ಕೆಂಟಕಿ: ಅಟನೋಮಸ್ ಫ್ಲೈಟ್ ಗಳ ಪ್ರಯತ್ನದ ಕಾಲದಲ್ಲಿ ಅಮೆರಿಕದ ಕೆಂಟಕಿಯಲ್ಲಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪೈಲಟ್ ಸಹಾಯವಿಲ್ಲದೆ ಆಕಾಶದೆತ್ತರಕ್ಕೆ ಹಾರಿದೆ.
ವಿಶೇಷವಾಗಿ ಸುಸಜ್ಜಿತವಾದ ಹೆಲಿಕಾಪ್ಟರ್ 30 ನಿಮಿಷಗಳ ಕಾಲ ಸಿಮ್ಯುಲೇಟೆಡ್ ಸಿಟಿಸ್ಕೇಪ್ ಮೂಲಕ ಹಾರಿಹೋಯಿತು, ಪರಿಪೂರ್ಣ ಲ್ಯಾಂಡಿಂಗ್ ಮಾಡುವ ಮೊದಲು ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಫೆಬ್ರವರಿ 5 ರಂದು ನಡೆದ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ, ಮಾನವರಹಿತ ಬ್ಲ್ಯಾಕ್ ಹಾಕ್ ಸುಮಾರು 4,000 ಅಡಿ ಎತ್ತರದಲ್ಲಿ ಗಂಟೆಗೆ ಸುಮಾರು 115 ರಿಂದ 125 ಮೈಲುಗಳ ವೇಗದಲ್ಲಿ ಹಾರಿತು. ಪಾಪ್ಯುಲರ್ ಸೈನ್ಸ್ ವರದಿಯ ಪ್ರಕಾರ ಅದೇ ಹೆಲಿಕಾಪ್ಟರ್ ನೊಂದಿಗೆ ಸೋಮವಾರ ಮತ್ತೊಂದು ಸಿಮ್ಯುಲೇಟೆಡ್ ಸ್ವಾಯತ್ತ ಹಾರಾಟವನ್ನು ನಡೆಸಲಾಯಿತು.
ಇದನ್ನೂ ಓದಿ:ಐಪಿಎಲ್ ಹರಾಜು: ಭಾರೀ ಮೊತ್ತ ಪಡೆದ ಅಯ್ಯರ್, ರಬಾಡ; ಹುಸಿಯಾಯಿತು ವಾರ್ನರ್ ನಿರೀಕ್ಷೆ
ಅಲಿಯಾಸ್ ಎಂಬ ಅಮೆರಿಕದ ರಕ್ಷಣಾ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ಸಂಪೂರ್ಣ ಕಂಪ್ಯೂಟರ್-ಚಾಲಿತ ಚಾಪರನ್ನು ಕೆಂಟುಕಿಯ ಫೋರ್ಟ್ ಕ್ಯಾಂಪ್‌ಬೆಲ್ ನಲ್ಲಿ ಪರೀಕ್ಷಿಸಲಾಯಿತು.