Advertisement

ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆ  ನೆರವು

06:20 AM Aug 05, 2017 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಮಂಜುನಾಥ ಪೂಜಾರಿ ಅವರ ಪುತ್ರ ನಿಶ್ಚಿತ್‌ (2 ವರ್ಷ) ಕಳೆದ ಆರು ತಿಂಗಳಿನಿಂದಲೂ ಬ್ಲಿಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಜ.9ರಂದು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನು ಗುಣಮುಖನಾಗಲು ಹೆಚ್ಚಿನ ಚಿಕಿತ್ಸೆಯ ಅನಿವಾರ್ಯತೆ ಇದ್ದು ವೈದ್ಯಕೀಯ ವೆಚ್ಚಕ್ಕಾಗಿ ಸುಮಾರು ರೂ.8 ಲಕ್ಷಕ್ಕೂ ಅಧಿಕ ಮೊತ್ತ ತಗಲುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉದಯವಾಣಿ ಜನಪರ ಕಾಳಜಿ ವಹಿಸಿ ಜು. 29 ಶನಿವಾರಂದು ‘ಬ್ಲಡ್‌ ಕ್ಯಾನ್ಸರ್‌: ಬಾಲಕನ ಚಿಕಿತ್ಸೆಯ ನೆರವಿಗೆ ಮನವಿ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಚಿತ್ರ ಸಹಿತ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲಿಯೇ ಮುಂಜಾನೆಯ ಸ್ಥಳೀಯ ಸಂಘಟನೆಗಳು ವಾಟ್ಸ್ಯಾಪ್‌ ಗುಂಪುಗಳಲ್ಲಿ ನಿಧಿ ಸಂಗ್ರಹದ ಬಗ್ಗೆ ಮಾಹಿತಿ ಹರಿಯಬಿಟ್ಟಿದ್ದಾರೆ.

Advertisement

ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಕುಂದಾಪುರದ ಪ್ರಮುಖ ಭಾಗದಲ್ಲಿ ಆಟೋ ರಿಕ್ಷಾದ ಹಿಂಬದಿಯಲ್ಲಿ ಬ್ಯಾನರ್‌ ಅಳವಡಿಸಿಕೊಂಡು ಧ್ವನಿವರ್ಧಕದ ಮೂಲಕ ಚಿಕಿತ್ಸೆಗೆ ನೆರವು ನೀಡುವಂತೆ ಆಗ್ರಹಿಸುವ ಮೂಲಕ ಪೋಷಕರ ಸಮ್ಮುಖದಲ್ಲಿ ನಿಧಿ ಸಂಗ್ರಹಕ್ಕೆ ಮುಂದಾಗುವ ಜತೆಗೆ ಮಾನವೀಯತೆ ಮೆರೆದಿದ್ದಾರೆ. ಈಗಾಗಲೇ ಉದಯವಾಣಿ ವರದಿಗೆ ಕುಂದಾಪುರ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿಕಿತ್ಸೆಗಾಗಿ ಮಾನವೀಯ ನೆರವು ಹರಿದು ಬಂದಿದೆ ಎಂದು ನಿಶ್ಚಿತ್‌ನ ತಂದೆ ಮಂಜುನಾಥ ಪೂಜಾರಿ ಬಾರಾಳಿಬೆಟ್ಟು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next