Advertisement
ಈ ಮೂಲಕ ರಾಜ್ಯಪಾಲರ ನಡೆಯ ವಿರುದ್ಧ ಮತ್ತೂಂದು ಹಂತದ ಹೋರಾಟಕ್ಕೆ ಸಜ್ಜಾಗಿದೆ.ಬೆಳಗ್ಗೆ 10.30ಕ್ಕೆ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಯಿಂದ ಹೊರಡಲಿರುವ ಪ್ರತಿಭಟನೆ ಮೆರ ವಣಿಗೆ ರಾಜಭವನದಲ್ಲಿ ಅಂತ್ಯಗೊಳ್ಳಲಿದೆ.
Related Articles
Advertisement
ರಾಜ್ಯಪಾಲರಿಂದ ಭೇಟಿಗೆ ಅನುಮತಿ: ಡಿಕೆಶಿಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದೆವು. ಈಗಾ ಗಲೇ ಸಮಯ ಕೊಟ್ಟಿದ್ದಾರೆ. ಶನಿವಾರ ಎಲ್ಲ ಶಾಸಕರು, ಸಂಸದರು, ಮುಂಚೂಣಿ ನಾಯಕರಿಗೆ ಸೂಚನೆ ನೀಡಲಾಗಿದ್ದು, ಎಲ್ಲರೂ ಭಾಗವಹಿಸಲಿದ್ದಾರೆ ಎಂದರು. ನನ್ನ ವಿರುದ್ಧ ನಡೆಯುತ್ತಿರುವ ಬಿಜೆಪಿ- ಜೆಡಿಎಸ್
ಪಕ್ಷಗಳ ಸೇಡು, ಹೊಟ್ಟೆಕಿಚ್ಚಿನ ಪಿತೂರಿಯನ್ನು ಸಹಿಸಬೇಡಿ. ಜನರ ಆಶೀರ್ವಾದ ಇರುವವರೆಗೆ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ. ಮೊದಲ ಬಾರಿ ಸಿಎಂ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕಿದ್ದೇನೆ. 2ನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ ಮುಡಾ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರ ನಡೆ ಸರಿಯಲ್ಲ. ರಾಜ್ಯಪಾಲರ ಶೋಕಾಸ್ ನೋಟಿಸ್ ಬಗ್ಗೆ ಹೇಳಿದ್ದೇವೆ. ಆದರೂ ಯಾವುದೇ ತೀರ್ಮಾನ ಮಾಡಲಿಲ್ಲ. ಇದು ಎಷ್ಟು ಸರಿ ಎಂದು ಕೇಳುತ್ತೇವೆ. ಇದಕ್ಕೆ ಸ್ಪಂದಿಸದಿದ್ದರೆ ರಾಷ್ಟ್ರಪತಿಗಳ ಮೊರೆಹೋಗುತ್ತೇವೆ.
-ಡಾ| ಪರಮೇಶ್ವರ್, ಗೃಹಸಚಿವ