Advertisement

ಮುಂಬಯಿ ಅಗ್ನಿ ದುರಂತಕ್ಕೆ ವಲಸಿಗರೇ ಕಾರಣ: ಸಂಸದೆ ಹೇಮಾ ವಿವಾದ

03:51 PM Dec 29, 2017 | udayavani editorial |

ಮುಂಬಯಿ : ಮಹಾನಗರದ ಲೋವರ್‌ ಪರೇಲ್‌ನ ಕಮಲಾ ಮಿಲ್ಸ್‌ ಆವರಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ನಗರದ ಜನಸಂಖ್ಯೆ ಹೆಚ್ಚುತ್ತಿರುವುದು ಮತ್ತು ಭಾರೀ ಸಂಖ್ಯೆಯಲ್ಲಿ ವಲಸಿಗರು ಈ ನಗರದತ್ತ ಹರಿದು ಬರುತ್ತಿರುವುದೇ ಕಾರಣ ಎಂದು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಹಿರಿಯ ಹಿಂದಿ ಚಿತ್ರ ನಟಿ ಹೇಮಾಮಾಲಿನಿ ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

Advertisement

ಹದಿನಾಲ್ಕು ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಮುಂಬಯಿಯ ಕಮಲಾ ಮಿಲ್ಸ್‌ ಅಗ್ನಿ ದುರಂತಕ್ಕೆ ವಲಸಿಗರೇ ಕಾರಣ ಎಂದು ದೂರಿರುವ 65ರ ಹರೆಯದ ಮಥುರಾ ಕ್ಷೇತ್ರದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು, “ಮುಂಬಯಿ ನಗರಾಡಳಿತೆಯು ಎಲ್ಲ ವಲಸಿರಗರಿಗೆ ಇಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿದೆ; ಆದರೆ ಈ ಮಹಾನಗರದಲ್ಲಿ ಒಂದೇ ಸಮನೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಅನುಲಕ್ಷಿಸಿ ನಗರಾಡಳಿತೆಯು ವಲಸಿಗರ ಸಂಖ್ಯೆಯನ್ನು ನಿರ್ಬಂಧಿಸಬೇಕಾಗಿತ್ತು’ ಎಂದು ಹೇಳಿದ್ದಾರೆ. 

“ಪ್ರತೀ ನಗರಕ್ಕೂ ಜನಸಂಖ್ಯೆಯ ವಿಚಾರದಲ್ಲಿ ಒಂದು ಮಿತಿ ಎಂಬುದು ಇರಲೇಬೇಕು. ಆ ಮಿತಿ ಮೀರಿದ ಸಂದರ್ಭದಲ್ಲಿ ವಲಸಿಗರಿಗೆ ಬೇರೆ ನಗರಕ್ಕೆ ಹೋಗುವಂತೆ ಹೇಳಬೇಕು’ ಎಂದು ಹೇಮಾ ಪ್ರತಿಕ್ರಿಯಿಸಿದರು.

ಮಹಾರಾಷ್ಟ್ರ ಬಿಜೆಪಿ ನಾಯಕಿ ಶಾಯಿನಾ ಎನ್‌ ಸಿ ಅವರು “ಈ ರೀತಿಯ ವಾದ ತುಂಬಾ ಸರಳೀಕೃತವಾದದ್ದು; ಆದರೆ ನಗರಾಡಳಿತೆಯು ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿ ಕಮಲಾ ಮಿಲ್ಸ್‌ ಆವರಣದೊಳಗಿನ ಅನಧಿಕೃತ, ಕಾನೂನು ಬಾಹಿರ ಪಬ್‌ಗ ಒಪ್ಪಿಗೆ ಕೊಟ್ಟವರನ್ನು ಈ ದುರಂತಕ್ಕೆ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next