ಲೋಕಾಪುರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮನಂತಹ ದಾರ್ಶನಿಕರ ತತ್ವಗಳು ಸದಾಕಾಲ ಆದರ್ಶ ಮತ್ತು ಪ್ರೇರಣೆಯಾಗಿವೆ. ಹೇಮರಡ್ಡಿ ಮಲ್ಲಮ್ಮನ ತತ್ವಾದರ್ಶ ಪಾಲಿಸಿಕೊಂಡು ಬಂದು ಇತರೆ ಸಮಾಜದವರಿಗೆ ಮಾದರಿಯಾಗಿದ್ದಾರೆ ಎಂದು ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆರ್.ಎಸ್.ತಳೇವಾಡ ಹೇಳಿದರು.
ಪೆಟ್ಲೂರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಸಹಯೋಗದಲ್ಲಿ ಹೇಮ ವೇಮ ಸಭಾಭವನ ಉದ್ಘಾಟನೆ ಹಾಗೂ ಕಲ್ಯಾಣ ಮಂಟಪ ಅಡಿಗಲ್ಲು ಉದ್ಘಾಟಿಸಿ ಅವರು ಮಾತನಾಡಿದರು. ರಡ್ಡಿ ಸಮಾಜದ ಮುಖಂಡ ದಯಾನಂದ ಪಾಟೀಲ ಮಾತನಾಡಿದರು. ನಿವೃತ್ತ ಸಿಸಿಎಫ್ ಕೃಷ್ಣಾ ಉದಪುಡಿ, ಡಾ| ಎಚ್.ಆರ್.ಕತ್ತಿ, ಕಲ್ಲಪ್ಪ ಸಬರದ ಮಾತನಾಡಿದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಸಾಧಕರನ್ನು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಜಮಖಂಡಿ ಓಲೆಮಠದ ಡಾ| ಅಭಿನವ ಚನ್ನಬಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಡಾ| ಅಶೋಕ ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರನ್ನ ನಗರ ರೈತರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆರ್.ಎಸ್. ತಳೇವಾಡ ಉದ್ಘಾಟಿಸಿದರು.
ಸತೀಶ ಬಂಡಿವಡ್ಡರ, ರಾಜು ಎಸ್., ದಯಾನಂದ ಪಾಟೀಲ, ಹಣಮಂತ ತುಳಸಿಗೇರಿ, ಕಲ್ಲಪ ಸಬರದ, ಕುಮಾರ ಹುಲಕುಂದ, ಕೆ.ಆರ್. ಮಾಚಪ್ಪನವರ, ಗೌಡಪ್ಪ ಕಮಕೇರಿ, ಅರುಣ ಕಾರಜೋಳ, ಬಿ.ವಿ. ಹಲಕಿ, ಪ್ರಕಾಶಚಿತ್ತರಗಿ, ಹಣಮಂತ ಯಡಹಳ್ಳಿ, ಸಂಜಯ ತಳೇವಾಡ, ಲೋಕಣ್ಣ ಕತ್ತಿ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಉಪಾಧ್ಯಕ್ಷ ಶ್ರೀನಿವಾಸ ಪಾಟೀಲ, ಕಾರ್ಯದರ್ಶಿ ತಿಪ್ಪಣ್ಣ ಹಲಗತ್ತಿ, ಸದಸ್ಯರಾದ ಸದಾಶಿವ ಪಾಟೀಲ, ಸದಾಶಿವ ಯಡಹಳ್ಳಿ, ಗುರುದತ್ತ ಪಾಟೀಲ, ವೆಂಕಪ್ಪ ಪಾಟೀಲ, ಶ್ರೀಧರ ಪಾಟೀಲ, ಸದಾಶಿವ ಪಾಟೀಲ, ಕೃಷ್ಣಗೌಡ ಪಾಟೀಲ, ಡಾ| ಸಿದ್ದಣ್ಣ ಬಾಡಗಿ, ಗುರುಪಾದಯ್ಯ ಶಿವಯೋಗಿಮಠ, ಭೀಮಪ್ಪ ಬಡಸಲ, ವೆಂಕರಡ್ಡಿ ಮಳಲಿ ಇದ್ದರು.