Advertisement

ಹೆಮ್ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು: ಮೇನಕಾ ಬೆಂಬಲಿಸಿದ ಹೇಮಾ ಮಾಲಿನಿ

04:54 PM Apr 14, 2018 | Team Udayavani |

ಮುಂಬಯಿ : 12 ವರ್ಷಕ್ಕಿಂತ ಕೆಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂಬ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಅಭಿಪ್ರಾಯವನ್ನು ಹಿರಿಯ ನಟಿ ಮತ್ತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಬೆಂಬಲಿಸಿದ್ದಾರೆ.

Advertisement

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಕ್‌ಸೋ ಕಾಯಿದೆಯಲ್ಲಿ  12 ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಣು  ಮಕ್ಕಳ ಮೇಲಿನ ಅತ್ಯಾಚಾರದ ಅಪರಾಧಕ್ಕೆ ಮರಣ ದಂಡನೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಕಾಯಿದೆಗೆ ತಿದ್ದುಪಡಿ ತರಲು ತಾನು ಕ್ಯಾಬಿನೆಟ್‌ ಟಿಪ್ಪಣಿಯನ್ನು ಸಿದ್ಧಪಡಿಸಿ ಮಂಡಿಸುವುದಾಗಿ ಸಚಿವೆ ಮೇನಕಾ ಗಾಂಧಿ ನಿನ್ನೆ ಹೇಳಿದ್ದರು. 

“ಶಿಶುಗಳನ್ನು ಕೂಡ ಬಿಡದ ಮೃಗಗಳ ವಿರುದ್ಧ ರಾಷ್ಟ್ರೀಯ  ಆಂದೋಲನಕ್ಕೆ ಟ್ವಿಟರ್‌ನಲ್ಲಿ ಕರೆ ನೀಡಿದ ನಟಿ ಹೇಮಾ ಮಾಲಿನಿ, ಈ ಆಂದೋಲನವನ್ನು ಮಾಧ್ಯಮ ಬೆಂಬಲಿಸಬೇಕು ಎಂದು ಹೇಳಿದರು. 

“ದಿನಂಪ್ರತಿ ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಈ ಉದ್ದನೆಯ ಪಟ್ಟಿಯಲ್ಲಿ ಕಥುವಾ ಮತ್ತು ಉನ್ನಾವೋ ಕೇವಲ ಎರಡು ಉದಾಹರಣೆಗಳು ಮಾತ್ರ. ಮನಸ್ಸು ಮತ್ತು ಹೃದಯವೇ ಇಲ್ಲ ಈ ಅತ್ಯಾಚಾರಿಗಳನ್ನು ಮನುಷ್ಯರೆಂದು ಕರೆಯಲು ಸಾಧ್ಯವೇ ? ಅವರು ನಿಜಕ್ಕೂ ಮೃಗಗಳು; ಅವರು ಎಸಗುವ ಹೀನ ಮತ್ತು ನೀಚ ಕೃತ್ಯಕ್ಕೆ ಅವರಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು’ ಎಂದು ಮಥುರಾ ಕ್ಷೇತ್ರದ ಸಂಸದೆಯಾಗಿರುವ ಹೇಮಾ ಮಾಲಿನಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next