Advertisement

ಹೇನ್‌ಬೇರು ಕೊಲೆ ಪ್ರಕರಣ : “ಒಂಜಿ ಪೊಣ್ಣುಂಡು”ಎಂದು ಕರೆಸಿಕೊಂಡ ಹಂತಕರು !

08:56 AM Jul 17, 2022 | Team Udayavani |

ಕಾರ್ಕಳ: ಬೈಂದೂರು ಠಾಣೆ ವ್ಯಾಪ್ತಿಯ ಒತ್ತಿನೆಣೆ ಸಮೀಪದ ಹೇನ್‌ ಬೇರು ನಿರ್ಜನ ಪ್ರದೇಶದಲ್ಲಿ ಜು.15ರಂದು ಕೊಲೆಯಾದ ಮೇಸ್ತ್ರಿ ಆನಂದ ದೇವಾಡಿಗನನ್ನು ಕೊಲೆ ಕೃತ್ಯದ ಮೊದಲು ಒಂಜಿ ಪೊಣ್ಣುಂಡು ಬಲ (ಒಂದು ಹುಡಿಗಿ ಇದೆ ಬಾ..) ಎಂದು ಹೆಣ್ಣಿನ ಆಸೆ ತೋರಿಸಿ, ಕರೆಸಿಕೊಂಡು ಬಲಿ ಕೊಟ್ಟಿದ್ದರು ಹಂತಕರು.

Advertisement

ಕಾರ್ಕಳದ ಅತ್ತೂರು ಚರ್ಚ್‌ ರಸ್ತೆಯ ಕಾಬೆಟ್ಟು ನಿವಾಸಿ ಆನಂದ ದೇವಾಡಿಗ ಏಕಾಂಗಿಯಾಗಿ ವಾಸವಾಗಿದ್ದ. ನಗರದ ವಿವಿದೆಡೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಆತನ ಕೈ ಕೆಳಗೆ ಮೂರ್‍ನಾಲ್ಕು ಮಂದಿ ಕೂಲಿ ಕೆಲಸಗಾರರಿದ್ದರು. ಸ್ಥಳಿಯವಾಗಿ ಆತ ಪರಿಚಯಸ್ಥನಾಗಿದ್ದ. ಮೇಸ್ತ್ರೀಯಾಗಿದ್ದರೂ ಸ್ವತ: ಕೆಲಸ ಕೂಡ ಮಾಡುತ್ತಿದ್ದು. ಕೆಲಸದಲ್ಲೂ ನಿಪುಣತೆ ಹೊಂದಿದ್ದ ಎನ್ನುತ್ತಾರೆ ಆತನ ಜತೆ ಕೆಲಸ ಮಾಡಿದವರು. ಘಟನೆ ನಡೆಯುವ ಹಿಂದಿನ ದಿನ ಕಾರ್ಕಳ ಪುರಸಭೆ ವ್ಯಾಪ್ತಿಯ ಒಂದು ಖಾಸಗಿ ಪ್ರದೇಶದಲ್ಲಿ ಮೇಸ್ತಿ ಕೆಲಸ ಮಾಡಿಕೊಂಡಿದ್ದ. ಇದೇ ವೇಳೆ ಆತನಿಗೆ ಕರೆಯೊಂದು ಬಂದಿತ್ತು. ಕರೆಯ ಹಿಂದೆ ಹೋದ ಮೇಸ್ತ್ರಿ ಆನಂದರವರ ಮೊಬೈಲ್‌ ಬಳಿಕ ಸ್ವಿಚ್‌ ಆಪ್‌ ಆಗಿತ್ತು. ಮರುದಿನ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಕೆಲಸದಾಳುಗಳು ಬಂದಿದ್ದರೂ ಮೇಸ್ತ್ರಿ ಬಂದಿರಲಿಲ್ಲ. ಅಂದು ಪ್ರಕರಣ ಬೆಳಕಿಗೆ ಬಂದು ಆತ ಕೊಲೆಯಾಗಿದ್ದಾನೆ ಎಂದಾಗ ಜತೆ ಕೆಲಸ ಮಾಡಿಕೊಂಡಿದ್ದವರು ಅಚ್ಚರಿಗೊಂಡಿದ್ದರು. ಎರಡು ದಿನಗಳ ಕೂಲಿ ಸಂಬಳ ಕೂಡ ಬಾಕುಳಿಸಿಕೊಂಡು ಬಾರದ ಲೋಕಕ್ಕೆ ಆತ ಪಯಣ ಬೆಳೆಸಿದ್ದ. ಎರಡು ದಿನದ ಕೂಲಿಯನ್ನು ಮೇಸ್ತ್ರಿಯ ಪರಿಚಯಸ್ಥನಲ್ಲಿ ನೀಡಲಾಗಿತ್ತು. ಕೂಲಿ ತೆಗೆದುಕೊಳ್ಳಲು ಆತನೇ ಇರಲಿಲ್ಲ. ಮೇಸ್ತ್ರಿಗೆ ಕರೆ ಮಾಡಿ ಮೊಬೈಲ್‌ನಲ್ಲಿ ಹೇಳಿದ ವ್ಯಕ್ತಿ ತೋರಿಸಿದ ಹೆಣ್ಣು ಶಿಲ್ಪಾಳೆ ಆಗಿದ್ದಳು ಎಂಬುದು ಘಟನೆ ತರುವಾಯ ತಿಳಿದು ಬರುತ್ತದೆ. ಕರೆಯ ಮೂಲಕ ಕರೆಸಿಕೊಂಡ ಹಂತಕರು ಮೇಸ್ತ್ರಿಯನ್ನು ಮರುಳು ಮಾಡಿ ಕರೆದೊಯದು ಕೊಲೆಗೈದಿದ್ದರು.

