Advertisement
ಕಾರ್ಯಪಡೆ ಸೂಚಿಸಿರುವ 40 ನಿಯಮಗಳಲ್ಲಿ ಪಾಕಿಸ್ಥಾನ ಕಾರ್ಯಗತಗೊಳಿಸಿದ್ದು ಕೇವಲ ಒಂದು ನಿಯಮವನ್ನು ಮಾತ್ರ! ಹೀಗಾಗಿ ನಿಯಮದಂತೆ ಪಾಕಿಸ್ಥಾನವನ್ನು ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೆ ಪಾಕ್ ಸರಕಾರವು ಈಗಾಗಲೇ ಮಿತ್ರರಾಷ್ಟ್ರಗಳಾದ ಚೀನ, ಮಲೇಷ್ಯಾ ಮತ್ತು ಟರ್ಕಿಯೊಂದಿಗೆ ಮಾತುಕತೆ ನಡೆಸಿ ಕಪ್ಪು ಪಟ್ಟಿಗೆ ಸೇರಿಸದಂತೆ ಲಾಬಿ ಮಾಡಿದೆ. ಅಲ್ಲದೆ, ಎಫ್ಎಟಿಎಫ್ಗೆ ಈಗ ಚೀನದ ಕ್ಸಿಯಾನ್‌ಜಿಮ್ ಲಿಯು ಅವರೇ ಅಧ್ಯಕ್ಷರಾಗಿರುವ ಕಾರಣ ಅವರು ಪಾಕ್ ಪರ ಮೃದು ಧೋರಣೆ ತೋರುವ ಸಾಧ್ಯತೆ ಇದೆ.
ಉಗ್ರ ನಿಗ್ರಹಗಳಿಗೆ ಸಂಬಂಧಿಸಿ ಪಾಕ್‌ಗೆ ಹಲವು ಕಠಿನ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿತ್ತು. ಆದರೆ ಪಾಕ್ ಹೆಚ್ಚಿನದನ್ನು ಪಾಲಿಸಿಲ್ಲ. ನಿಲುವು ಬದಲಿಸಿದ ಚೀನ!
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಗೊಳಿಸಿದ ಭಾರತದ ನಿಲುವನ್ನು ವಿಶ್ವಸಂಸ್ಥೆಯ ವೇದಿಕೆ ಯಲ್ಲಿ ಪ್ರಸ್ತಾವಿಸಲು ಪಾಕ್‌ಗೆ ರಾಜಕೀಯ ನೆರವನ್ನು ಪರೋಕ್ಷ ವಾಗಿ ನೀಡಿದ್ದ ಚೀನ, ಈಗ ಆ ವಿಚಾರದಲ್ಲಿ ಉಲ್ಟಾ ಹೊಡೆದಿದೆ. ಈ ವಿಚಾರವನ್ನು ಭಾರತ ಮತ್ತು ಪಾಕ್ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದಿದೆ. ಈ ವಾರ ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಮೋದಿ ಭೇಟಿ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.