Advertisement

ಹಂತ್ರ ಹಿಡಿದು ಬಂದ ಹೇಮಂತ್‌

03:44 PM Jun 04, 2017 | |

ಈ ಹಿಂದೆ “ಸ’ ಎಂಬ ಚಿತ್ರ ನಿರ್ದೇಶಿಸಿದ್ದ ಹೇಮಂತ್‌ ಹೆಗಡೆ, ಮತ್ತೆ ಯಾವ ಚಿತ್ರಕ್ಕೆ ಕೈ ಹಾಕಿದ್ದಾರೆ ಎಂಬ ಬಗ್ಗೆ ಗಾಂಧಿನಗರದಲ್ಲಿ ಒಂದು ಪ್ರಶ್ನೆ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೇಮಂತ್‌ ಹೆಗಡೆ, ಈಗ ಸದ್ದಿಲ್ಲದೆಯೇ ಒಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ. ಆ ಚಿತ್ರಕ್ಕೆ “ಹಂತ್ರ’ ಎಂದು ಹೆಸರಿಟ್ಟಿದ್ದಾರೆ.

Advertisement

 “ಹಂತ್ರ’ ಎಂಬುದು ಸಂಸ್ಕೃತ ಪದ. ನಿರ್ದೇಶಕ ಹೇಮಂತ್‌ ಹೇಳುವಂತೆ, “ಹಂತ್ರ’ ಅಂದರೆ “ಹಂಟರ್‌’ ಎಂಬರ್ಥವಂತೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಹೇಮಂತ್‌. ಇನ್ನು, ಎಕೆಕೆ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಈ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ ಕಥೆಯೇ ಮುಖ್ಯವಾಗಿದ್ದು, ಈಗಷ್ಟೇ ಪಾತ್ರವರ್ಗವನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರಂತೆ ಹೇಮಂತ್‌. ಅಂದಹಾಗೆ, ಸದ್ಯಕ್ಕೆ ಪಾರ್ವತಿ ನಾಯರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದೊಂದು ಒಳ್ಳೆಯ ಸಿನಿಮಾ ಆಗುತ್ತೆ ಎಂಬ ವಿಶ್ವಾಸವಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೊಂದಿರುವ ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಒಳ್ಳೆಯ ಸಿನಿಮಾ ಆಗಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹೇಮಂತ್‌ಹೆಗಡೆ, ಇಷ್ಟರಲ್ಲೇ ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಞರ ಆಯ್ಕೆ ಮಾಡಿ, ಜೂನ್‌ 23ಕ್ಕೆ ಮುಹೂರ್ತ ನಡೆಸುವ ಉದ್ದೇಶವಿದೆ’ ಎಂದಷ್ಟೇ ಹೇಳುತ್ತಾರೆ ಹೇಮಂತ್‌.

Advertisement

Udayavani is now on Telegram. Click here to join our channel and stay updated with the latest news.

Next