿ 1/4 ಕಪ್, ಹುರಿಗಡಲೆ 1/2 ಕಪ್,ಶೇಂಗಾ 1/2 ಕಪ್, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸ್ವಲ್ಪ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 3-4, ಅರಿಶಿನ 1/2 ಚಮಚ, ಎಣ್ಣೆ 5 ಚಮಚ, ಸಕ್ಕರೆ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
Related Articles
Advertisement
3. ಬೆಂಡೆಕಾಯಿ ಕುರ್ಕುರೆಬೇಕಾಗುವ ಸಾಮಗ್ರಿ: ಬೆಂಡೆಕಾಯಿ 1ಕೆ.ಜಿ., ಕಡಲೆಹಿಟ್ಟು 1/2 ಕಪ್, ಅಕ್ಕಿ ಹಿಟ್ಟು 1/4 ಕಪ್, ಅಜವಾನ 1ಚಮಚ (ಬೇಕಿದ್ದರೆ) ಅರಿಶಿನ 1ಚಮಚ, ಖಾರದ ಪುಡಿ 1ಚಮಚ, ಆಮ್‌ಚೂರ್ ಪೌಡರ್ 1/2 ಚಮಚ, ಜೀರಿಗೆ ಪುಡಿ 1ಚಮಚ,
ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು. ಮಾಡುವ ವಿಧಾನ: ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಪೂರ್ತಿ ನೀರು ಹೋಗುವವರೆಗೂ ಒಣಹಾಕಿ. ನಂತರ ತುದಿ ಭಾಗವನ್ನು ತೆಗೆದು ಮೇಲಿಂದ ಕೆಳಕ್ಕೆ ಉದ್ದಕ್ಕೆ ಸೀಳಿ, ಮಧ್ಯ ಇರುವ ತಿರುಳು ಮತ್ತು ಬೀಜವನ್ನು ತೆಗೆಯಿರಿ. ನಂತರ ಒಂದೇ ಅಳತೆಯ ಉದ್ದುದ್ದ ತುಂಡುಗಳನ್ನು ಮಾಡಿ ಪಾತ್ರೆಗೆ ಹಾಕಿ. ಮೇಲೆ ಹೇಳಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಐದು ನಿಮಿಷ ಹಾಗೆ ಬಿಡಿ. ಆ ಮಿಶ್ರಣವನ್ನು ಬೆಂಡೆಕಾಯಿ ಪಾತ್ರೆಗೆ ಹಾಕಿ ಮಿಶ್ರಣ ಮಾಡಿ. ಒಲೆ ಮೇಲೆ ಎಣ್ಣೆಯಿಟ್ಟು, ಬೆಂಡೆಕಾಯಿ ಮಸಾಲೆಯನ್ನು ಬಿಡಿ ಬಿಡಿಯಾಗಿ ಉದುರಿಸಿ. ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡೂ ಬದಿ ಗರಿ ಗರಿಯಾದ ಮೇಲೆ ಬಾಣಲೆಯಿಂದ ತೆಗೆಯಿರಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ಹದಿನೈದು ದಿನ ಇಡಬಹುದು. 4.ಜಾಲ್ ಮುರೈ/ಜಾಲ್ ಮುರಿ ಬೇಕಾಗುವ ಸಾಮಗ್ರಿ: ಮಂಡಕ್ಕಿ- 4 ಕಪ್, 1/4 ಕಪ್ ಸೇವ್, 1/4 ಕಪ್ ಶೇಂಗಾ, ಬೇಯಿಸಿದ ಆಲೂಗಡ್ಡೆ 1/2 ಕಪ್, ಸೌತೆಕಾಯಿ 1/2 ಕಪ್, ಹಸಿಮೆಣಸಿನಕಾಯಿ 2, ಕೊತ್ತಂಬರಿ ಸೊಪ್ಪು ಸ್ವಲ್ಪ, ಟೊಮೆಟೊ 1/2ಕಪ್, ಕ್ಯಾರೆಟ್ ತುರಿ 1/2ಕಪ್, ಹುಣಸೆ ರಸ 1/4 ಕಪ್, ಸಾಸಿವೆ ಎಣ್ಣೆ 3 ಚಮಚ, ಜೀರಿಗೆ ಪುಡಿ 3 ಚಮಚ, ಉಪ್ಪು 1 ಚಮಚ, ಅಮ್‌ಚೂರ್ ಪೌಡರ್ 1 ಚಮಚ, ಖಾರದ ಪುಡಿ 1 ಚಮಚ, ಗರಂ ಮಸಾಲೆ 1 ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ 1 ಚಮಚ. ಮಾಡುವ ವಿಧಾನ: ಮೊದಲು ಆಲೂಗಡ್ಡೆಯನ್ನು ಹದವಾಗಿ ಬೇಯಿಸಿ ಕತ್ತರಿಸಿಟ್ಟುಕೊಳ್ಳಿ.ಕ್ಯಾರೆಟ್ ತುರಿದು, ಟೊಮೆಟೊ, ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹುಣಸೆ ರಸ ತಯಾರಿಸಿ ಮಸಾಲೆ ಪದಾರ್ಥಗಳನ್ನು ಅದರಲ್ಲಿ ಹಾಕಿ. ಅವುಗಳು ಹುಣಸೆ ರಸದಲ್ಲಿ ಚೆನ್ನಾಗಿ ಮಿಶ್ರಣವಾಗಬೇಕು. ಒಂದು ಬಾಣಲೆಗೆ ಮಂಡಕ್ಕಿ ಹಾಕಿ ಎರಡರಿಂದ ಮೂರು ನಿಮಿಷ ಹುರಿಯಿರಿ.ಶೇಂಗಾ ಬೀಜವನ್ನೂ ಹುರಿದುಕೊಳ್ಳಿ. ದೊಡ್ಡದಾದ ಪಾತ್ರೆಯಲ್ಲಿ ಹುರಿದ ಪದಾರ್ಥ ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ, ಸಾಸಿವೆ ಎಣ್ಣೆ ಹಾಕಿ ಮಿಶ್ರಣ ಮಾಡಿ. ನಂತರ ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ಈಗ ರುಚಿರುಚಿಯಾದ ಜಾಲ್ ಮುರೈ ಸವಿಯಲು ಸಿದ್ಧ.