Advertisement

ಬಾಸ್ಕೆಟ್‌ಬಾಲ್‌ ಆಟಗಾರ ಕೋಬ್‌ ಬ್ರ್ಯಾಂಟ್‌ ಸಾವಿಗೆ ಕಾಪ್ಟರ್‌ ಕಾರಣವಲ್ಲ!

10:04 AM Feb 10, 2020 | keerthan |

ವಾಷಿಂಗ್ಟನ್‌: ಅಮೆರಿಕ ಖ್ಯಾತ ಬಾಸ್ಕೆಟ್‌ಬಾಲ್‌ ಆಟಗಾರ ಕೋಬ್‌ ಬ್ರ್ಯಾಂಟ್‌ ಹಾಗೂ ಇನ್ನಿತರ ಎಂಟು ಮಂದಿಯ ಸಾವಿಗೆ ಕಾರಣವಾಗಿದ್ದ ಹೆಲಿಕಾಪ್ಟರ್‌ ಅಪಘಾತ, ಆ ಕಾಪ್ಟರ್‌ನಲ್ಲಿನ ಇಂಜಿನ್‌ ವೈಫ‌ಲ್ಯದಿಂದ ಆಗಿದ್ದಲ್ಲ ಎಂದು ಈ ಪ್ರಕರಣದ ತನಿಖೆ ನಡೆಸಿರುವ ನ್ಯಾಷನಲ್‌ – ಟ್ರಾನ್ಸ್ಪೋಪೋರ್ಟೇಶನ್ ಸೇಫ್ಟಿ ಬೋರ್ಡ್ (ಎನ್‌ಟಿಎಸ್‌ಬಿ) ಹೇಳಿದೆ.

Advertisement

ಘಟನಾ ಸ್ಥಳದಲ್ಲಿ ಸಿಕ್ಕಿರುವ ಹೆಲಿಕಾಪ್ಟರ್‌ನ ಅವಶೇಷಗಳನ್ನು ಸಂಗ್ರಹಿಸಿ ತಾನು ನಡೆಸಿರುವತನಿಖೆಯಲ್ಲಿ ಈ ವಿಚಾರ ಸ್ಪಷ್ಟವಾಗಿದೆ. ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ತನಗಿನ್ನೂ ಒಂದು ವರ್ಷ ಸಮಯ ಬೇಕಿದೆ ಎಂದು ಎನ್‌ಟಿಎಸ್‌ಬಿ ತಿಳಿಸಿದೆ.

ಜ. 26ರಂದು ಹೆಲಿಕಾಪ್ಟರ್‌ನಲ್ಲಿ ಬ್ರ್ಯಾಂಟ್‌ ಅವರು ತಮ್ಮ ಪುತ್ರಿ ಜಿಯಾನಾ ಜೊತೆಗೆ ಪ್ರಯಾಣಿಸುತ್ತಿದ್ದಾಗ ಹೆಲಿಕಾಪ್ಟರ್‌, ಲಾಸ್‌ ಏಂಜಲೀಸ್‌ನ ಹೊರ ವಲಯದ ಬೆಟ್ಟಗಳ ತುದಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿತ್ತು.

ಬ್ರ್ಯಾಂಟ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದ ಕೆಲವೇ ಗಂಟೆಗಳಲ್ಲಿ ಬ್ರ್ಯಾಂಟ್‌ ಸಾವಿಗೀಡಾಗಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next