Advertisement

Hema Malini: ಅನಿವಾರ್ಯವಾಗಿದ್ದರೆ ತೆರೆಮೇಲೆ ಕಿಸ್ಸಿಂಗ್ ಸೀನ್‌ ಮಾಡಬಲ್ಲೇ.. ಹೇಮಾ ಮಾಲಿನಿ

05:37 PM Aug 26, 2023 | Team Udayavani |

 ಮುಂಬಯಿ: ಕರಣ್‌ ಜೋಹರ್ ನಿರ್ದೇಶನದ “ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ” ಈ ವರ್ಷದ ಬಿಟೌನ್‌ ಹಿಟ್ ಸಿನಿಮಾಗಳ‌ ಸಾಲಿಗೆ ಸೇರುವ ಸಿನಿಮಾ. ಬಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ ಸಿನಿಮಗಳಲ್ಲೊಂದು.

Advertisement

ಆಲಿಯಾ ಭಟ್‌ – ರಣವೀರ್‌ ಸಿಂಗ್‌ ಜೋಡಿಯಾಗಿ ನಟಿಸಿದ ಸಿನಿಮಾದಲ್ಲಿ ಮಾರ್ಡನ್‌ ಲವ್‌ ಸ್ಟೋರಿಯನ್ನು ಕೌಟುಂಬಿಕ ಹಿನ್ನೆಲೆಯಲ್ಲಿಯೂ ತೋರಿಸಲಾಗಿದೆ. ಅನೇಕ ವಿಚಾರಗಳನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಸಿನಿಮಾ ಎಷ್ಟು ಸದ್ದು ಮಾಡಿತ್ತೋ ಅಷ್ಟೇ ಸದ್ದನ್ನು ಸಿನಿಮಾದಲ್ಲಿನ ಧರ್ಮೇಂದ್ರ ಹಾಗೂ ನಟಿ  ಶಬಾನಾ ಅಜ್ಮಿ ಅವರ ದೃಶ್ಯ ಕೂಡ ಮಾಡಿತ್ತು.

ನಟ ಧರ್ಮೇಂದ್ರ ಅವರು ನಟಿ  ಶಬಾನಾ ಅಜ್ಮಿ ಅವರಿಗೆ ಕಿಸ್‌ ಕೊಡುವ ದೃಶ್ಯವೊಂದು ಸಿನಿಮಾದಲ್ಲಿದೆ. ಈ ದೃಶ್ಯ ಸಿನಿಮಾದೊಂದಿಗೆ ಚರ್ಚೆಯಾಗಿತ್ತು. 2007 ರಲ್ಲಿ ತೆರೆಗೆ ಬಂದಿದ್ದ ಅನುರಾಗ್‌ ಬಸು ನಿರ್ದೇಶನದ ʼಲೈಫ್‌ ಇನ್‌ ಎ ಮೆಟ್ರೋʼ ಸಿನಿಮಾದಲ್ಲಿ ನಟ ಧರ್ಮೇಂದ್ರ ಅವರು ಸಹ ನಟಿ ನಫೀಸಾ ಅಲಿ ಅವರೊಂದಿಗೆ ಕಿಸ್ಸಿಂಗ್‌ ದೃಶ್ಯವನ್ನು ಮಾಡಿದ್ದರು. ಆ ಬಳಿಕ ಇದೀಗ 18 ವರ್ಷಗಳ ಬಳಿಕ ಅವರು ಕಿಸ್ಸಿಂಗ್‌ ಸೀನ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿನ ಕಿಸ್ಸಿಂಗ್‌ ಸೀನ್‌ ಬಗ್ಗೆ ಈಗಾಗಲೇ ಹಲವು ಚರ್ಚೆಗಳಾಗಿವೆ. ಇದೀಗ ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಈ ದೃಶ್ಯಕ್ಕೆ ಸಂಬಂಧಿಸಿ ಕೊಟ್ಟಿರುವ ಪ್ರತಿಕ್ರಿಯೆ ವೈರಲ್‌ ಆಗಿದೆ.

