Advertisement

ಕುಟುಂಬ ನೆನೆದು ಹೆಲ್ಮೆಟ್‌ ಧರಿಸಿ: ಭಾಗ್ಯವತಿ

03:45 PM Jan 15, 2020 | Team Udayavani |

ಬ್ಯಾಡಗಿ: ಪೊಲೀಸರು ವಿಧಿಸುವ ದಂಡಕ್ಕೆ ಹೆದರಿ ಹೆಲ್ಮೆಟ್‌ ಧರಿಸುವುದಕ್ಕಿಂತ, ತಮ್ಮನ್ನೂ ಸೇರಿದಂತೆ ನಿಮ್ಮ ಕುಟುಂಬಕ್ಕಾಗಿ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂದು ಸಿಪಿಐ ಭಾಗ್ಯವತಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

ಪಟ್ಟಣದ ನೆಹರು ವೃತ್ತದಲ್ಲಿ ಹೆಲ್ಮೆಟ್‌ ಜನಜಾಗೃತಿ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದ್ವಿಚಕ್ರ ವಾಹನಗಳ ಶೇ.80 ಕ್ಕೂ ಹೆಚ್ಚು ರಸ್ತೆ ಅಪಘಾತದಲ್ಲಿ ಹೆಲ್ಮೆಟ್‌ ಧರಿಸದೇ ಇರುವವವುದರಿಂದ ತಲೆಗೆ ಪೆಟ್ಟಾಗಿ ಸಾವಿಗೀಡಾದ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಯುವಕರ ಸಂಖ್ಯೆಯೇ ಅಧಿಕ ಎನ್ನುವುದು ಇನ್ನು ಆತಂಕಕಾರಿ ಸಂಗತಿ ಎಂದು ಹೇಳಿದರು.

ನ್ಯಾಯಾಲಯದ ಆದೇಶದಂತೆ ಬೈಕ್‌ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದು, ತಮ್ಮನ್ನೂ ಸೇರಿದಂತೆ ಕುಟುಂಬದ ರಕ್ಷಣೆಗೆ ಹೆಲ್ಮೆಟ್‌ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಮನವಿ ಮಾಡಿದರು.

ದ್ವಿಚಕ್ರ ವಾಹನಗಳ ಸವಾರರು ಒಂದು ವೇಳೆ ಹೆಲ್ಮೆಟ್‌ ಧರಿಸದೇ ಸವಾರಿ ಮಾಡಿ ಅಪಘಾತಗಳಲ್ಲಿ ಮೃತಪಟ್ಟಲ್ಲಿ ವಿಮೆ ಪರಿಹಾರ ನೀಡುವಂತಹ ಕಂಪನಿಗಳೂ ಪರಿಹಾರ ನೀಡದೇ ತಕರಾರುಮಾಡುತ್ತಿವೆ. ಹೀಗಾಗಿ ಹೆಲ್ಮೆಟ್‌ ಕಾನೂನಾತ್ಮಕವಾದ ಪರಿಹಾರಗಳಿಗೂ ತೊಂದರೆ ನೀಡುತ್ತಿದ್ದು, ಕಡ್ಡಾಯವಾಗಿ ಧರಿಸಿ ತಮ್ಮ ಅಮೂಲ್ಯ ಜೀವ ರಕ್ಷಿಸಿಕೊಳ್ಳುವಂತೆ ಕರೆ ನೀಡಿದರು.

ಪಿಎಸ್‌ಐ ಮಹಾಂತೇಶ ಮಾತನಾಡಿ, ಹೆಲ್ಮೆಟ್‌ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ನಮ್ಮ ಪೊಲೀಸ್‌ ಠಾಣೆ ಪರಿಣಾಮಕಾರಿ ಹೆಜ್ಜೆಗಳನ್ನಿಡುತ್ತಿದ್ದು, ದ್ವಿಚಕ್ರ ವಾಹನಗಳ ಸವಾರರ ಮೇಲೆ ಅಗತ್ಯ ಕ್ರಮಗಳನ್ನು ಜರುಗಿಸಲು ಹಿಂದೆ ಮುಂದು ನೋಡುವುದಿಲ್ಲ. ಎಲ್ಲರಿಗೂ ಕೊನೆಯ ಅವಕಾಶವನ್ನು ನೀಡಲಾಗಿದ್ದು, ಇನ್ಮುಂದೆ ಹೆಲ್ಮೆಟ್‌ ರಹಿತರಿಗೆ ದಂಡದ ಬಿಸಿ ತಟ್ಟಲಿದೆ ಎಂದು ಎಚ್ಚರಿಸಿದರು. ಸಿಬ್ಬಂದಿಗಳಾದ ಗಡಿಯಪ್ಪಗೌಡ, ಹನುಮಂತ ಸುಂಕದ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next