Advertisement

ಕೋಡಿ ಕ್ರಿಕೆಟರ್ನಿಂದ ಹೆಜಮಾಡಿ ಬೀಚ್‌ ಸ್ವತ್ಛತೆ

09:21 PM Apr 07, 2019 | sudhir |

ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಕಳೆದ ಹಲವು ವರ್ಷ ಗಳಿಂದ ಸಮಾಜಮುಖೀ ಕಾರ್ಯಗಳನ್ನೆಸಗು ತ್ತಿರುವ ಹೆಜಮಾಡಿ ಕೋಡಿಯ ಕೋಡಿ ಕ್ರಿಕೆಟರ್ ಸದಸ್ಯರು ಹೆಜಮಾಡಿಯ ಯಾರ್ಡ್‌ನಿಂದ ದಕ್ಷಿಣಕ್ಕೆ ಸುಮಾರು 2 ಕಿ.ಮೀ.ನಷ್ಟು ಬೀಚ್‌ನ ಸ್ವತ್ಛತಾ ಕಾರ್ಯ ನಡೆಸುವ ಮೂಲಕ ಗಮನ ಸೆಳೆದರು.

Advertisement

ಹೆಜಮಾಡಿಯಲ್ಲಿ ನಿರಂತರ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಅರ್ಹ ಫಲಾನುಭವಗಳಿಗೆ ಮನೆ ಕಟ್ಟಲು, ಮದುವೆಗಾಗಿ ಆರ್ಥಿಕ ನೆರವು, ಗ್ರಾಮ ವ್ಯಾಪ್ತಿಯ 10ನೇ ತರಗತಿಯ ಪ್ರತಿಭಾನ್ವಿತರಿಗೆ 10 ಸಾವಿರ ರೂ. ಬಹುಮಾನ, ಆಂಗ್ಲ ಮಾಧ್ಯಮ ಶಾಲೆಗೆ ನೆರವು,ಹಿರಿಯ ನಾಗರಿಕರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಉಚಿತ ಪ್ರವಾಸ ಆಯೋಜನೆ, ರಸ್ತೆ ದಾರಿದೀಪ ಅಳವಡಿಕೆ ಇತ್ಯಾದಿ ಸಮಾಜಮುಖೀ ಕಾರ್ಯಗಳಿಂದ ಕೋಡಿ ಕ್ರಿಕೆಟರ್ ಪ್ರಸಿದ್ದಿ ಪಡೆದಿದೆ.

ಹೆಜಮಾಡಿಯ ಬೀಚ್‌ನಲ್ಲಿ ಅತಿ ಹೆಚ್ಚು ತ್ಯಾಜ್ಯ ಸಂಗ್ರಹಗೊಂಡಿದ್ದು, ಕೋಡಿ ಕ್ರಿಕೆಟರ್ ಸದಸ್ಯರು 3 ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಗ್ರಾ.ಪಂ. ಹಾಗೂ ಗ್ರಾಮಸ್ಥರ ಗಮನ ಸೆಳೆದಿದ್ದಾರೆ.

ಈ ಸಂದರ್ಭ ಮಾತನಾಡಿದ ಕೋಡಿ ಕ್ರಿಕೆಟರ್ ಸಂಚಾಲಕ ಸತೀಶ್‌ ಕೋಟ್ಯಾನ್‌, ಹೆಜಮಾಡಿಯ ಕರಾವಳಿ ತೀರದಲ್ಲಿ ಎಣಿಕೆಗೂ ಮೀರಿ ತ್ಯಾಜ್ಯ ಸಂಗ್ರಹವಾಗಿದೆ. ಸ್ಥಳೀಯಾಡಳಿತ ಸೂಕ್ತವಾಗಿ ಸ್ಪಂದಿಸಿದಲ್ಲಿ ಮತ್ತಷ್ಟು ಸ್ವತ್ಛತಾ ಅಭಿಯಾನವನ್ನು ಕೋಡಿ ಕ್ರಿಕೆಟರ್ ಮೂಲಕ ಹಮ್ಮಿಕೊಳ್ಳಲಿದ್ದೇವೆ ಎಂದಿದ್ದಾರೆ.

ಕೋಡಿ ಕ್ರಿಕೆಟರ್ ಅಧ್ಯಕ್ಷ ಕಿರಣ್‌ ಪುತ್ರನ್‌, ಭೂಪಾಲ್‌ ಮೆಂಡನ್‌ ದುಬಾೖ, ಗಿರೀಶ್‌ ಮುಂಬಯಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next