Advertisement

ಹಲೋ ಹೇಗಿದ್ದೀರಿ?

06:00 AM Dec 02, 2018 | |

ಯಾವುದೋ ಹೊಸ ಸ್ಥಳದಲ್ಲಿ ವಿಳಾಸ ಕೇಳಲು, ಮಾಹಿತಿ ಬೇಕಾದಾಗ, ಅಂಗಡಿಗಳಲ್ಲಿ, ಮಾಲ್‌ಗ‌ಳಲ್ಲಿ, ಆಫೀಸುಗಳಲ್ಲಿ, ರೈಲ್ವೇ ಸ್ಟೇಷನ್‌ ನಲ್ಲಿ, ಬಸ್ಸಿನಲ್ಲಿ…ಹೀಗೆ ಹಲವಾರು ಕಡೆ  ಅಪರಿಚಿತ ವ್ಯಕ್ತಿಗಳೊಂದಿಗೆ ಸಂಭಾಷಣೆ ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಮಾತನ್ನು ಹೇಗೆ ಆರಂಭಿಸಿಲಿ ಎಂದು ಯೋಚಿಸುತ್ತಿರುವಾಗಲೇ  ಅನೈಚ್ಛಿಕವಾಗಿ ಹಲೋ ಎಂದಿರುತ್ತೇವೆ ! ಪರಿಚಿತರಿರಲಿ, ಅಪರಿಚಿತರಿರಲಿ ಹಲೋ ಎನ್ನಲು ಅಡ್ಡಿಯಿಲ್ಲ. 

Advertisement

ಭಾರತೀಯ ಸಂಸ್ಕೃತಿಯಲ್ಲಿ ಪರಸ್ಪರ ವಂದಿಸುವಾಗ ನಮಸ್ಕಾರ ಅಥವಾ ನಮಸ್ತೆ ಅನ್ನುವ ಪದ್ಧತಿ. ಗುರುಹಿರಿಯರು ಎದುರಾದಾಗ ಎರಡೂ ಕೈಗಳನ್ನು ಜೋಡಿಸಿ, ಸ್ವಲ್ಪ ಮುಂದಕ್ಕೆ ಬಾಗಿ ನಮಸ್ತೆ ಎನ್ನುವುದು ಶಿಷ್ಟಾಚಾರ. ಈ ದಿನಗಳಲ್ಲಿ, ಪಾಶ್ಚಾತ್ಯ ಭಾಷೆಗಳ ಪ್ರಭಾವದಿಂದ, ಬಹುತೇಕ ಸಂದರ್ಭಗಳಲ್ಲಿ ಸಾಂಪ್ರದಾಯಿಕ ನಮಸ್ಕಾರದ ಬದಲು ತತ್‌ಕ್ಷಣ ಹಲೋ ಎಂದು ಬಿಡುತ್ತೇವೆ. ಉದ್ಯೋಗದ ಸ್ಥಳದಲ್ಲಿ, ವ್ಯವಹಾರದ ಮಾತುಕತೆಗಳಲ್ಲಿ  ನಮಸ್ಕಾರದ ಬದಲು ಹಲೋ ಎನ್ನುತ್ತ ಕೈಕುಲುಕುವುದು, ಸಮಯ ಸಂದರ್ಭಕ್ಕೆ ತಕ್ಕಂತೆ ಗುಡ್‌ ಮಾರ್ನಿಂಗ್‌, ಗುಡ್‌ಈವ್‌ ನಿಂಗ್‌ ಅನ್ನುತ್ತ ದೂರದಿಂದಲೇ ತಲೆಯಾಡಿಸುವುದು, ಕೈ ಸನ್ನೆ ಮಾಡುವುದು ವಾಡಿಕೆ. ಸ್ನೇಹಿತರ ವಲಯದಲ್ಲಿ ಹಾಯ…, ಕಣೋ, ಮಚ್ಚಾ, ಬಚ್ಚಾ…ಇತ್ಯಾದಿ ಸಲಿಗೆಯ ಪದಗಳೂ ಅವರವರ ಭಾವಕ್ಕೆ ತಕ್ಕಂತೆ ಚಾಲ್ತಿಯಲ್ಲಿವೆ.