Advertisement

ಹೇಮಾ ಮಾಲಿನಿ ಅವರು ಇನ್ನು ಕೂಡ “ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ” ಸಿನಿಮಾವನ್ನು ನೋಡಿಲ್ಲ. ʼಇಂಡಿಯಾ.ಕಾಂʼ ಜೊತೆಗಿನ ಸಂದರ್ಶನವೊಂದರಲ್ಲಿ ಅವರಿಗೆ ಈ ದೃಶ್ಯದ ಕುರಿತು ಪ್ರಶ್ನೆ ಕೇಳಲಾಗಿದೆ.

ನಿಮ್ಮ ಪತಿ ಧರ್ಮೇಂದ್ರ ರೀತಿಯ ʼಕಿಸ್ಸಿಂಗ್‌ ಸೀನ್‌ʼ ಮಾಡುವ ಅನಿವಾರ್ಯ ಸಿನಿಮಾದಲ್ಲಿ ಬಂದರೆ ಅದನ್ನು ನೀವು ಒಪ್ಪಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು “ಖಂಡಿತ ಮಾಡುತ್ತೇನೆ, ಯಾಕೆ ಮಾಡಲ್ಲ, ಒಂದು ವೇಳೆ ಅದು ಚಿತ್ರಕ್ಕೆ ಸಂಬಂಧಿಸಿದಾದರೆ, ಅನಿವಾರ್ಯವಾಗಿದ್ದರೆ ಬಹುಶಃ ನಾನು ಆ ದೃಶ್ಯವನ್ನು ಮಾಡಬಲ್ಲೇ” ಎಂದು 74ರ ಹರೆಯದ ಹೇಮಾ ಮಾಲಿನಿ ಬೋಲ್ಡ್‌ ಆಗಿಯೇ ಉತ್ತರಿಸಿದ್ದಾರೆ.

“ರಾಕಿ ಔರ್ ರಾಣಿ ಕೀ ಪ್ರೇಮ್ ನಲ್ಲಿ ಕಿಸ್ಸಿಂಗ್‌ ಸೀನ್‌ ಧರ್ಮೇಂದ್ರ ಹೇಳಿದ್ದೇನು?:

“ಸಿನಿಮಾದಲ್ಲಿ ನನ್ನ ಹಾಗೂ ಶಬಾನಾ ಅವರ ನಡುವಿನ ಕಿಸ್ಸಿಂಗ್‌ ಸೀನ್‌ ದೃಶ್ಯದಿಂದ ಎಲ್ಲರಿಗೂ ಅಚ್ಚರಿಯಾಗಿದೆ ಎನ್ನುವುದನ್ನು ನಾನು ಕೇಳಲ್ಪಟ್ಟೆ. ಅದೇ ಸಮಯದಲ್ಲಿ ಪ್ರೇಕ್ಷಕರು ಇದಕ್ಕೆ ಚಪ್ಪಾಳೆಯನ್ನೂ ತಟ್ಟಿದ್ದಾರೆ. ಜನ ನಿರೀಕ್ಷೆ ಇದನ್ನು ಮಾಡಿರಲಿಲ್ಲ, ಇದ್ದಕ್ಕಿದ್ದಂತೆ ಈ ದೃಶ್ಯ ಬರುವುದರಿಂದ ಇದು ಪ್ರಭಾವ ಬೀರಿದೆ ಎಂದು ನನಗೆ ಅನ್ನಿಸುತ್ತದೆ. ನಾನು ಕೊನೆಯ ಬಾರಿಗೆ ನಫೀಸಾ ಅಲಿ ಅವರೊಂದಿಗೆ ʼಲೈಫ್ ಇನ್ ಎ ಮೆಟ್ರೋʼ ಚಿತ್ರದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೆ, ಆ ಸಮಯದಲ್ಲೂ ಜನರು ಅದನ್ನು ಮೆಚ್ಚಿದ್ದರು” ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next