Advertisement
ಹೌದು, ಮಂಡ್ಯ ತಾಲೂಕಿನ ಅನುಕುಪ್ಪೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗಿತ್ತು. ಅತಿ ಆಳವಾಗಿ ಗಣಿಗಾರಿಕೆ ನಡೆಸಿದ್ದರಿಂದ ದೊಡ್ಡ ಹಳ್ಳ ಬಿದ್ದಿದೆ. ಕಳೆದ ಮರ‍್ನಾಲ್ಕು ದಿನಗಳಿಂದ ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿದ್ದು, ಕಲ್ಲುಗಣಿ ಪ್ರದೇಶದಲ್ಲಿಯೇ ನಾಲೆ ಹಾದು ಹೋಗಿದೆ. ಇದರಿಂದ ನಾಲೆ ನೀರು ಗಣಿ ಪ್ರದೇಶಕ್ಕೆ ನುಗ್ಗಿ ಮೇಲಿನಿಂದ ಝರಿಯಂತೆ ಧುಮುಕುತ್ತಿದೆ.
Related Articles
Advertisement
ಗ್ರಾಮದ ಸರ್ವೆ ನಂ.೪೯ರಲ್ಲಿ ನೆಡುತೋಪು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಾನೂನು ಬಾಹಿರವಾಗಿ ಪರವಾನಗಿ ನೀಡಲಾಗಿತ್ತು. ಅದರ ಅವಧಿ ಕಳೆದ ತಿಂಗಳು ಮುಗಿದಿತ್ತು. ಆದರೆ ನಿಗದಿತಕ್ಕಿಂತ ಹೆಚ್ಚು ಕಲ್ಲು ತೆಗೆಯಲಾಗಿತ್ತು ಹಾಗೂ ಪರವಾನಗಿ ಮುಗಿದಿದ್ದರೂ ಅಕ್ರಮವಾಗಿ ಕಲ್ಲು ತೆಗೆಯಲಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕಳೆದ ತಿಂಗಳು ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು.
ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿರಲಿಲ್ಲ ಎಂದು ವರದಿ ನೀಡಲಾಗಿತ್ತು. ಆದಾದ ಬಳಿಕ ಕಲ್ಲು ಸ್ಫೋಟಿಸಲು ರಾತ್ರೋ ರಾತ್ರಿ ಕುಳಿಗಳನ್ನು ತೋಡಲಾಗಿತ್ತು. ಇದರ ಬಗ್ಗೆ ಗ್ರಾಮಸ್ಥರು ಫೋಟೋ, ವಿಡಿಯೋ ಸಮೇತ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಸ್ತುತ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಪರವಾನಗಿ ನವೀಕರಿಸದಿರಲು ಟಾಸ್ಕ್ಪೋರ್ಸ್ ಸಮಿತಿ ಸಭೆ ತೀರ್ಮಾನಿಸಿತ್ತು. ಆದರೆ ಈಗ ನಾಲೆಯ ನೀರು ನುಗ್ಗಿ ಝರಿ ಸೃಷ್ಟಿಸಿದೆ.