ರಾಜ್ಯದ ವಿವಿಧ ಭಾಷೆಗಳಲ್ಲಿ  ನಮಸ್ತೆಗೆ ಸಮಾನಾರ್ಥಕವಾದ ಪದಗಳಿವೆ. ತಮಿಳಿನ ವಣಕ್ಕಂ, ಕಾಶ್ಮೀರದ ಲಡಾಕಿನ ಜೂಲೆ ಮುಂತಾದುವುಗಳು. ನಮ್ಮ ನೆರೆಯ ರಾಷ್ಟ್ರವಾದ ನೇಪಾಳದವರು ನಮ್ಮಂತೆಯೇ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಅಂದರೆ, ಶ್ರೀಲಂಕಾದವರು ಕೂಡ ಇದೇ ರೀತಿ ಕೈಗಳನ್ನು ಜೋಡಿಸಿ ಆಯುಭವಾನ್‌ ಅನ್ನುತ್ತ ವಂದಿಸುತ್ತಾರೆ. ಬಹುತೇಕ ಪಾಶ್ಚಾತ್ಯ ದೇಶಗಳಲ್ಲಿ, ಹಲೋ ಅನ್ನುತ್ತ,  ದೃಢವಾಗಿ  ಕೈಕುಲುಕುವ ಪದ್ಧತಿ. ಫ್ರೆಂಚರು  ನಸುನಗುತ್ತ ಬೋನೊjàರ್‌ ಎನ್ನುತ್ತಾರೆ. ಚೀನಾದವರು ಪರಸ್ಪರ ಭೇಟಿ ಆದಾಗ ಮುಂದಕ್ಕೆ ಬಾಗಿ ಗೌರವವನ್ನು ಸೂಚಿಸುತ್ತ ನೀ ಹಾವ್‌ ಅಂದರೆ, ಜಪಾನೀಯರು ಕೂಡ ಮುಂದಕ್ಕೆ ಬಾಗಿ ಕೊನ್ನಿಚಿವಾ ಎನ್ನುತ್ತ ಶುಭಾಶಂಸನೆ ಮಾಡುತ್ತಾರೆ.   

ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ  ಉದ್ಯೋಗ ಮಾಡುವವರಿಗೆ, ಯಾವ ದೇಶದ ಜನರೊಂದಿಗೆ ವ್ಯವಹಾರ ನಡೆಸುತ್ತಾರೆಯೋ ಆ ದೇಶದ ಆಚಾರ, ವಿಚಾರ, ಆಹಾರ, ಸಂಸ್ಕೃತಿಗಳ ಬಗ್ಗೆ ಪರಿಚಯವನ್ನೂ ತಿಳಿಯಪಡಿಸುವುದು ತರಬೇತಿಯ ಭಾಗವಾಗಿರುತ್ತದೆ. ಉದಾಹರಣೆಗೆ ಶೇಕ್‌ ಹ್ಯಾಂಡ್‌ ಮಾಡುವಾಗ ತೀರಾ ಬಿಗಿಯಾಗಿ ಅಥವಾ ತೀರಾ ಪೇಲವವಾಗಿ ಕೈ ಕುಲುಕಬಾರದು. ಕೈ ಒ¨ªೆ ಇರಬಾರದು, ಪೆನ್ನು, ಪೇಪರ್‌ ಇತ್ಯಾದಿ ಇರಬಾರದು, ಮುಖ ನೋಡಿ ವಿಶ್‌ ಮಾಡಬೇಕು, ತಮ್ಮ  ವಿಸಿಟಿಂಗ್‌ ಕಾರ್ಡ್‌ ಅನ್ನು ಎರಡೂ ಕೈಗಳಲ್ಲಿ ಹಿಡಿದು ಕೊಡಬೇಕು ಇತ್ಯಾದಿ.

1973 ರಲ್ಲಿ, ಇಸ್ರೇಲ್‌ ಮತ್ತು ಅರಬ್‌ ರಾಷ್ಟ್ರಗಳ  ನಡುವೆ ಸಂಭವಿಸಿದ “ಯೋಮ್‌ ಕಿಪ್ಪೂರ್‌’ ಯುದ್ಧದ ನಂತರ ಶಾಂತಿಯುತವಾಗಿ ಬಾಳಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ, ಬ್ರೈನ್‌ ಮತ್ತು ಮ್ಯಾಕ್‌ ಕೊರ್ಮಾಕ್‌ ಎಂಬವರು  ನವಂಬರ್‌ 21 ರಂದು ವಿಶ್ವ ಹಲೋ ದಿನ ಎಂದು ಆಚರಿಸಬೇಕೆಂಬ ಪರಿಕಲ್ಪನೆಯನ್ನು ಮುಂದಿಟ್ಟರು. ವರ್ಷದಲ್ಲಿ ಒಂದು ದಿನವಾದರೂ, ನಮ್ಮ ಹಿತೈಷಿಗಳನ್ನು ನೆನಪಿಸಿಕೊಳ್ಳುತ್ತ ಹಲೋ ಎಂದು ಮಾತನಾಡಿಸಿ ಸ್ನೇಹವನ್ನು ಬೆಳೆಸಬೇಕು ಎಂಬುದು ವಿಶ್ವ ಹಲೋ ದಿನದ ಉದ್ದೇಶ. ಅದು ಮೊನ್ನೆ ಮೊನ್ನೆ ಮುಗಿದುಹೋಗಿದೆ.  

Advertisement

ಹೇಮಾಮಾಲಾ ಬಿ.

Advertisement

Udayavani is now on Telegram. Click here to join our channel and stay updated with the latest news.

Next