Advertisement
ಈ ಬಾರಿ ಮಳೆ ಬಂದ ಬಳಿಕ ಅಂದರೆ, ಸುಮಾರು ಜೂನ್ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ 8 ವಲಯಗಳಲ್ಲಿ ಗಿಡ ನೆಡಲು ಪ್ರಾರಂಭ ಮಾಡಲಾಗುತ್ತದೆ. ಒಂದು ತಿಂಗಳು ಕಾಲ ಈ ಕಾರ್ಯ ನಡೆಯಲಿದೆ. ರಸ್ತೆ ಬದಿಗಳಲ್ಲಿಯೂ ಗಿಡ ನೆಡುವುದು ಈ ಯೋಜನೆಯಲ್ಲಿದ್ದು, ಜಿಲ್ಲೆಯ ಸುಮಾರು 60 ಕಿ.ಮೀ. ರಸ್ತೆ ಬದಿ ನೆಡಲಾಗುತ್ತದೆ. ಪ್ರತೀ ಕಿ.ಮೀಗೆ 300 ಗಿಡ ನೆಡುವ ಗುರಿಯನ್ನು ಇಲಾಖೆ ಹೊಂದಿದೆ.
ಅರಣ್ಯ ಇಲಾಖೆಯು ಈ ಬಾರಿ ಒಟ್ಟಾರೆ 9.8 ಲಕ್ಷ ಗಿಡ ನೆಡಲು ಯೋಜನೆ ರೂಪಿಸಿದ್ದು, ಇದರಲ್ಲಿ 3 ಲಕ್ಷ ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಿದೆ. ಗಿಡಗಳನ್ನು ರಿಯಾಯಿತಿ ದರದಲ್ಲಿ ನೀಡಲಾ ಗುತ್ತದೆ. ಇನ್ನುಳಿದ ಗಿಡಗಳನ್ನು ಅರಣ್ಯ ಇಲಾಖೆಯೇ ನೆಡಲಿದೆ.
Related Articles
– ಕರಿಕಾಳನ್, ದ.ಕ. ಉಪ ಅರಣ್ಯ ಸಂರಕ್ಷಣಾಧಿಕಾರಿ
Advertisement