Advertisement
ಹೆಮ್ಮಾಡಿಯಿಂದ ಕಟ್ಟು ಮೂಲಕವಾಗಿ ತೋಪು, ಯಳೂರು, ಬಂಟ್ವಾಡಿ, ಹಕ್ಲಾಡಿ, ಆಲೂರು, ಗುಡ್ಡಮ್ಮಾಡಿ, ಹಕೂìರು ಸಹಿತ ಅನೇಕ ಊರುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.
ಈ ರಸ್ತೆಗೆ ಡಾಮರೀಕರಣವಾಗಿದ್ದು ಸುಮಾರು 8 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆಗೆ ಮರು ಡಾಮರೀಕರಣವಾಗಲಿ ಅಥವಾ ತೇಪೆ ಹಾಕುವ ಕಾರ್ಯವಾಗಲಿ ನಡದೇ ಇಲ್ಲ ಎನ್ನುವುದಾಗಿ ಸ್ಥಳೀಯರು ಹೇಳುತ್ತಾರೆ.
Related Articles
ಹಲವು ವರ್ಷಗಳಿಂದ ಈ ರಸ್ತೆಯ ಸ್ಥಿತಿ ಹೀಗೆ ಇದೆ. ನಾವು ಪ್ರತಿನಿತ್ಯ ಕಷ್ಟಪಟ್ಟು ಸಂಚರಿಸುತ್ತೇವೆ. 1 ಕಿ.ಮೀ. ರಸ್ತೆಯಲ್ಲಂತೂ ಸಂಚರಿಸುವುದೇ ಕಷ್ಟ. ಈ ವರ್ಷವಾದರೂ ಈ ರಸ್ತೆಗೆ ಮರು ಡಾಮರೀಕರಣ ಮಾಡಲು ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಳ್ಳಲಿ.
-ಸತೀಶ್ ಯಳೂರು, ಸ್ಥಳೀಯರು
Advertisement