Advertisement

US: ಚೀನದಿಂದ ದೂರವಾಗಲು ಭಾರತ ನೆರವು: ವಿವೇಕ್‌ ರಾಮಸ್ವಾಮಿ 

12:37 AM Aug 28, 2023 | Team Udayavani |

ವಾಷಿಂಗ್ಟನ್‌: ಭಾರತದೊಂದಿಗೆ ಅಮೆರಿಕದ ದೃಢವಾದ ಸ್ನೇಹ ಸಂಬಂಧ ಹೊಂದುವುದು ಚೀನದಿಂದ ಅಮೆರಿಕ ಸ್ವಾತಂತ್ರ್ಯ ಹೊಂದುವುದಕ್ಕೆ ಸಹಕಾರಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಆಕಾಂಕ್ಷಿ ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ಹೇಳಿದ್ದಾರೆ.

Advertisement

ಪಿಟಿಐ ಜತೆಗಿನ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾವಿಸಿರುವ ವಿವೇಕ್‌, ಅಮೆರಿಕವು ಇಂದು ಆರ್ಥಿಕವಾಗಿ ಚೀನವನ್ನು ಅವಲಂಬಿಸಿದೆ. ಆದರೆ ಭಾರತದೊಂದಿಗೆ ಅಮೆರಿಕದ ಸ್ನೇಹ ಸಂಬಂಧ ದೃಢಪಟ್ಟರೆ ಚೀನದ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬಹುದು ಎಂದಿದ್ದಾರೆ. ಭಾರತೀಯ ಅಮೆರಿಕನ್‌ ವಿವೇಕ್‌ ಅಮೆರಿಕದ ಮೇಲಿನ ತಮ್ಮ ಕಾಳಜಿ ಮತ್ತು ಚೀನ ವಿರುದ್ಧ ನಿಲುವುಗಳಿಂದಲೇ ಅಮೆರಿಕನ್ನರ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next