Advertisement

ಒಡಿಶಾ ಚಂಡಮಾರುತ ಪೀಡಿತ ಪ್ರದೇಶಕ್ಕೆ ನೆರವು

08:44 PM Jun 02, 2019 | sudhir |

ಉಡುಪಿ: ಜಪಾನ್‌ನ ಅಸೋಸಿಯೇಶನ್‌ ಆಫ್ ಮೆಡಿಕಲ್‌ ಡಾಕ್ಟರ್ ಆಫ್ ಏಶಿಯಾ (ಆಮx) ವತಿಯಿಂದ ಒಡಿಶಾದಲ್ಲಿ ಫೋನಿ ಚಂಡಮಾರುತ ಅಪ್ಪಳಿಸಿದ ಪ್ರದೇಶಗಳಿಗೆ ತೆರಳಿ ನಿರಾಶ್ರಿತರಿಗೆ ಟೆಂಟ್‌ಗಳನ್ನು ವಿತರಿಸಲಾಯಿತು.

Advertisement

ಮುನ್ನೆಚ್ಚರಿಕೆಗಳನ್ನು ತೆಗೆದು ಕೊಂಡಿದ್ದರೂ ಚುನಾವಣೆಯಾದ್ದರಿಂದ ಪರಿಹಾರ ಕಾರ್ಯಗಳು ವೇಗದಲ್ಲಿ ನಡೆಯುತ್ತಿಲ್ಲ. ಅನೇಕ ಸ್ವಯಂಸೇವಾ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿದೆಯಾದರೂ ಪೂರ್ಣ ವ್ಯವಸ್ಥೆಯಾಗಲು ಹಲವು ವರ್ಷ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಆಮx ಅಧ್ಯಕ್ಷ ಜಪಾನ್‌ನ ಡಾ| ಸುಗನಾಮಿ ಮತ್ತು ಭಾರತದ ಅಧ್ಯಕ್ಷ ಡಾ| ಎಂ.ಎಸ್‌. ಕಾಮತ್‌ ಅವರ ಮಾರ್ಗದರ್ಶನದಲ್ಲಿ ಪರಿಹಾರ ಸಾಮಗ್ರಿ ವಿತರಿಸಲಾಯಿತು. ಪುನನಿರ್ಮಾಣ ಕಾರ್ಯದಲ್ಲಿಯೂ ಆಮx ಸಹಕಾರ ನೀಡಲಿದೆ ಎಂದು ಸಾಮಗ್ರಿಗಳನ್ನು ವಿತರಿಸಿದ ಡಾ| ರಾಮಚಂದ್ರ ಕಾಮತ್‌ ತಿಳಿಸಿದ್ದಾರೆ.

ಒಡಿಶಾದ ಆರು ಜಿಲ್ಲೆಗಳಲ್ಲಿ ಚಂಡಮಾರುತ ಹಾನಿ ಮಾಡಿದೆ. ಅಲ್ಲಿನ ಶೇ.90 ಹುಲ್ಲಿನ ಮನೆಗಳು ಹಾನಿಗೊಂಡಿವೆ. ಮನೆಗಳು, ಕಾರ್ಖಾನೆಗಳು, ರಸ್ತೆ ಬದಿ ಅಂಗಡಿಗಳು ಛಾವಣಿ ರಹಿತ ವಾಗಿವೆ. ಶೇ.90 ತೆಂಗಿನ ಮರಗಳಿಗೆ ಹಾನಿಯಾಗಿದೆ. ಎಲ್ಲ ಸಂಪರ್ಕ ವ್ಯವಸ್ಥೆ ಹಾನಿಗೊಂಡಿವೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next