Advertisement
Related Articles
Advertisement
ಗಂಡನೊಂದಿಗೆ ಅನೋನ್ಯವಾಗಿದ್ದರೂ ನಟಿ ಹೇಮಾ ಮಾಲಿನಿ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಧರ್ಮೇಂದ್ರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ವಾಸಿಸುತ್ತಿದ್ದಾರೆ.
ಇತ್ತೀಚೆಗೆ ʼಲೆಹ್ರೆನ್ʼ ನಡೆಸಿದ ಸಂದರ್ಶನದಲ್ಲಿ ನಟಿ ಹೇಮಾ ಮಾಲಿನಿ ಗಂಡನಿಂದ ದೂರ ಉಳಿದು, ಮಕ್ಕಳೊಂದಿಗೆ ವಾಸಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ʼಟಗರುʼ2ʼ ಗೆ ರೆಡಿಯಾದ ಶಿವಣ್ಣ? ಪೋಸ್ಟರ್ ವೈರಲ್
“ಹೀಗೆ ಬಾಳಳು ಯಾರೂ ಇರಲು ಇಷ್ಟಪಡುವುದಿಲ್ಲ. ಅದು ತಾನಾಗಿಯೇ ಸಂಭವಿಸುತ್ತದೆ. ಇದನ್ನು ನೀವು ಒಪ್ಪಿಕೊಳ್ಳಬೇಕು. ಒಪ್ಪದಿದ್ದರೆ ಹೀಗೆ ಬಾಳಲು ಯಾರಿಗೂ ಆಗುವುದಿಲ್ಲ.ಪ್ರತಿಯೊಬ್ಬ ಮಹಿಳೆ ಸಾಮಾನ್ಯ ಕುಟುಂಬದಂತೆಯೇ ಗಂಡ, ಮಕ್ಕಳನ್ನು ಹೊಂದಲು ಬಯಸುತ್ತಾರೆ. ನನ್ನ ಜೀವನದಲ್ಲಿ ಅದೆಲ್ಲೋ ದಾರಿ ತಪ್ಪಿತು” ಎಂದಿದ್ದಾರೆ.
ನನಗೆ ಇದರ ಬಗ್ಗೆ ಕೆಟ್ಟ ಭಾವನೆ ಅಥವಾ ಬೇಸರವಿಲ್ಲ. ನಾನು ನನ್ನಷ್ಟಕ್ಕೇ ಸಂತೋಷವಾಗಿದ್ದೇನೆ. ನನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದೇನೆ. ಧರ್ಮೇಂದ್ರ ಯಾವಾಗಲೂ ನನ್ನ ಜೊತೆಯೇ ಇರುತ್ತಾರೆ. ಅವರು (ಧರ್ಮೇಂದ್ರ) ಯಾವಾಗಲೂ ಮಕ್ಕಳ ಮದುವೆ ಬೇಗ ಆಗಬೇಕು ಎನ್ನುತ್ತಿರುತ್ತಾರೆ. ಆಗುತ್ತದೆ. ಸರಿಯಾದ ಸಮಯ ಬಂದಾಗ, ಸರಿಯಾದ ವ್ಯಕ್ತಿ ಬರುತ್ತಾನೆ. ದೇವರು ಮತ್ತು ಗುರುಗಳ ಆಶೀರ್ವಾದದಿಂದ ಎಲ್ಲವೂ ಸಂಭವಿಸುತ್ತದೆ ಎಂದು ಅವರ ಬಳಿ ಹೇಳುತ್ತೇನೆ ಎಂದರು.
ನನ್ನ ತಾಯಿ ಜಯ ಚಕ್ರಾವತಿ ಜೀತೇಂದ್ರ ಅವರನ್ನು ಮದುವೆಯಾಗಲು ಮನವೊಲಿಸಲು ಯತ್ನಿಸಿದ್ದರು ಎನ್ನುವ ಅಂಶ “ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್” ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿಲಾಗಿದೆ.
ಧರ್ಮೇಂದ್ರ – ಪ್ರಕಾಶ್ ದಂಪತಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್ ವಿಜೇತಾ, ಅಜೀತಾ ಡಿಯೋಲ್ ಎನ್ನುವ ಮಕ್ಕಳಿದ್ದಾರೆ. ಕಳೆದ ತಿಂಗಳು ನಡೆದ ಸನ್ನಿ ಡಿಯೋಲ್ ಪುತ್ರ ಕರಣ್ ಡಿಯೋಲ್ ಅವರ ಮದುವೆ ಕಾರ್ಯಕ್ರಮದಲ್ಲಿ ಹೇಮಾ ಮಾಲಿನಿ ಹಾಗೂ ಅವರ ಪುತ್ರಿಯರು ಭಾಗಿಯಾಗಿರಲಿಲ್ಲ.