Advertisement
ಆಂಧ್ರ ಪ್ರದೇಶದ ಶ್ರೀಶೈಲಂನ ರಡ್ಡಿ ಚೌಲಿó ಕಲ್ಯಾಣ ಮಂಟಪದಲ್ಲಿ ಹೇಮರಡ್ಡಿ ಮಲ್ಲಮ್ಮ ಚಾರಿಟಬಲ್ ಚೌಲಿ ಟ್ರಸ್ಟ್ ಕರ್ನಾಟಕ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಆಯೋಜಿಸಿದ್ದ ತೆಲುಗು ಅನುವಾದದ ಹೇಮರಡ್ಡಿ ಮಲ್ಲಮ್ಮ ಚರಿತ್ರೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬದುಕಿನಲ್ಲಿ ಸಾಧನೆ ಇದ್ದಲ್ಲಿ ಮಾತ್ರ ಸಮಾಜ, ಸಂಘಟನೆ ಬಲವಾಗುತ್ತದೆ.
ಮಾಡಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ರಡ್ಡಿ ಸಮಾಜದ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿರುವ ಪರೋಪಕಾರ ಗುಣವನ್ನು ಕಂಡಿದ್ದೇನೆ. ದಾವಣಗೇರೆಯಲ್ಲಿ ರಡ್ಡಿ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಿರ್ಮಾಣ ಮಾಡುತ್ತಿರುವ ವಸತಿ ನಿಲಯ ಕಟ್ಟಡಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು. ಶಾಸಕ ನಾಗನಗೌಡ ಕಂದಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿವಶರಣೆ ಮಲ್ಲಮ್ಮಳ ಜೀವನ ಸಂದೇಶ ಮನುಕುಲಕ್ಕೆ ಮಾದರಿಯಾಗಿವೆ. ಅವರ ಆದರ್ಶ ಗುಣಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಜೀವನ ನಡೆಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
Related Articles
Advertisement
ಬೀಳಗಿ ಶಾಸಕ ಮುರಗೇಶ ನಿರಾಣಿ ಮತ್ತು ಟ್ರಸ್ಟ್‌ನ ಅಧ್ಯಕ್ಷ ವೈ.ಬಿ. ಆಲೂರ ಮಾತನಾಡಿದರು. ಹೆಡಗಿಮದ್ರಾದ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪೂಜ್ಯ ಗುರುಪಾದ ಸ್ವಾಮಿ, ಮಾಜಿ ಶಾಸಕ ಗುರುನಾಥರಡ್ಡಿ ಕೊಡಂಗಲ್, ಡಾ| ಶೇಖರಗೌಡ ಪಾಟೀಲ, ಶರಣಪ್ಪಗೌಡ ಮಲ್ಹಾರ, ಡಾ| ಶಿವಲಿಂಗ ಮೂರ್ತಿ, ಶಾಂತರಡ್ಡಿ ವನಕೇರಿ, ಅಕ್ಕಮಹಾದೇವಿ ಪಾಟೀಲ, ಗೌರಮ್ಮ ರಡ್ಡಿ ವಿಜಯಪುರ, ವೀರಾರಡ್ಡಿ ಬಟಗೇರಾ, ಜೋಸುಲಾ ಸದಾನಂದ ಶಾಸ್ತ್ರಿ,ಮೋಹನಮಠ ಕಣವಿ, ಡಾ| ಬಸನಗೌಡ ಪಾಟೀಲ, ಹೇಮಂತಕುಮಾರ ಅಜ್ಜಂಪುರ ವೇದಿಕೆ ಮೇಲಿದ್ದರು. ರಡ್ಡಿ ಸಮಾಜದ ಗಣ್ಯರು, ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.