Advertisement
ಕರ್ನಾಟಕ ಸರಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿ ಶಾಸನಬದ್ಧ ಅಧಿಕಾರ ಹೊಂದಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಕನ್ನಡ ಚಟುವಟಿಕೆಗಳನ್ನು ನಿಲ್ಲಿಸುವ ಹಂತಕ್ಕೆ ಬಂದಿದೆ. ಸರಕಾರ ನೀಡುವ ಅಲ್ಪ ಹಣದಲ್ಲಿಯೇ ವಾರ್ಷಿಕ ಚಟುವಟಿಕೆಗಳನ್ನು ನಡೆಸಿಕೊಂಡು ಗಡಿನಾಡು, ಹೊರನಾಡು, ಒಳನಾಡಿನಲ್ಲಿ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಹಿಂದಿನಿಂದಲೂ ಮಾಡುತ್ತಲಿದೆ. ಪ್ರಾಧಿಕಾರದ ಹಿಂದಿನ ಅಧ್ಯಕ್ಷರು ಕನ್ನಡದ ಅಭಿವೃದ್ಧಿಗಾಗಿ ಕೊಟ್ಟ ಎಷ್ಟೋ ವರದಿಗಳು ವಿಧಾನಸೌಧದ ಮೂಲೆಯಲ್ಲಿ ಧೂಳು ತಿನ್ನುತ್ತಿವೆ. ಕಡ್ಡಾಯ ಕನ್ನಡ ಅನುಷ್ಠಾನ ಗಡಿನಾಡ ಕನ್ನಡಿಗರ ಸ್ಥಿತಿ ಗತಿ ಕನ್ನಡ ಮಾಧ್ಯಮ ಶಾಲೆಗಳ ಸುಧಾರಣೆ ಕನ್ನಡ ಭಾಷೆಯ ಸಾಂಸ್ಕೃತಿಕ ತಾಯಿ ಬೇರು ಗಟ್ಟಿಗೊಳಿಸುವ ಸಲಹೆಗಳು ಸೇರಿದಂತೆ ಎಲ್ಲವೂ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೊಳೆಯುತ್ತಾ ಬಿದ್ದಿವೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಕನ್ನಡದ ಚಟುವಟಿಕೆಗೆ ನೆರವು ನೀಡಿ
04:57 AM May 15, 2020 | Suhan S |
Advertisement
Udayavani is now on Telegram. Click here to join our channel and stay updated with the latest news.