ಕಾರಟಗಿ: ಪಟ್ಟಣದ ದಲಾಲಿ ಬಜಾರ್‌ನಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ರಡ್ಡಿ ಸಮಾಜ ಬಾಂಧವರು ವಿಜೃಂಭಣೆಯಿಂದ ಆಚರಿಸಿದರು. ದಲಾಲಿ ಬಜಾರ್‌ನ ಹೇಮರಡ್ಡಿ ವೃತ್ತದಲ್ಲಿ ಸಮಾಜ ಬಾಂಧವರು ಹೇಮರಡ್ಡಿ ಮಲ್ಲಮ್ಮ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ನಂತರ ಸಮಾಜದ ಮುಖಂಡ ಯಂಕನಗೌಡ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ 595ನೇ ಜಯಂತ್ಯುತ್ಸವ ಆಚರಿಸುತ್ತಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ. ಶಿವಶರಣೆ ಹೇಮರಡ್ಡಿ ಮಲ್ಲನವರ ಕಾಯಕ ನಿಷ್ಠೆಯನ್ನು ಎಲ್ಲರೂ ಪಾಲಿಸಬೇಕು. ಉತ್ತಮ ಮನೋಭಾವ ಬೆಳೆಸಿಕೊಳ್ಳುವ ಮೂಲಕ ದಾನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡಿ. ಮಲ್ಲಮನವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಅವರಂತೆ ಜೀವನದಲ್ಲಿ ಸದ್ಗತಿ ಹೊಂದಬೇಕು ಎಂದರು.
ಹೇಮರಡ್ಡಿ ಮಲ್ಲಮ್ಮ ಆದರ್ಶ ಪಾಲಿಸಿ
Advertisement
ಎಪಿಎಂಸಿ ಅಧ್ಯಕ್ಷ ಶರಣಪ್ಪ ಬಾವಿ, ಉದ್ಯಮಿ ಯಂಕಾರಡ್ಡೆಪ್ಪ, ತಾಪಂ ಸದಸ್ಯ ದಾನನಗೌಡ, ಅಮರೇಶಪ್ಪ ಹುಳ್ಕಿಹಾಳ, ಶ್ರೀನಿವಾಸ ರಡ್ಡಿ, ಅಮರೇಶ ಮೈಲಾಪುರ, ಬಾಪುಗೌಡ ಹುಳ್ಕಿಹಾಳ, ಮಹೇಶ ಮೈಲಾಪೂರ ಇತರರು ಇದ್ದರು.
ಗಂಗಾವತಿ: ಹೇಮರಡ್ಡಿ ಮಲ್ಲಮ್ಮ ಮನೆಯಲ್ಲಿಯ ಕೌಟುಂಬಿಕ ಸಮಸ್ಯೆಗಳಿಗೆ ವಿಚಲಿತರಾಗದೆ ಇಂದಿಗೂ ಜನಮಾನಸದಲ್ಲಿ ನೆಲೆಯೂರಿದ್ದಾರೆಂದರೆ ಅದಕ್ಕೆ ಕಾರಣ ಆ ತಾಯಿಯ ಶಾಂತಿ, ಸಹನೆ, ತಾಳ್ಮೆ ಎಂದು ವಕೀಲರಾದ ಮಹಾಬಳೇಶ್ವರ ಹಾಸಿನಾಳ ಹೇಳಿದರು.
ನಗರದ ಪಬ್ಲಿಕ್ ಕ್ಲಬ್‌ನಲ್ಲಿ ಬಸವ ಜಯಂತಿ ಆಚರಣೆ ಸಮಿತಿ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಹೇಮರಡ್ಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಭಕ್ತ ಕನಕದಾಸ, ಸೂಫಿ ಸಂತ ಸೇರಿದಂತೆ ಮಹಾತ್ಮರ ಜಯಂತಿಗಳು ಇದೇ ಅನುಭವ ಮಂಟಪ ವೇದಿಕೆಯಲ್ಲಿ ಆಚರಿಸುವಂತಾಗಲಿ. ಅದಕ್ಕೆ ಪಬ್ಲಿಕ್ ಕ್ಲಬ್ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.
ಸಾಹಿತಿ ಲಿಂಗಾರೆಡ್ಡಿ ಆಲೂರು ಅವರು ಹೇಮರೆಡ್ಡಿ ಮಲ್ಲಮ್ಮರವರ ಜೀವನ ಸಾಧನೆ ತಿಳಿಸಿದರು. ಸಂಚಾಲಕ ಡಾ| ಶಿವಕುಮಾರ ಮಾಲಿಪಾಟೀಲ್, ಸುರೇಶ ಸಿಂಗನಾಳ, ರಡ್ಡಿ ಸಮಾಜದ ಗೌರವಾಧ್ಯಕ್ಷ ಆರ್.ಪಿ. ರಡ್ಡಿ, ಕೆ. ಬಸವರಾಜ, ವಿರೇಶರೆಡ್ಡಿ, ಶಾಹೀದಾಬೇಗಂ ಇದ್ದರು.