Advertisement

ಮೊದಲ ದಿನವೇ ಕರೆಗಳ ಮಹಾಪೂರ! ಹೊರನಾಡ ಕನ್ನಡಿಗರ “ಸಹಾಯವಾಣಿ’

02:41 AM Apr 29, 2020 | Sriram |

ಮಂಗಳೂರು: ಲಾಕ್‌ಡೌನ್‌ನಿಂದಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಸರಕಾರ ಆರಂಭಿಸಿರುವ “ಸಹಾಯವಾಣಿ’ಗೆ ಮೊದಲ ದಿನವೇ ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ 600ಕ್ಕೂ ಅಧಿಕ ಕರೆಗಳು ಬಂದಿವೆ

Advertisement

ಕರೆಗಳ ಆಧಾರದಲ್ಲಿ ಸಂಬಂಧಪಟ್ಟ ರಾಜ್ಯದ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ ತತ್‌ಕ್ಷಣಕ್ಕೆ ಬೇಕಾದ ತುರ್ತು ಸಹಾಯವನ್ನು ನೀಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಈ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿದ್ದರು.

ಮೊದಲ ದಿನ ಹೆಚ್ಚಾಗಿ ಹೊರ ರಾಜ್ಯಗಳಿಂದ ಊರಿಗೆ ಯಾವ ರೀತಿ ಬರಬಹುದು, ಅದಕ್ಕೆ ಅವಕಾಶ ಇದೆಯೇ, ಎಲ್ಲಿ ಪಾಸ್‌ ನೀಡಲಾಗುತ್ತದೆ. ತುರ್ತು ವೈದ್ಯಕೀಯ ಹಿನ್ನೆಲೆಯಲ್ಲಿ ಬರುವುದಾದರೆ ಏನು ಮಾಡಬೇಕು, ಪಾಸ್‌ಗೆ ಬೇಡಿಕೆ ಸಲ್ಲಿಸಲು ಏನೇನು ಕಾಗದಪತ್ರಗಳು ಬೇಕು, ಎಲ್ಲೆಲ್ಲಿಯ ಅನುಮತಿ ಬೇಕು ಎಂಬ ಪ್ರಶ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು ಎಂದು ಸಹಾಯವಾಣಿ ಕೇಂದ್ರದ ಮೂಲಗಳು ತಿಳಿಸಿವೆ.

ಇನ್ನು ಕೆಲವರು ನಮಗೆ ಬೇಕಾದ ಆಹಾರ ಸಿಗುತ್ತಿಲ್ಲ.. ತಾವಿರುವಲ್ಲಿ ಸರಿಯಾದ ವಸತಿ ವ್ಯವಸ್ಥೆಯೂ ಇಲ್ಲ. ಮೂಲ ಸೌಕರ್ಯಗಳಿಲ್ಲ, ಸ್ವತ್ಛತೆಯತ್ತ ಹೆಚ್ಚಿನ ಗಮನ ನೀಡುವುದಕ್ಕೂ ಆಗುತ್ತಿಲ್ಲ ಎಂಬ ದೂರುಗಳಿದ್ದವು.ಕೋವಿಡ್ 19 ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಪ್ತ ಸಹಾಯವಾಣಿಯೊಂದನ್ನು ಸ್ಥಾಪಿಸುವ ತುರ್ತು ಆವಶ್ಯಕತೆಯ ಬಗ್ಗೆ ಇತ್ತೀಚೆಗೆ “ಉದಯವಾಣಿ’ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಅವ‌ರ
ಜತೆ ಆಯೋಜಿಸಿದ್ದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಗಮನ ಸೆಳೆಯಲಾಗಿತ್ತು. ಇದರಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಮೇರೆಗೆ ರಾಜ್ಯ ಸರಕಾರ ದಿನದ 24 ಗಂಟೆ ಕಾರ್ಯಾಚರಿಸುವ ಈ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದೆ.

Advertisement

ಸಹಾಯವಾಣಿ ಸಂಖ್ಯೆ: 080 22636800

Advertisement

Udayavani is now on Telegram. Click here to join our channel and stay updated with the latest news.

Next