Advertisement

ಮೈಸೂರಿನಲ್ಲಿ 3 ತಿಂಗಳೊಳಗೆ ಹೆಲಿ ಟೂರಿಸಂ

03:09 PM Mar 03, 2021 | Team Udayavani |

ಮೈಸೂರು: ಮೈಸೂರು ಪ್ರವಾಸಿಗರ ಸ್ವರ್ಗವಾಗಿದ್ದು, ದೇಶ, ವಿದೇಶದ ಪ್ರವಾಸಿಗರನ್ನು ಸೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಪ್ರಮುಖವಾಗಿ ಮೈಸೂರಿನಲ್ಲಿ 3 ತಿಂಗಳ ಒಳಗಾಗಿ ಹೆಲಿ ಟೂರಿಸಂ ಆರಂಭಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಮಂಗಳೂರು, ಹಂಪಿ ಹಾಗೂ ಜೋಗ್‌ನಲ್ಲಿ ಹೆಲಿ ಟ್ಯೂರಿಸಂ ಆರಂಭಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ತಿಳಿಸಿದರು.

Advertisement

ನಗರದ ಎಂಜಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಎದುರು ಡಬಲ್‌ ಡೆಕ್ಕರ್‌ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಲಿ ಟೂರಿಸಂ ಜೊತೆಗೆ ನಗರದಲ್ಲಿ ಹೆಲಿಕಾಪ್ಟರ್‌ ಟರ್ಮಿನಲ್‌ ನಿರ್ಮಾಣ ಮಾಡಿ ನಾಲ್ಕಾರು ಹೆಲಿಕಾಪ್ಟರ್‌ ಇಲ್ಲೇ ಉಳಿಯುವಂತೆ ಮಾಡುವ ಮೂಲಕ ಪ್ರವಾಸಿಗರನ್ನು ಬೇರೆ ಬೇರೆ ಭಾಗಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ನಗರದ ಲಲಿತ್‌ ಮಹಲ್‌ ಎದುರಿಗಿರುವ ಇಲಾಖೆ ಜಾಗದಲ್ಲಿ ಟರ್ಮಿನಲ್‌ ನಿರ್ಮಾಣ ಮಾಡಲಾಗುವುದು ಎಂದರು.

ಹೆಲಿ ಟೂರಿಸಂ ಸಂಬಂಧ ಖಾಸಗಿಯವರನ್ನ ಟೆಂಡರ್‌ ಮೂಲಕ ಕರೆದು ಹೆಲಿಕಾಪ್ಟರ್‌ ಓಡಾಡಕ್ಕೆ ಅವಕಾಶ ಮಾಡಿಕೊಡಲಾಗುವುದು. ಜಾಗ ಮತ್ತು ಹೆಲಿಪ್ಯಾಡ್‌ ನಮ್ಮದಿರುತ್ತದೆ. ಉಳಿದಂತೆ ಅದರ ನಿರ್ವಹಣೆಯನ್ನು ಖಾಸಗಿಯವರು ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ನಗರದಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಆವರಣವನ್ನು ವರ್ಷದ 365 ದಿನಗಳಲ್ಲಿಯೂ ತೆರೆಯುವಂತೆ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತದೆ. ಇದಕ್ಕಾಗಿ ಶೀಘ್ರವೆ ಟೆಂಡರ್‌ ಕರೆಯಲಾಗುವುದು ಎಂದರು.

ರೂಫ್ ವೇ: ಚಾಮುಂಡಿ ಬೆಟ್ಟದಲ್ಲಿ ರೂಫ್ ವೇ ನಿರ್ಮಾಣಕ್ಕೆ ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ನಂದಿ ಬೆಟ್ಟದಲ್ಲಿ ರೂಫ್ ವೇ ನಿರ್ಮಾಣ ಮಾಡಲು ಬ್ಲೂ ಪ್ರಿಂಟ್‌ ಸಿದ್ಧ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೂ ರೂಫ್ ವೇ ನಿರ್ಮಿಸಲಾಗುವುದು. ಪರಿಸರಕ್ಕೆ ಹಾನಿಯಾಗದಂತೆ ತಂತ್ರಜ್ಞಾನ ಬಳಸಿ ನಿರ್ಮಿಸುತ್ತೇವೆ. ಒಂದು ವೇಳೆ ಪರಿಸರವಾದಿಗಳ ವಿರೋಧ ಇದ್ದರೂ ಅವರ ಮನವೊಲಿಸುತ್ತೇವೆ ಎಂದರು.

Advertisement

ಈ ವೇಳೆ ಶಾಸಕ ಎಲ್‌. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ ಕುಮಾರ್‌ಗೌಡ, ಬಿಜೆಪಿ ನಾಯಕಿ ಶ್ರುತಿ ಇತರರಿದ್ದರು.

ಡಬಲ್‌ ಡೆಕ್ಕರ್‌ ಸಂಚಾರ ಮಾರ್ಗ :

ಮೈಸೂರು ನಗರದ ಹೋಟೆಲ್‌ ಮಯೂರ ಹೊಯ್ಸಳ-ಜಿಲ್ಲಾಧಿಕಾರಿಗಳ ಕಚೇರಿ-ಕ್ರಾಫ‌ರ್ಡ್‌ ಭವನ-ಕುಕ್ಕರಹಳ್ಳಿ ಕೆರೆ- ಮೈಸೂರು ವಿಶ್ವವಿದ್ಯಾಲಯ-ಜಾನಪದ ಮ್ಯೂಸಿಯಂ- ರಾಮಸ್ವಾಮಿ ಸರ್ಕಲ್‌-ಅರಮನೆ ಕರಿಕುಲ್ಲು ತೊಟ್ಟಿ-ಅರಮನೆ (ದಕ್ಷಿಣ ದ್ವಾರ) -ಜೈಮಾತಾಂìಡ-ಮೃಗಾಲಯ-ಕಾರಂಜಿ ಕೆರೆ -ಸಂಗೊಳ್ಳಿ ರಾಯಣ್ಣ ವೃತ್ತ-ಸ್ನೋ ಸಿಟಿ ಚಾಮುಂಡಿ ವಿಹಾರ ಸ್ಟೇಡಿಯಂ-ಸೆಂಟ್‌ ಫಿಲೋಮಿನ ಚರ್ಚ್‌-ಬನ್ನಿಮಂಟಪ-ರೈಲ್ವೆ

ಸ್ಟೇಷನ್‌-ಹೋಟೆಲ್‌ ಮಯೂರ ಹೊಯ್ಸಳ ಮಾರ್ಗದಲ್ಲಿ ಪ್ರತಿ ಅರ್ಧ ಗಂಟೆಗೊಂದರಂತೆ ಕಾರ್ಯಾಚರಣೆ ಮಾಡಲಿವೆ. ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್‌ ಬಿಗ್‌ಬಸ್‌ ಮಾದರಿಯ 6 ಡಬಲ್‌ ಡೆಕ್ಕರ್‌ ತೆರೆದ ಬಸ್‌ಗಳ ಸಂಚಾರಕ್ಕೆ ಸಚಿವ ಸಿ.ಪಿ. ಯೋಗೇಶ್ವರ್‌ ಚಾಲನೆ ನೀಡಿದರು. ಬಸ್‌ನಲ್ಲಿ ಕುಳಿತು ವೀಕ್ಷಣೆ ಮಾಡಲು ಪ್ರತಿ ಪ್ರವಾಸಿಗರಿಗೆ 250 ರೂ. ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next