Advertisement

ಹೆಮರಾಯ್ಡಗಳು ಅಥವಾ ಮೂಲವ್ಯಾಧಿ

06:00 AM Jan 14, 2018 | |

– ಪೈಲ್ಸ್‌, ಮೂಲವ್ಯಾಧಿ ಎಂದೂ ಕರೆಯಲ್ಪಡುತ್ತದೆ.
–  ಒತ್ತಡ ಅಥವಾ ಇತರ ಕಾರಣಗಳಿಂದಾಗಿ ಗುದದ್ವಾರದ ಮೃದುಭಾಗ (ಏನಲ್‌ ಕುಶನ್‌) ಕೆಳಜಾರುವುದು ಮೂಲವ್ಯಾಧಿ.
–  ಗುದದ್ವಾರದ ಮೃದುಭಾಗ (ಏನಲ್‌ ಕುಶನ್‌): ರೋಗಿಯಲ್ಲಿ ಲಿಥೊಟೊಮಿ ಸ್ಥಿತಿಯಲ್ಲಿ ರಕ್ತನಾಳಗಳು (ಆರ್ಟರಿಯೋಲ್‌ಗ‌ಳು, ವೆನ್ಯೂಲ್‌ಗ‌ಳು), ಮೃದು ಸ್ನಾಯುಗಳು ಮತ್ತು ನಮನೀಯ ಸಂಪರ್ಕ ಜೀವಕೋಶಗಳು ಹಾಗೂ ಬಲ ಪೋಸ್ಟರೋಲಾಟರಲ್‌ ಗುದ ನಾಳ (3, 7, 11 ಗಂಟೆ ಸ್ಥಾನ) ಗಳ ಸಮೂಹ.

Advertisement

ವಿಧಗಳು:
– ಆಂತರಿಕ ಹೆಮರಾಯ್ಡಗಳು: ಡೆಂಟೇಟ್‌ ಲೈನ್‌ಗೆ ಹತ್ತಿರದಲ್ಲಿ ಮ್ಯೂಕಸ್‌ ಮೆಂಬ್ರೇನ್‌ಗಳಿಂದ ಆವೃತ.
– ಬಾಹ್ಯ ಹೆಮರಾಯ್ಡಗಳು: ಡೆಂಟೇಟ್‌ ಲೈನ್‌ನ ಕೊನೆಯಲ್ಲಿ ಚರ್ಮದಿಂದ ಆವೃತ. 

ಆಂತರಿಕ ಹೆಮರಾಯ್ಡಗಳು
– ಪ್ರಾಥಮಿಕ ಆಂತರಿಕ ಹೆಮರಾಯ್ಡಗಳು:
– ಸುಪೀರಿಯರ್‌ ಹೆಮರಾಯ್ಡ ರಕ್ತನಾಳಗಳ ಶಾಖೆಗಳಿಗೆ ಸಂಬಂಧಿಸಿದೆ.
– ಬೆಳವಣಿಗೆಯ ತತ್ವ: 
-ಹಲವು ವಿಧದ ಕಾರಣಗಳಿಂದಾಗಿ ಗುದದ್ವಾರದ ಮೇಲೆ ಬೀಳುವ ಒತ್ತಡವು ಗುದದಲ್ಲಿ ಗುದದ್ವಾರದ ಮೃದು ಭಾಗ (ಏನಲ್‌ ಕುಶನ್‌) ಸ್ಥಾನಾಂತರ ಮತ್ತು ಮ್ಯುಕೋಸಲ್‌ ಟ್ರೊಮಾ ಉಂಟು ಮಾಡುತ್ತದೆ.
– ಪೂರಕ ರಚನೆಯು ಕ್ರಮೇಣ ಛಿದ್ರಗೊಂಡು ಗುದದ್ವಾರದ ಮೃದುಭಾಗದ ನಮನೀಯತೆ ನಷ್ಟಗೊಳ್ಳುತ್ತದೆ, ಇದರಿಂದಾಗಿ ಮಲವಿಸರ್ಜನೆಯಾದ ಬಳಿಕ ಅವು ಸಂಕುಚನಗೊಳ್ಳುವುದಿಲ್ಲ.

