Advertisement

ಆದಿಉಡುಪಿ: ಹೆಲಿಟೂರಿಸಂ ರೈಡ್‌ ಆರಂಭ

05:41 AM Jan 12, 2019 | Team Udayavani |

ಉಡುಪಿ: ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಆದಿಉಡುಪಿ ಹೆಲಿಪ್ಯಾಡ್‌ನ‌ಲ್ಲಿ ಆಯೋಜಿಸಿದ ಮೂರು ದಿನಗಳ ಹೆಲಿಟೂರಿಸಂ ಅನ್ನು ಶಾಸಕ ರಘುಪತಿ ಭಟ್‌ ಶುಕ್ರವಾರ ರೈಡಿಂಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಉದ್ಘಾಟಿಸಿದರು. ಆದಿಉಡುಪಿ ಹೆಲಿಪ್ಯಾಡ್‌ ಮೈದಾನದಲ್ಲಿ ಜ. 11ರಿಂದ 13ರ ವರೆಗೆ ಹೆಲಿಟೂರಿಸಂ ರೈಡ್‌ ನಡೆಯಲಿದ್ದು ಒಂದು ಬಾರಿ 6 ಮಂದಿ ಹಾರಾಟ ನಡೆಸಬಹುದು.

Advertisement

ಪ್ರವಾಸೋದ್ಯಮ ಉತ್ತೇಜನ ದೃಷ್ಟಿಯಿಂದ ಹೆಲಿಟೂರಿಸಂ ಅಗತ್ಯ. ದ.ಕ.,ಉಡುಪಿ, ಉ.ಕ. ಜಿಲ್ಲೆಗಳನ್ನು ಒಳಗೊಂಡಂತೆ ಹೆಲಿಟೂರಿಸಂ ಜಾರಿಗೊಳಿಸಿದರೆ ಇನ್ನೂ ಉತ್ತಮ ಎಂದ ಅವರು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಅವರನ್ನು ಇಲ್ಲಿಗೆ ಬರ ಹೇಳಿ ಈ ಬಗ್ಗೆ ಪ್ರಸ್ತಾವ ಮುಂದಿಡಲಾಗುವುದು ಎಂದು ಭಟ್‌ ತಿಳಿಸಿದರು. 

ಎಪ್ರಿಲ್‌ – ಮೇ ತಿಂಗಳಲ್ಲಿ ಸಾಧ್ಯವಾದರೆ ಮತ್ತೂಮ್ಮೆ ಆಯೋಜಿಸುತ್ತೇವೆ. ಕುಂದಾಪುರದಲ್ಲಿ ನಡೆದ ಹೆಲಿಟೂರಿಸಂಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂಘಟಕ ಸುಧೇಶ್‌ ಶೆಟ್ಟಿ ತಿಳಿಸಿದರು.  ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ, ನಿರ್ಮಿತಿ ಕೇಂದ್ರದ ಅರುಣ್‌ ಕುಮಾರ್‌, ಕ್ಯಾಪ್ಟನ್‌ ರಮೇಶ ಭೂಮಿನಾಥನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next