Advertisement

ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಹೆಲಿಕಾಫ್ಟರ್‌ ಮೀನು…!

08:17 PM Oct 04, 2021 | Team Udayavani |

ಮಲ್ಪೆ: ಇಲ್ಲಿನ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕಾ ಬೋಟಿನ ಬಲೆಗೆ ಬೃಹತ್‌ ಗಾತ್ರದ ಅಪರೂಪದ ಹೆಲಿಕಾಫ್ಟರ್‌ ಮೀನು ದೊರೆತ್ತಿದೆ.

Advertisement

ಸುಮಾರು 20 ನಾಟಿಕಲ್‌ ಮೈಲು ಆಳಸಮುದ್ರದಲ್ಲಿ ಲುಕ್ಮನ್‌ ಎಂಬವರಿಗೆ ಸೇರಿದ ಬೋಟಿಗೆ ಬಂಗುಡೆ ಅಂಜಲ್‌ ಮೀನಿನ ಜತೆಯಲ್ಲಿ ಈ ಮೀನು ಬಲೆಗೆ ಬಿದ್ದಿತ್ತು. ಸುಮಾರು 84 ಕೆ.ಜಿ. ತೂಕವಿದ್ದು ಈ ಮೀನು ಕಾಣ ಸಿಗುವುದು ಬಲು ಅಪರೂಪ ಎನ್ನಲಾಗಿದೆ.

ಹೆಲಿಕಾಫ್ಟರ್‌ ಆಕೃತಿಯನ್ನು ಹೋಲುವುದರಿಂದ ಸ್ಥಳೀಯ ಮೀನುಗಾರರು ಹೆಲಿಕಾಪ್ಟರ್‌ ಮೀನು ಎಂದು ಕರೆಯುತ್ತಾರೆ. ಇದು ಅಷ್ಟೇನು ರುಚಿಕರವಲ್ಲ. ಹಾಗಾಗಿ ಸ್ಥಳೀಯವಾಗಿ ಬೇಡಿಕೆ ಇಲ್ಲ.

ಕೇರಳದ ಮಂದಿ ಕೆ. ಜಿ. 50 ರೂ. ನಂತೆ ಖರೀದಿ ಮಾಡುತ್ತಾರೆ. ಹಾಗಾಗಿ ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ಈ ಮೀನು ರವಾನೆ ಮಾಡಲಾಗಿದೆ.

ಇದನ್ನೂ ಓದಿ:ಶೀಘ್ರದಲ್ಲೇ ಕೆಂಪೇಗೌಡ ಬಡಾವಣೆ ರೈತರ ಸಮಸ್ಯೆಗೆ ಪರಿಹಾರ: ಎಸ್.ಆರ್.ವಿಶ್ವನಾಥ್

Advertisement

ಬೌ ಮೌತ್‌ ಗಿಟರ್‌ ಫಿಶ್‌
ಇದರ ವೈಜ್ಞಾನಿಕ ಹೆಸರು ಬೌ ಮೌತ್‌ ಗಿಟಾರ್‌ ಫಿಶ್‌, ಅಗಲವಾದ ಬಾಯಿ, ಬೆನ್ನಿನ ಮೂಳೆ ಗಿಟಾರ್‌ ತರಹ ಇರುವುದರಿಂದ ಗಿಟಾರ್‌ ಮೀನು ಎಂದು ಹೆಸರು. ಸುಮಾರು 135 ಕೆ. ಜಿ. ತೂಕ, ಎರಡೂವರೆ ಮೀಟರ್‌ ಉದ್ದದವರೆಗೂ ಬೆಳೆಯುತ್ತದೆ. ತೊರಕೆ ಮೀನಿನ ಜಾತಿಗೆ ಸೇರಿದ್ದು ಸಾಮಾನ್ಯವಾಗಿ ಹವಳ ಬಂಡೆಯಲ್ಲಿ ವಾಸವಾಗಿರುತ್ತದೆ ಎನ್ನುತ್ತಾರೆ ಕಾರವಾರದ ಕಡಲ ಜೀವ ಶಾಸ್ತ್ರ ವಿಭಾಗ ಸಂಶೋಧಕ ಡಾ| ಶಿವಕುಮಾರ್‌ ಹರಗಿ.

Advertisement

Udayavani is now on Telegram. Click here to join our channel and stay updated with the latest news.

Next