Advertisement
ಕಪ್ಪು ಕಲೆಯಾಗಲು ಕಾರಣದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದ ತೂಕ ಹೆಚ್ಚಾಗುವ ಸಂದರ್ಭದಲ್ಲಿ ಕತ್ತಿನ ಭಾಗದಲ್ಲಿ ಚರ್ಮವು ವಿಸ್ತಾರಗೊಳ್ಳುತ್ತದೆ. ಚರ್ಮದ ಮೇಲೆ ಧೂಳಿನ ಕಣಗಳು ಕೂತು ಅದು ದೇಹದಲ್ಲಿ ಕಪ್ಪುಕಲೆಯನ್ನು ಉಂಟುಮಾಡುತ್ತದೆ. ಗರ್ಭಿಣಿಯರೂ ಬಾಣಂತಿಯಾದ ಬಳಿಕ ದೇಹದ ತೂಕ ಇಳಿದಾಗ ಈ ಕಲೆ ಅವರಿಗೆ ಕಿರಿಕಿರಿ ಅನುಭವ ನೀಡುತ್ತದೆ. ಮಕ್ಕಳು ಹೊರಗಡೆ ಜಾಸ್ತಿ ಆಟವಾಡಿದಾಗ ಬೆವರು ಮತ್ತು ಧೂಳಿನ ಪ್ರದೂಷಣೆ ಮಕ್ಕಳಲ್ಲಿ ಕಪ್ಪು ಕಲೆಯನ್ನು ಉಂಟು ಮಾಡಿ ಹೆತ್ತವರಿಗೂ ತಲೆ ನೋವಿನ ಅನುಭವವನ್ನು ನೀಡುತ್ತದೆ.
ಹಿಂದಿನಿಂದಲೂ ಜೇನು ತುಪ್ಪ ಮತ್ತು ಕಾಫಿ ಪುಡಿಯನ್ನು ಸೌಂದರ್ಯ ವೃದ್ಧಿಗೆ ಬಳಸುವ ವಾಡಿಕೆ ಇತ್ತು. ಜೇನು ತಿನ್ನಲು ಸಿಹಿಯಾಗಿರುತ್ತದೆ ಅದೇ ರೀತಿ ಇದರಲ್ಲಿ ರಿಬೋಫ್ಲೇವಿಸ್, ಥಾಯಾಮಿನ್, ಲವಣ ಮತ್ತು ಖನಿಜ ಸತ್ವಗಳು ಹೇರಳವಾಗಿ ಲಭ್ಯವಿದ್ದು ಮಖದ ಕಾಂತಿಗೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕಾಫಿ ಪುಡಿಯೂ ತ್ವಚೆಯ ಧೂಳನ್ನು ಹೊರಗೊಳಿಸುವ ಕಾರಣದಿಂದ ಇದನ್ನು ಸಹ ಬಳಕೆ ಮಾಡುತ್ತಾರೆ. ಕಾಫಿ ಪುಡಿ ಮತ್ತು ಜೇನನ್ನು ಮಿಶ್ರಣಗೊಳಿಸಿ ಕತ್ತು ಮತ್ತು ಮುಖದ ಭಾಗಕ್ಕೆ ಮಸಾಜ್‌ಮಾಡಿಕೊಳ್ಳಬೇಕು. ಒಂದೂವರೆ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಯಾವುದೇ ಸೋಪ್ ಅಥವಾ ಫೇಸ್ ವಾಶ್ ಬಳಸದೇ ಕತ್ತು ಮತ್ತು ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ವಾರಕ್ಕೆ ಮೂರು ಬಾರಿ ಮಾಡುವುದರಿಂದ ಕತ್ತಿನ ಕಪ್ಪುಕಲೆಯನ್ನು ನಿವಾರಿಸಬಹುದಾಗಿದೆ. ಅಕ್ಕಿ ಹಿಟ್ಟು- ಟೊಮೇಟೋ
ಅಕ್ಕಿ ಹಿಟ್ಟಿನಲ್ಲಿ ತರಾತರಿ ತಿಂಡಿ ಮಾಡಿ ತಿಳಿದವರಿಗೆ ಅದರಲ್ಲಿಯೂ ಸೌಂದರ್ಯವೃದ್ಧಿ ಮಾಡಲು ಸಾಧ್ಯವಿದೆ ಎಂಬ ಸತ್ಯ ತಿಳಿದಿರಲಾರದು. ಅಕ್ಕಿ ಹಿಟ್ಟನ್ನು ಲಿಂಬೆಹಣ್ಣನ್ನು ಮಿಶ್ರಗೊಳಿಸಿ ಅರ್ಧ ಭಾಗ ಟೊಮೇಟೊಗೆ ಅದನ್ನು ಮೆತ್ತಿಕೊಂಡು ಕತ್ತಿನ ಸುತ್ತ 15ರಿಂದ 20 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಬಳಿಕ ತಣ್ಣಗಿನ ನೀರಿನಲ್ಲಿ ಕತ್ತಿನ ಭಾಗವನ್ನು ತೊಳೆದುಕೊಳ್ಳಬೇಕು ಈ ರೀತಿ ವಾರಕ್ಕೆ ನಾಲ್ಕು ಭಾರಿ ಮಾಡಿದರೆ ಸಮಸ್ಯೆ ನಿವಾರಣೆ.
Related Articles
ಮೊಟ್ಟೆಯಲ್ಲಿರುವ ಕ್ಯಾಲ್ಸಿಯಂ ಮತ್ತು ಅರಶಿನದ ಆ್ಯಂಟಿ ಆಕ್ಸಿಡೆಂಟ್ ಕಲೆಗಳನ್ನು ನಿವಾರಿಸಬಹುದಾಗಿದೆ. ಮೊಟ್ಟೆಯ ಬಿಳಿ ಭಾಗವನ್ನು ತೆಗೆದಿಟ್ಟು ಅದಕ್ಕೆ ಅರಶಿನವನ್ನು ಬೆರೆಸಬೇಕು. ಇದನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಮಸಾಜ್ ಮಾಡಿ 10 ರಿಂದ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಬಳಿಕ ಮುಖಕ್ಕೆ ಅಲೋವೆರಾ ಜೆಲ್ ಬಳಸಿ ಪುನಃ ಮಸಾಜ್ ಮಾಡಬೇಕು. ಇದರಿಂದ ಮುಖದ ಕಾಂತಿ ಹೆಚ್ಚಾಗುವುದರೊಂದಿಗೆ ಕತ್ತಿನ ಕಪ್ಪು ಕಲೆಯನ್ನು ನಿವಾರಿಸಬಹುದು.
Advertisement