Advertisement
ಹೆಲಿ ಟೂರಿಸಂಗೆ ಆದ್ಯತೆ ನೀಡಿದರೆ ಎನ್‌ಎಂಪಿಟಿ ಮೂಲಕ ಆಗಮಿಸುವ ಪ್ರವಾಸಿಗರು 150 ಕಿ.ಮೀ. ವ್ಯಾಪ್ತಿಯ ಕೊಡಗು, ಚಿಕ್ಕಮಗಳೂರು ಸಹಿತ ದ.ಕ., ಉಡುಪಿಯ ಪ್ರಮುಖ ಪ್ರವಾಸಿ ಸ್ಥಳಗಳ ವೀಕ್ಷಣೆ ಮಾಡಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲು ಸಾಧ್ಯವಿದೆ. 2019-20ನೇ ಸಾಲಿನಲ್ಲಿ ಮೂರು ಹಡಗುಗಳು ನೋಂದಾಯಿಸಿವೆ, ಕನಿಷ್ಠ ಪ್ರವಾಸಿಗರನ್ನು ಹೊತ್ತ 26 ಹಡಗುಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.
ಎನ್‌ಎಂಪಿಟಿ ಯಾರ್ಡ್‌ಗೆ ಲಾರಿಗಳಲ್ಲಿ ಬರುವ ಸರಕನ್ನು ಅತ್ಯಾಧುನಿಕ ವ್ಯವಸ್ಥೆ ಮೂಲಕ ನಿರ್ವಹಿಸಲಿದ್ದು, ಪಣಂಬೂರು ಬೀಚ್ ರಸ್ತೆ ಧೂಳು ಮುಕ್ತವಾಗಲಿದೆ. ಸಮುದ್ರದಲ್ಲಿ ತ್ಯಾಜ್ಯ ಚೆಲ್ಲುವ ಹಡಗುಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಚೆಲ್ಲುವ ಸಮಸ್ಯೆಗಳಿಂದ ತೈಲದುಂಡೆಗಳು ಸಮುದ್ರ ತೀರಕ್ಕೆ ಕೆಲವು ಬಾರಿ ಅಪ್ಪಳಿಸುತ್ತವೆ. ಈ ಬಾರಿ ಇದು ಕನಿಷ್ಠ ಮಟ್ಟದ
ಲ್ಲಿತ್ತು ಎಂದರು. ಮುಳುಗಿರುವ ಡ್ರೆಜ್ಜರ್‌ನಲ್ಲಿರುವ ತೈಲವನ್ನು ಹೊರತೆಗೆಯಲು ಡ್ರೆಜ್ಜರ್ ಸಂಸ್ಥೆ ಪೂರಕ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.