Advertisement
ಈ ಪ್ರಕರಣ ನಡೆದ ಜಲೌನ್ ಊರಿನ ಹೊರವಲಯದಲ್ಲಿ ಜೈಲೊಂದಿದೆ. ಈ ಜೈಲಿನ ಒಳಾಂಗಣ ಹಾಗೂ ಮುಂಭಾಗದ ಅಂದ ಹೆಚ್ಚಿಸಲು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಬರೋಬ್ಬರಿ ಐದು ಲಕ್ಷ ರೂ. ನೀಡಿ ಕೆಲವು ದುಬಾರಿ ಗಿಡಗಳನ್ನು ತರಿಸಿ ಅವುಗಳನ್ನು ನೆಡಿಸಿದ್ದರು. ಈ ಕತ್ತೆಗಳು ದಿನಾಲು ಮೇಯಲು ಜೈಲು ಮಾರ್ಗದ ಮೂಲಕವೇ ಹೋಗುವಾಗ, ಆ ಗಿಡಗಳ ಮೇಲೆ ಹಾದು ಹೋಗಿವೆ. ಬಾಯಿಗೆ ಸಿಕ್ಕಷ್ಟು ಗಿಡಗಳನ್ನು ತಿಂದಿವೆ. ಇದನ್ನು ಗಮನಿಸಿದ ಜೈಲು ಅಧಿಕಾರಿಗಳು ಕತ್ತೆಗಳ ಮಾಲೀಕನನ್ನು ಕರೆದು ಗಿಡಗಳ ಮೇಲೆ ಕತ್ತೆಗಳು ಹಾಯ್ದು ಹೋಗದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಎಂದಿನಂತೆ ಮೇಯಲು ಹೊರಟ ಆ ಕತ್ತೆಗಳು ಮತ್ತೆಅದನ್ನೇ ಮಾಡಿವೆ.