Advertisement

ಮಂಗಳೂರು ಸೇರಿದಂತೆ 6 ಕಡೆ ಹೆಲಿಪೋರ್ಟ್‌: ಯೋಗೇಶ್ವರ್‌‌

02:38 AM Mar 21, 2021 | Team Udayavani |

ಮಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿರುವ ಪ್ರವಾಸ ತಾಣಗಳಿಗೆ ಸಂಪರ್ಕ ಕಲ್ಪಿಸಲು ಮತ್ತು ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಮಂಗಳೂರು ಸೇರಿದಂತೆ ರಾಜ್ಯದ 6 ಕಡೆಗಳಲ್ಲಿ ಹೆಲಿಪೋರ್ಟ್‌ (ಹೆಲಿಕಾಪ್ಟರ್‌ ನಿಲ್ದಾಣ) ಸ್ಥಾಪಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖಾ ಸಚಿವ ಸಿ.ಪಿ. ಯೋಗೇಶ್ವರ್‌ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬ್ರಾÂಂಡ್‌ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಸಚಿವರೊಂದಿಗೆ ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹೆಲಿಪೋರ್ಟ್‌ಗಳಿಂದ ವಿವಿಧ ಕ್ಷೇತ್ರಗಳಿಗೆ ಹೆಲಿಕಾಪ್ಟರ್‌ಗಳು ಸಂಚಾರ ನಡೆಸಲಿದ್ದು ಅಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುವುದು. ಈ ಬಗ್ಗೆ ಸರ್ವೇ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಸೀ ಪ್ಲೇನ್‌ಗೆ ಅವಕಾಶ ಕೋರಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಉಡಾನ್‌ ಯೋಜೆಯಡಿ ಸೀ ಪ್ಲೇನ್‌ ಆರಂಭವಾಗಲಿದೆ ಎಂದು ಹೇಳಿದರು.

ಪ್ರತ್ಯೇಕ ಪ್ರವಾಸೋದ್ಯಮ ಯೋಜನೆ :

ರಾಜ್ಯದ ಇತರೆಡೆಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಸ್ವರೂಪ ವಿಭಿನ್ನವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿಗೆ ಪ್ರತ್ಯೇಕ ಪ್ರವಾಸೋದ್ಯಮ ಯೋಜನೆ ರೂಪಿಸಲಾಗುವುದು. ಕರಾವಳಿಯ ಜಿಲ್ಲೆಗಳಿಗೆ ಸಂಬಂಧಪಟ್ಟು ಸಮಗ್ರ ಯೋಜನೆ ರೂಪಿಸಲು ಪರಿಣತರು ಸೇರಿ ರೂಪುರೇಷೆ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಸಿದರೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ ಎಂದು ಯೋಗೇಶ್ವರ್‌ ಹೇಳಿದರು.

Advertisement

ಬೇಡಿಕೆಗಳು :

ಲಕ್ಷದ್ವೀಪಕ್ಕೆ ಮಂಗಳೂರಿನಿಂದ ನೇರಪ್ರಯಾಣಕ್ಕೆ ಅನುಮತಿ ವ್ಯವಸ್ಥೆ, ಪ್ರವಾಸೋದ್ಯಮ ಯೋಜನೆ

ಗಳಿಗೆ ಏಕಗವಾಕ್ಷಿ ಸೌಲಭ್ಯ, ಪ್ರವಾಸಿ ಕ್ಯಾಲೆಂಡರ್‌ ರೂಪಿಸುವುದು, ಹೆರಿಟೇಜ್‌ ವಿಲೇಜ್‌, ಕ್ರೂಸ್‌ ಟೂರಿಸಂಗೆ ಸೌಲಭ್ಯ, ಜಿಲ್ಲೆಯ ಪ್ರವಾಸಿತಾಣಗಳನ್ನು ಪ್ರಚುರ ಪಡಿಸುವುದು, ಪಿಲಿಕುಳದಲ್ಲಿ ಇನ್ನಷ್ಟು ಉತ್ತಮ ಅಭಿವೃದ್ಧಿ ಯೋಜನೆ, ಕಾರಿಂಜ ಕ್ಷೇತ್ರದಲ್ಲಿ ಮಂಕಿ ಪಾರ್ಕ್‌ ಸ್ಥಾಪನೆ, ಕೇಬಲ್‌ ಕಾರ್‌ ಸೌಲಭ್ಯ, ಮಂಗಳೂರಿನಲ್ಲಿ ಕರಾವಳಿ ಹೂಡಿಕೆದಾರರ ಸಮಾವೇಶ ಸೇರಿದಂತೆ ವಿವಿಧ ಸಲಹೆ ಹಾಗೂ ಬೇಡಿಕೆಗಳನ್ನು ಸಚಿವರಿಗೆ ಮಂಡಿಸಲಾಯಿತು.

ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಜ್‌, ಮಾಜಿ ಅಧ್ಯಕ್ಷೆ ವತಿಕಾ ಪೈ, ನರೇನ್‌ ಕುಡುವಟ್ಟ್, ದಿನೇಶ್‌ ಹೊಳ್ಳ, ಗಿರೀಶ್‌, ರಶೀದ್‌ ಬೋಳಾರ, ದಿನೇಶ್‌ ಕುಂದರ್‌, ಯತೀಶ್‌ ಬೈಕಂಪಾಡಿ, ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಕ್ರೀಡಾಪಟು ತನ್ವಿ ಮೊದಲಾದವರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಸಲಹೆಗಳನ್ನು ನೀಡಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ನಿರ್ದೇಶಕ ಕುಮಾರ್‌ ಪುಷ್ಕರ್‌ ಭಾಗವಹಿಸಿದ್ದರು. ಕಾರ್ಯನಿರತ ಪತ್ರ

ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಯತೀಶ್‌ ಬೈಕಂಪಾಡಿ ಸಂವಾದ ನಿರ್ವಹಿಸಿದರು.

ನದಿ ಉತ್ಸವ, ಸರ್ಫಿಂಗ್‌ ಉತ್ಸವ : ಜಿಲ್ಲೆಯಲ್ಲಿ ಜಲಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಪ್ರವಾಸಿಗರನ್ನು ಹಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ನದಿ ಉತ್ಸವ, ಸರ್ಫಿಂಗ್‌ ಉತ್ಸವ ಹಾಗೂ ಗಾಳಿಪಟ ಉತ್ಸವಗಳನ್ನು ಪ್ರತೀವರ್ಷ ನಿರ್ದಿಷ್ಟ ದಿನಾಂಕದಂದು ಆಯೋಜಿಸಲು ಪ್ರವಾಸೋದ್ಯಮ ಇಲಾಖೆಯಿಂದ ನೆರವು ನೀಡಲಾಗುವುದು ಎಂದು ಸಚಿವ ಯೋಗೇಶ್ವರ್‌ ಹೇಳಿದರು.

ಪ್ರವಾಸಿ ಟ್ಯಾಕ್ಸಿ: ಏಕರೂಪ ತೆರಿಗೆ

ಎ. 1ರಿಂದ ದೇಶಾದ್ಯಂತ ಪ್ರವಾಸಿ ಟ್ಯಾಕ್ಸಿಗಳಿಗೆ ಏಕರೂಪದ ತೆರಿಗೆ ಜಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

ಸಚಿವರ ಭರವಸೆಗಳು :

  • ಹೋಂ ಸ್ಟೇ ನಿಯಮ ಸರಳೀಕರಣ
  • ಹೌಸ್‌ಬೋಟುಗಳಿಗೆ ಸಹಾಯಧನ
  • ಪ್ರವಾಸಿ ಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಕ್ರಮ
  • ಪ್ರವಾಸೋದ್ಯಮ ಯೋಜನೆಗಳಿಗೆ ಸಂಬಂಧಿಸಿ ಏಕಗವಾಕ್ಷಿ ಯೋಜನೆಗೆ ಕ್ರಮ

ಹೆಲಿಪೋರ್ಟ್‌ ಎಲ್ಲೆಲ್ಲಿ ? :  ಮಂಗಳೂರು, ಬೆಂಗಳೂರು,  ಮೈಸೂರು, ಹಂಪಿ,  ಕಲಬುರಗಿ ಮತ್ತು ಹುಬ್ಬಳ್ಳಿ

ಕಂಬಳಕ್ಕೆ 1 ಕೋ.ರೂ. ಹಸ್ತಾಂತರ :

ಮಂಗಳೂರು: ಜಾನಪದ ಕ್ರೀಡೆ ಕಂಬಳವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿರುವ 1 ಕೋ.ರೂ. ಅನು ದಾನದ ಚೆಕ್‌ ಅನ್ನು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ನಗರದಲ್ಲಿ ಶನಿವಾರ ಜರಗಿದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್‌ ಅವರಿಗೆ ಹಸ್ತಾಂತರಿಸಿದರು. ದ.ಕ. ಜಿಲ್ಲೆಯ 10 ಮತ್ತು ಉಡುಪಿ ಜಿಲ್ಲೆಯ 10 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 1 ಕೋಟಿ ರೂ.ಗಳನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಮಾ. 18ರಂದು ಬಿಡುಗಡೆ ಮಾಡಲಾಗಿತ್ತು.

ಸಮ್ಮಾನ :

ಕಂಬಳಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂಬ ಕೋರಿಕೆಗೆ ತ್ವರಿತವಾಗಿ ಸ್ಪಂದಿಸಿ ಒಟ್ಟು 1 ಕೋ ರೂ. ಅನುದಾನ ಬಿಡುಗಡೆ ಮಾಡಿರುವ ಸಚಿವ ಯೋಗೇಶ್ವರ್‌ ಅವರನ್ನು ಜಿಲ್ಲಾ ಕಂಬಳ ಸಮಿತಿ ಸಮಿತಿಯ ಅಧ್ಯಕ್ಷ ಪಿ.ಆರ್‌. ಶೆಟ್ಟಿ, ಪದಾಧಿಕಾರಿಗಳಾದ ವಿಜಯ ಕುಮಾರ್‌ ಕಂಗಿನಮನೆ, ನವೀನ್‌ಚಂದ್ರ ಆಳ್ವ ತಿರುವೈಲು ಅವರು ಇದೇ ಸಂದರ್ಭದಲ್ಲಿ ಸಮ್ಮಾನಿಸಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next