Advertisement

Hejjaru Movie: ಹೆಜ್ಜಾರು ಸಂಭ್ರಮ ಕಂಟೆಂಟ್‌ ಗೆದ್ದ ಖುಷಿ

06:48 PM Jul 31, 2024 | Team Udayavani |

ಇತ್ತೀಚೆಗೆ ತೆರೆಕಂಡಿರುವ “ಹೆಜ್ಜಾರು’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದು ಕಂಟೆಂಟ್‌ ಸಿನಿಮಾವಾಗಿ, ರೆಗ್ಯುಲರ್‌ ಶೈಲಿ ಬಿಟ್ಟ ಚಿತ್ರವಾಗಿ ಜನ ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಇದು ಚಿತ್ರತಂಡದ ಖುಷಿ ಹೆಚ್ಚಿದೆ.

Advertisement

ಇತ್ತೀಚೆಗೆ ಈ ಖುಷಿಯನ್ನು ತಂಡ ಸಂಭ್ರಮಿಸಿದೆ. ಚಿತ್ರತಂಡ ಹೇಳುವಂತೆ ಸಿನಿಮಾ ಬಿಡುಗಡೆಯಾದ 10 ದಿನಗಳಲ್ಲಿ 32 ಹೌಸ್‌ಫ‌ುಲ್‌ ಶೋ, 27 ಶೋಗಳು ಶೇ 85 ಫ‌ುಲ್‌, 17ಶೋ ಶೇ.65 ಭರ್ತಿಯೊಂದಿಗೆ ಪ್ರದರ್ಶನ ಕಂಡಿದೆ ಎನ್ನುವುದು ತಂಡ ನೀಡುವ ವಿವರ.

“ಹೆಜ್ಜಾರು’ ಬಗ್ಗೆ ಹೇಳುವುದಾದರೆ, ಇದುಕನ್ನಡದ ಮೊಟ್ಟ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ. ಹರ್ಷಪ್ರಿಯ ಈ ಸಿನಿಮಾದ ನಿರ್ದೇಶಕರು. ಪುಟ್ಟಗೌರಿ ಮದುವೆ,ಕಿನ್ನರಿ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಮಹಾನಾಯಕ ಅಂಬೇಡ್ಕರ್‌ ಹಾಗೂ ಹೆಬ್ಬುಲಿಯ ದೇವರೆ ನೀನು ಇರೊ, ವಿಳಾಸವು ಬೇಕಾಗಿದೆ ಹೀಗೆ ಸಾಹಿತಿಯಾಗಿ, ಕಥೆಗಾರನಾಗಿ, ಸಂಭಾಷಣೆಕಾರನಾಗಿ ಹಾಗೂ ಆಗಿ ಹಲವಾರು ಹಿಟ್‌ ಧಾರಾವಾಹಿಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಹರ್ಷಪ್ರಿಯ ಅವರು ಹೆಜ್ಜಾರು ಮೂಲಕ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಕಿರುತೆರೆಯಲ್ಲಿ ಹಲವಾರು ಹಿಟ್‌ ಧಾರಾವಾಹಿಗಳನ್ನು ನೀಡಿರುವ ಕೆ.ಎಸ್‌.ರಾಮ್‌ಜಿ ತಮ್ಮ ಗಗನ ಎಂಟರ್‌ಪ್ರೈಸಸ್‌ ಅಡಿಯಲ್ಲಿ “ಹೆಜ್ಜಾರು’ ನಿರ್ಮಾಣ ಮಾಡಿದ್ದಾರೆ. ಭಗತ್‌ ಆಳ್ವ ಈ ಚಿತ್ರದ ನಾಯಕರು. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next