– ದ್ವಿತೀಯಕ ಆಂತರಿಕ ಹೆಮರಾಯ್ಡಗಳು:
– ಕಾರಣಗಳು:
– ಏನೊ-ರೆಕ್ಟಮ್‌ (ಗುದದ್ವಾರ)ದ ಕಾರ್ಸಿನೊಮಾ
– ಸ್ಥಳೀಯ: ಏನೊರೆಕ್ಟಲ್‌ ಸ್ವರೂಪನಾಶ, ಹೈಪೊಟಾನಿಕ್‌ ಏನಲ್‌ ಸ್ಪಿಂಕ್ಟರ್‌
– ಹೊಟ್ಟೆ: ಎಸೈಟ್ಸ್‌
-ಪೆಲ್ವಿಕ್‌: ಗ್ರೇವಿಡ್‌ ಗರ್ಭಕೋಶ, ಯುಟೆರೈನ್‌ ನಿಯೊಪ್ಲಾಸ್‌¾ ಅಥವಾ ಗಡ್ಡೆ, ಗರ್ಭಕೋಶ ಅಥವಾ ಗರ್ಭನಾಳದ ಕಾರ್ಸಿನೊಮಾ, ಒವೇರಿಯನ್‌ ನಿಯೊಪ್ಲಾಸ್‌¾, ಮೂತ್ರಕೋಶದ ಕಾರ್ಸಿನೊಮಾ
– ನರಸಂಬಂಧಿ: ಪ್ಯಾರಾಪ್ಲೆಜಿಯಾ, ಮಲ್ಟಿಪಲ್‌ ಸೆಲೆರೋಸಿಸ್‌

ಬಾಹ್ಯ ಹೆಮರಾಯ್ಡಗಳು
– ಗುದ ಕಾಲುವೆಯ ಸುತ್ತಲಿನ ಚರ್ಮದ ಆಳದಲ್ಲಿರುವ ಇನ್‌ಫೀರಿಯರ್‌ ಹೆಮರಾಯ್ಡ ಫ್ಲೆಕ್ಸಸ್‌ಗಳ ವೆನುಯಸ್‌ ಚಾನೆಲ್‌ಗ‌ಳಿಗೆ ಸಂಬಂಧಿಸಿದೆಯೇ ಹೊರತು ನೈಜ ಹೆಮರಾಯ್ಡಗಳಲ್ಲ. 

Advertisement

ಇಂಟನೊì – ಎಕ್ಸ್‌ಟರ್ನಲ್‌
– ಆಂತರಿಕ ಹೆಮರಾಯ್ಡಗಳ ಬೆಳವಣಿಗೆಯಿಂದಾಗಿ ಎರಡೂ ಹೆಮರಾಯ್ಡ ಫ್ಲೆಕ್ಸಸ್‌ಗಳನ್ನು ಒಳಗೊಂಡು ಬಾಹ್ಯ ಹೆಮರಾಯ್ಡ ಜತೆಗೆ ಕೂಡಿಕೊಂಡ ಆಂತರಿಕ ಹೆಮರಾಯ್ಡ.
– ಇವು ಆಂತರಿಕ ಹೆಮರಾಯ್ಡಗಳ ಬಾಹ್ಯ ವಿಸ್ತರಣೆಯಾಗಿರುತ್ತವೆ.

ಆಂತರಿಕ ಮೂಲವ್ಯಾಧಿಗಳ ವರ್ಗೀಕರಣ: ಆಂತರಿಕ ಮೂಲವ್ಯಾಧಿಯ ಜೋಲುವಿಕೆ ಎಷ್ಟು ಎಂಬುದನ್ನು ಆಧರಿಸಿ ನಾಲ್ಕು ಗ್ರೇಡ್‌ಗಳಾಗಿ ವರ್ಗೀಕರಿಸಲಾಗುತ್ತದೆ:
– ಫ‌ಸ್ಟ್‌ ಡಿಗ್ರಿ: ರಕ್ತಸ್ರಾವ ಮಾತ್ರ, ಜೋಲುವಿಕೆ ಇರುವುದಿಲ್ಲ.
-ಸೆಕೆಂಡ್‌ ಡಿಗ್ರಿ: ಜೋಲುವಿಕೆ ಇರುತ್ತದೆ, ಆದರೆ ತತ್‌ಕ್ಷಣ ಕುಗ್ಗುತ್ತದೆ.
-ಥರ್ಡ್‌ ಡಿಗ್ರಿ: ಜೋಲುವಿಕೆ ಇರುತ್ತದೆ, ಅದನ್ನು ರೋಗಿಯೇ ಒಳಕ್ಕೆ ತಳ್ಳಬೇಕಾಗುತ್ತದೆ.
– ಫೋರ್ತ್‌ ಡಿಗ್ರಿ: ಖಾಯಂ ಜೋಲುವಿಕೆ.

– ಮುಂದಿನ  ವಾರಕ್ಕೆ  

– ಡಾ| ಮನೋಹರ ವಿ. ಪೈ
ಅಡಿಶನಲ್‌ ಪ್ರೊಫೆಸರ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next