Advertisement

ಮಧುಗಿರಿಗೆ ಹರಿಯಲಿದ್ದಾಳೆ ಹೇಮೆ

05:38 AM May 23, 2020 | Lakshmi GovindaRaj |

ಮಧುಗಿರಿ: ಬರಗಾಲದಲ್ಲಿಯೂ ಮಧುಗಿರಿಗೆ ಹೇಮಾ ವತಿ ನೀರು ಹರಿಯಲಿದ್ದು, ಸರ್ಕಾರ ನೀರು ಬಿಡಲು ಒಪ್ಪಿದ್ದು, ಸಿದ್ದಾಪುರ ಕೆರೆಗೆ ಹೇಮಾವತಿ ಹರಿಯಲಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಹೇಳಿದರು. ಪಟ್ಟಣದ  ತಾಪಂನಲ್ಲಿ ಪಿಡಿಒಗಳ ಸಭೆ ಯಲ್ಲಿ ಮಾತನಾಡಿ, ಎರಡನೇ ಬಾರಿಗೆ ಮಧುಗಿರಿಗೆ ಹೇಮೆ ಹರಿಯಲಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ.

Advertisement

ಗ್ರಾಮೀಣ ಭಾಗದಲ್ಲಿ 50 ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಜನರಿಗೆ  ನೀಡುತ್ತಿದ್ದು, ತಹಶೀಲ್ದಾರ್‌ ಹಣ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ಆಕ್ರೋಶಗೊಂಡ ಶಾಸಕರು ಕಷ್ಟದಲ್ಲಿ ಹಣ ಸಿಗಲಿದೆ ಎಂಬ ಕಾರಣಕ್ಕೆ ರೈತರು ನೀರು ಕೊಡುತ್ತಾರೆ. ನೀವು ಹಣ ಬಿಡು ಗಡೆ ಮಾಡದಿದ್ದರೆ ಪಿಡಿಒಗಳು ಏನು ಮಾಡಬೇಕು. ಇದರಿಂದ ಸರ್ಕಾರಕ್ಕೂ  ನಮಗೂ ಕೆಟ್ಟ ಹೆಸರು ಬರಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಭೆಯಲ್ಲೇ ಶೀಘ್ರವಾಗಿ ಹಣ ಬಿಡು ಗಡೆಗೆ ಜಿಲ್ಲಾಧಿ ಕಾರಿ ಗಳೊಂದಿಗೆ ದೂರವಾಣಿಯಲ್ಲೇ ಮಾತ ನಾಡಿ ಹಣ ಬಿಡುಗಡೆಗೆ ಒಪ್ಪಿಗೆ ಪಡೆದು  ತಹಶೀಲ್ದಾರ್‌ಗೆ ಸೂಚಿಸಿದರು. ನರೇಗಾದಲ್ಲಿ ಮಧುಗಿರಿ ಪ್ರಥಮ ಸ್ಥಾನದಲ್ಲಿದ್ದು ಕೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ 40 ಸಾವಿರ ಹಣ ಬಿಡುಗಡೆಯಾಗಿದ್ದು ಪಿಡಿಒಗಳು ಕಷ್ಟದಲ್ಲಿರುವ ರೈತ, ಬಡವರಿಗೆ ಇದರಿಂದ   ನೆರವಾಗಬೇಕು.

ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಜೊತೆಗಿರಲಿದ್ದು, ಯಾರೊಂ  ದಿಗೂ ರಾಜಕೀಯ ಮಾಡಬೇಡಿ  ಎಂದರು. 45 ಹಳ್ಳಿಯಲ್ಲಿ ಕೊಳವೆಬಾವಿ ವಿಫ‌ಲವಾಗಿದ್ದು, ಟ್ಯಾಂಕರ್‌ ಮೂಲಕ ನೀರು ನೀಡುತ್ತಿದ್ದೇವೆ. ಮತ್ತಷ್ಟು  ಅನುಮತಿ ಪಡೆದು ಕೆಲಸ ಮಾಡುವು ದಾಗಿ ತಾಪಂ ಇಒ ದೊಡ್ಡಸಿದ್ದಯ್ಯ ತಿಳಿಸಿದರು. ತಹಶೀಲ್ದಾರ್‌ ಡಾ.ವಿಶ್ವ ನಾಥ್‌, ಬೆಸ್ಕಾಂ ಎಇಇ ಕೃಷ್ಣಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next