ಎಣ್ಣೆಹೊಳೆ ಸಮೀಪ ಬಟ್ಟೆ ಎಸೆದಿದ್ದ ಹಳೆ ಕಾರನ್ನು ದುರಸ್ತಿ ಮಾಡಿಸಿದ್ದ
ಆರೋಪಿ ಸದಾನಂದ ಶೇರಿಗಾರ್‌ ಕೊಲೆ ನಡೆಸಿದ ಬಳಿಕ ತಾನು ಧರಿಸಿದ್ದ ಬಟ್ಟೆಗಳನ್ನು ಎಣ್ಣೆಹೊಳೆ ಸಮೀಪ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದ. ಆತ ಕೃತ್ಯಕ್ಕೆ ಬಳಸಿದ ಕಾರು ಹಳೆಯದಾಗಿದ್ದು. ರನ್ನಿಂಗ್‌ ಕಂಡಿಶನ್‌ನಲ್ಲಿ ಇರಲಿಲ್ಲ. ಕೃತ್ಯ ನಡೆಸುವ ಸಲುವಾಗಿಯೇ ಮುಂಚಿತವಾಗಿ ಕುಂಟಲ್ಪಪಾಡಿ ಪರಿಸರದ ಗ್ಯಾರೆಜೊಂದರಲ್ಲಿ 27 ಸಾವಿರ ರೂಪಾಯಿ ನೀಡಿ ದುರಸ್ತಿ ಪಡಿಸಿಕೊಂಡಿದ್ದ.

ಮನೆಯಲ್ಲೆ ನಿದ್ರೆ ಮಾತ್ರೆ ನೀಡಿದ್ದಳು!
ಕೊಲೆಯಾದ ಮೇಸ್ತ್ರಿ ಆನಂದ ದೇವಾಡಿಗನನ್ನು ಕೊಲೆ ಮಾಡುವ ಮುಂಚಿತ ಹಂತಕರು ಶಿಲ್ಪಾ ತನ್ನ ಮನೆಗೆ ಕರೆದೊಯ್ದಿದ್ದರು. ಶಿಲ್ಪಾಳ ಮನೆ ಹಿರ್ಗಾನದ ಮುರೂರು ಶಿವನಗರಕ್ಕೆ ಕರೆದೊಯ್ದು ಅಲ್ಲಿ ಮನೆಯಲ್ಲೆ ನಿದ್ರೆ ಮಾದ್ರೆ ನೀಡಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳಿಬ್ಬರ ಮಹಜರು
ಕೊಲೆಗೆ ಸಂಬಂದಿಸಿ ಪೊಲೀಸ್‌ ಬಂಧನದಲ್ಲಿರುವ ಆರೋಪಿಗಳಾದ ಸದಾನಂದ ಶೇರಿಗಾರ್‌ ಹಾಗೂ ಶಿಲ್ಪಾ ಪೂಜಾರಿ ಅವರಿಬ್ಬರನ್ನು ಜು.16ರಂದು ಪೊಲೀಸರು ಎಣ್ಣೆಹೊಳೆ, ಹಿರ್ಗಾನ, ಕುಂಟಲ್ಪಾಡಿ ಪ್ರದೇಶಕ್ಕೆ ಕರೆದೊಯ್ದು ಮಹಜರು ನಡೆಸಿದರು. ಇದೇ ವೇಳೆ ಹಲವು ಸಂಗತಿಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next