Advertisement

ಹಿಮ್ಮಡಿ ಬಿರುಕಿನಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಸೂತ್ರಗಳು

11:56 AM Nov 11, 2020 | Sriram |

ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಪಾದಗಳು ಒಡೆಯುವ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಮುಖ್ಯವಾಗಿ ಪಾದ ಗಳನ್ನು ನಾವು ಸಂಪೂರ್ಣವಾಗಿ ಕಡೆಗಣಿಸುವುದು. ಹೀಗಾಗಿ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

Advertisement

ಒಂದು ಟಬ್‌ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಇದಕ್ಕೆ ಲಿಂಬೆ ರಸ, ಕಲ್ಲು ಉಪ್ಪು, ಗ್ಲಿಸರಿನ್‌ ಮತ್ತು ರೋಸ್‌ ವಾಟರ್‌ ಹಾಕಿ. ಈ ನೀರಿನಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಪಾದವನ್ನು ತೊಳೆದುಕೊಂಡು ಒರೆಸಿದ ಬಳಿಕ ಮಾಶ್ಚರೈಸರ್‌ ಹಚ್ಚಿಕೊಳ್ಳಿ.

ಗ್ಲಿಸರಿನ್‌, ರೋಸ್‌ ವಾಟರ್‌ ಮತ್ತು ಲಿಂಬೆ ರಸ ಹಾಕಿಕೊಂಡು ನೀವು ಫ‌ುಟ್‌ ಮಾÓR… ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಒಡೆದಿರುವ ಪಾದಗಳಿಗೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡೀ ಹಾಗೆಯೇ ಬಿಟ್ಟುಬಿಡಿ.

ಬೆಚ್ಚಗಿನ ನೀರಿನಲ್ಲಿ ಪಾದವನ್ನು ನೆನೆಸಿ, ಅನಂತರ ಮೃದುವಾಗಿ ಮಸಾಜ್‌ ಮಾಡಿ. ಸತ್ತ ಜೀವಕೋಶಗಳನ್ನು ತೆಗೆದು, ಪಾದಗಳನ್ನು ತೊಳೆದು ಒಣಗಿಸಿಕೊಳ್ಳಿ. ಅನಂತರ ಅಲೋವೆರಾ ಜೆಲ್‌ ಹಚ್ಚಿ, ಸಾಕ್ಸ್‌ ಧರಿಸಿ ಮಲಗಿ. ಮುಂಜಾನೆ ಕಾಲನ್ನು ಶುದ್ಧಗೊಳಿಸಿ.

ಬಾಳೆಹಣ್ಣು ಒಳ್ಳೆಯ ಮಾಶ್ಚರೈಸರ್‌ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ತುಂಬಾ ನಯವಾಗಿಸುವುದು. ಒಡೆದಿರುವ ಪಾದಗಳಿಗೆ ಬಾಳೆಹಣ್ಣನ್ನು ಹಚ್ಚಿಕೊಳ್ಳಿ. 15-20 ನಿಮಿಷ ಹಾಗೆಯೇ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

Advertisement

ಅರ್ಧ ಬಕೆಟ್‌ ಬಿಸಿ ನೀರು ತೆಗೆದುಕೊಳ್ಳಿ ಮತ್ತು ಇದಕ್ಕೆ ಅರ್ಧ ಕಪ್‌ ಜೇನುತುಪ್ಪ ಹಾಕಿ. ಈ ನೀರಿನಲ್ಲಿ 15-20 ನಿಮಿಷ ಕಾಲ ಕಾಲನ್ನು ಅದ್ದಿಟ್ಟುಕೊಳ್ಳಿ. ಒಣ ಚರ್ಮವನ್ನು ಕಿತ್ತುಹಾಕಲು ಸðಬ್‌ ಮಾಡಿ. ಜೇನುತುಪ್ಪವು ನೈಸರ್ಗಿಕವಾಗಿ ಒಡೆದಿರುವ ಚರ್ಮವನ್ನು ಶಮನ ಮಾಡಿ, ನಯಗೊಳಿಸುವುದು.

ಅರ್ಧ ಬಕೆಟ್‌ ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ. ನೀರಿನಲ್ಲಿ ಇದು ಸರಿಯಾಗಿ ಕರಗಲಿ. ಇದರ ಬಳಿಕ ಕಾಲುಗಳನ್ನು ಇದರಲ್ಲಿ ಅದ್ದಿಟ್ಟುಕೊಳ್ಳಿ ಮತ್ತು 10-15 ನಿಮಿಷಗಳ ಕಾಲ ಹಾಗೆ ಬಿಡಿ. ನೀರಿನಲ್ಲಿ ಅದ್ದಿಟ್ಟ ಬಳಿಕ ತುಂಬಾ ನಿಧಾನವಾಗಿ ಫ್ಯೂಮಿಕ್‌ ಕಲ್ಲಿನಿಂದ ಸðಬ್‌ ಮಾಡಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next