ಪುಣೆ: ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆ ತೆರಳಬೇಕಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಶುಕ್ರವಾರ ಮಹಾದ್‌ನಲ್ಲಿ ನಡೆದಿದೆ.
ಅದೃಷ್ಟವಶಾತ್ ಪೈಲಟ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸುಷ್ಮಾ ಅಂಧಾರೆ ಅವರು ಹೆಲಿಕಾಪ್ಟರ್ ಹತ್ತುವ ಮುನ್ನವೇ ಪತನಗೊಂಡಿರುವ ಕಾರಣ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸುಷ್ಮಾ ಅಂಧಾರೆ ಹೆಲಿಕಾಪ್ಟರ್ ಹತ್ತುವ ಮುನ್ನವೇ ಹೆಲಿಕಾಪ್ಟರ್ ಪತನಗೊಂಡಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಬೆಳಗ್ಗೆ 9.30ಕ್ಕೆ ಸುಷ್ಮಾ ಅಂಧಾರೆ ಚುನಾವಣಾ ಪ್ರಚಾರಕ್ಕಾಗಿ ಬಾರಾಮತಿ ಕಡೆಗೆ ತೆರಳಬೇಕಿತ್ತು. ಬಾರಾಮತಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಹಾಡ್‌ನಿಂದ ಬಾರಾಮತಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಕರೆದೊಯ್ಯಲು ಬಂದ ಹೆಲಿಕಾಪ್ಟರ್ ಸುಷ್ಮಾ ಅವರ ಮುಂದೆಯೇ ಅಪಘಾತ ಸಂಭವಿಸಿದೆ. ವಿಶೇಷವೆಂದರೆ ಹೆಲಿಕಾಪ್ಟರ್ ಪೈಲಟ್ ಸುರಕ್ಷಿತವಾಗಿದ್ದು. ಸ್ಥಳೀಯರ ನೆರವಿನಿಂದ ಪೈಲಟ್‌ನನ್ನು ಹೊರ ತೆಗೆಯಲಾಯಿತು.
ಸುಷ್ಮಾ ಅಂಧಾರೆ ಯಾರು?
ಸುಷ್ಮಾ ಅಂಧಾರೆ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಹೆಸರು ಮಾಡಿದ ಮಹಿಳೆ. ಮೂಲತಃ ವಕೀಲರಾಗಿರುವ ಅವರು ಉಪನ್ಯಾಸಕಿ ಮತ್ತು ಉತ್ತಮ ಬರಹಗಾರರಾಗಿದ್ದಾರೆ. ಅವರು ದಲಿತ/ಅಂಬೇಡ್ಕರ್ ಚಳವಳಿಯಲ್ಲಿ ಹಾಗೂ ಬುಡಕಟ್ಟು ಸಮುದಾಯಗಳ ಬಗ್ಗೆ ಮಾಡಿದ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ಉದ್ಧವ್ ಬಾಳಾಸಾಹೇಬ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷದ ನಾಯಕಿಯಾಗಿದ್ದಾರೆ 2022 ರಲ್ಲಿ ಶಿವಸೇನೆಗೆ ಸೇರಿದ್ದರು.
ಇದನ್ನೂ ಓದಿ: Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