Advertisement

ಭಾರತೀಯ ಸೇನಾ ಪೈಲೆಟ್ ಗಳಿಗೆ ಹೊಸ ಹೆಲ್ಮೆಟ್

08:13 AM Mar 07, 2019 | Team Udayavani |

ಹೊಸದೆಹಲಿ: ಹೆಲ್ಮೆಟ್ ನಲ್ಲಿ ಕಾರ್ಯಾಚರಣೆಯ ದೃಶ್ಯಗಳನ್ನು ಕಾಣುವ ಉಪಕರಣ (Helmet Mounted Display System ) ವನ್ನು ಭಾರತೀಯ ಸೇನೆಯ ಪೈಲೆಟ್ ಗಳಿಗೆ ನೀಡಲು ಭಾರತ ಮತ್ತು ಇಸ್ರೇಲ್ ಒಡಂಬಡಿಕೆ ಮಾಡಿಕೊಂಡಿದೆ. 

Advertisement

ನವರತ್ನ ರಕ್ಷಣಾ ಘಟಕ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಇಸ್ರೇಲ್ ನ ಎಲ್ಬಿಟ್ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಗಳು ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಏರೋ ಇಂಡಿಯಾ ಸಮಯದಲ್ಲಿ ತಾಂತ್ರಿಕ ಸಹಯೋಗ ಒಪ್ಪಂದ ನಡೆಸಿದ್ದವು. 

ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಗಳ ಪೈಲೆಟ್ ಗಳಿಗೆ ಈ ಹೆಲ್ಮೆಟ್ ಗಳನ್ನು ನೀಡಲಾಗುವುದು. ರಾತ್ರಿಯ ದೃಶ್ಯಗಳನ್ನು ಸ್ಪಷ್ಟವಾಗಿ ಕಾಣುವ ಕನ್ನಡಕಗಳು, ಹಗಲು ಮತ್ತು ರಾತ್ರಿ ಸ್ಪಷ್ಟವಾಗಿ ಗೋಚರಿಸುವ ಡಿಸ್ಪ್ಲೇ, 3ಡಿ ಸಿಂಬಾಲಜಿ, ಹೆಡ್ ಟ್ರಾಕಿಂಗ್, ಸೆನ್ಸಾರ್ ಗಳು ಈ ಸುಧಾರಿತ ಹೆಲ್ಮೆಟ್ ನ ವಿಶೇಷತೆ. 

ಹೆಚ್ ಎಂಡಿಎಸ್ ಹೆಲ್ಮೆಟ್ ನಲ್ಲಿ ಹೆಲಿಕಾಪ್ಟರ್ ನ ಹಾರಾಟದ ಎತ್ತರ, ಪ್ಲಾಟ್ ಫಾರ್ಮ್ ಮಾಹಿತಿ, ಕಾರ್ಯಾಚರಣೆಯ ಅಂಕಿ ಅಂಶಗಳು, ಎದುರಾಳಿಯ ಮಾಹಿತಿ ಮುಂತಾದ ಸವಲತ್ತುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next