Advertisement
ಕೇಂದ್ರ ಮತ್ತು ರಾಜ್ಯ ಸರಕಾರಗಳ 50:50 ಅನುದಾನದೊಂದಿಗೆ ಕಾರ್ಯಗತಗೊಳ್ಳಲಿರುವ 138.6 ಕೋ.ರೂ.ಗಳ ಹೆಜಮಾಡಿ ಬಂದರು ಯೋಜನೆಗೆ ಈಗಾಗಲೇ ಕೇಂದ್ರ ಸರಕಾರವು 13.86 ಕೋ. ರೂ.ಗಳ ತನ್ನ ಮೊದಲ ಕಂತನ್ನು ಬಿಡುಗಡೆಗೊಳಿಸಿದೆ. ಇನ್ನೇನು ರಾಜ್ಯ ಸರಕಾರದ ಅನುದಾನವೂ ಬಿಡುಗಡೆಗೊಳ್ಳಲಿದೆ ಎನ್ನುವಷ್ಟರಲ್ಲಿ ಯೋಜನೆಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಲಭ್ಯವಾಗಬೇಕೆಂದು ಹೇಳಲಾಯಿತು.
ರಾಜ್ಯ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕುರಿತು ತಿಳಿಸಿದ್ದರೂ ಇದುವರೆಗೂ ಸರಕಾರದ ಗ್ರೀನ್ ಸಿಗ್ನಲ್ ಸಿಗಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಯೋಜನಾ ಪ್ರದೇಶದ ಸುತ್ತಮುತ್ತ ಖಾಸಗಿಯವರು ಈ ಪ್ರದೇಶದಲ್ಲಿ ಭಾಗಶಃ ಭೂಮಿಗಳನ್ನು ತಮ್ಮದೆಂದು ವಾದಿಸಿದ್ದು ಪಹಣಿ ಪತ್ರಗಳಲ್ಲೂ ಇವರ ಹೆಸರು ನಮೂದಾಗಿರುವುದು ಮೀನುಗಾರಿಕೆ ಇಲಾಖೆಗೆ ತೊಡಕನ್ನು ಉಂಟು ಮಾಡಿದೆ. ಭೂಮಿ ಅತಿಕ್ರಮಣದಿಂದ ಆತಂಕವೆಂಬಂತೆ ‘ಉದಯವಾಣಿ’ ಇದನ್ನು ಈ ಹಿಂದೆಯೇ ವರದಿ ಮಾಡಿತ್ತು. ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯೂ ನಡೆದಿತ್ತು ರಾಜ್ಯ ಮೀನುಗಾರಿಕೆ ಇಲಾಖಾ ನಿರ್ದೇಶಕರು, ಸಹ ನಿರ್ದೇಶಕರು ಈಗಾಗಲೇ ಈ ಯೋಜ(ಚ)ನೆಯ ಹಿಂದೆ ಸುಮಾರು 40 ವರ್ಷಗಳಿಂದ ಹೆಣಗಾಡುತ್ತಿರುವ ಮೂಲ್ಕಿ ವಲಯ ಪರ್ಸೀನ್ ಬೋಟ್ ಮಾಲಕರ ಸಂಘದ ಪದಾಧಿಕಾರಿಗಳನ್ನು ಈ ಕುರಿತಾಗಿ ಸಂಪರ್ಕಿಸಿದ್ದಾರೆ.
Related Articles
Advertisement
ಪ್ರಸ್ತಾವನೆ ಬರಬೇಕಿದೆಈ ಕುರಿತ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ನೀಡಲಾಗಿದೆ. ಯೋಜನೆಗೆ ಬೇಕಾದ ಭೂಮಿಯ ಅಳತೆ ಬಳಿಕ ತಮಗೆ ಮೀನುಗಾರಿಕೆ ಇಲಾಖೆಯಿಂದ ಪ್ರಸ್ತಾವನೆ ಬರಬೇಕಿದೆ. ಆ ಬಳಿಕ ಈ ಪ್ರದೇಶವನ್ನು ಯೋಜನೆಗಾಗಿ ಮೀಸಲಿರಿಸಬೇಕಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾಧಿಕಾರಿ