Advertisement

ಯುವತಿಗೆ ಕಿರುಕುಳ ನೀಡಿದ ಯುವಕ: ಠಾಣೆಯಲ್ಲಿ ಪ್ರಕರಣ ದಾಖಲು

10:04 PM Jul 21, 2020 | sudhir |

ಪುತ್ತೂರು : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುರುಷರಕಟ್ಟೆಯ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪುರುಷರಕಟ್ಟೆ ನಿವಾಸಿ ಇಬ್ರಾಹಿಂ ಆಸೀಫ್ ಆರೋಪಿ. ದರ್ಬೆ ಸಮೀಪದ ಕ್ಲಿನಿಕ್‌ವೊಂದಕ್ಕೆ ಚಿಕಿತ್ಸೆಗೆಂದು ತಂದೆಯ ಜತೆ ಬಂದಿದ್ದ ಯುವತಿಗೆ ಕಣ್ಸನ್ನೆ ಮಾಡಿ ಮತ್ತು ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಬಿಸಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ.

ಈ ಕುರಿತು ಯುವತಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next