Advertisement

Paris Games; ಸೋದರನ ವೀಸಾಕ್ಕೆ ಸಹಾಯ ಮಾಡಿ: ವಿನೇಶ್‌ ಮನವಿ

12:32 AM Jul 31, 2024 | Team Udayavani |

ಪ್ಯಾರಿಸ್‌: ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಗಮಿಸಲು ತನ್ನ ಸೋದರನಿಗೆ ವೀಸಾ ದೊರಕಿಸಿಕೊಡಲು ಸಹಾಯ ಮಾಡಬೇಕು ಎಂದು ಕುಸ್ತಿಪಟು ವಿನೇಶ್‌ ಫೊಗಾಟ್‌ ಭಾರತದಲ್ಲಿರುವ ಫ್ರೆಂಚ್‌ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.

Advertisement

ಇದೇ ವೇಳೆ ಕೇಂದ್ರ ಕ್ರೀಡಾ ಸಚಿವ ಮನಸುಖ ಮಾಂಡವೀಯ ಅವರಿಗೂ ಮನವಿ ಮಾಡಿರುವ ವಿನೇಶ್‌, “ನನ್ನ ಸ್ಪರ್ಧೆಯನ್ನು ಕುಟುಂಬದವರು ವೀಕ್ಷಿಸಬೇಕು ಎಂದು ಬಯಸುತ್ತೇನೆ. ನನ್ನ ಸೋದರ ಸಲ್ಲಿಸಿದ್ದ ವೀಸಾ ಅರ್ಜಿ ತಿರಸ್ಕೃತಗೊಂಡಿದೆ. ಅವನು ಮತ್ತೆ ಅರ್ಜಿ ಸಲ್ಲಿಸಿದ್ದಾನೆ. ಅವನಿಗೆ ಸಹಾಯ ಮಾಡಿ’ ಎಂದಿದ್ದಾರೆ.

ಬಾಕ್ಸಿಂಗ್‌: ಅಮಿತ್‌ ಪಂಘಲ್‌ ಪರಾಭವ

ಮಾಜಿ ನಂ.1 ಬಾಕ್ಸರ್‌ ಅಮಿತ್‌ ಪಂಘಲ್‌ ಅವರ ಪ್ಯಾರಿಸ್‌ ಹೋರಾಟ ಒಂದೇ ಪಂದ್ಯಕ್ಕೆ ಸಮಾಪ್ತಿಯಾಗಿದೆ. 51 ಕೆಜಿ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅವರು ಜಾಂಬಿಯಾದ ಪ್ಯಾಟ್ರಿಕ್‌ ಚಿನ್ಯೆಂಬ ವಿರುದ್ಧ 1-4 ಅಂತರದಿಂದ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next