Advertisement

Hejamadi: ಕಂಟೈನರ್‌ ಲಾರಿ ಹಿಂಬದಿಗೆ ಬಸ್‌ ಢಿಕ್ಕಿ, 20 ಮಂದಿಗೆ ಗಾಯ

09:21 PM Jun 11, 2024 | Team Udayavani |

ಪಡುಬಿದ್ರಿ: ಕಂಟೈನರ್‌ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯದಿಂದ ಹೆದ್ದಾರಿಯಲ್ಲೇ ನಿಲ್ಲಿಸಿದ ಕಾರಣ ಮಂಗಳವಾರ ಸಂಜೆಯ ವೇಳೆ ಸುರಿಯುತ್ತಿದ್ದ ಮಳೆ ನಡುವೆ ಕೊಲ್ಲೂರಿನಿಂದ ಮಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ತಡೆರಹಿತ ಬಸ್ಸೊಂದು ಕಂಟೈನರ್‌ ಹಿಂಬದಿಗೆ ಢಿಕ್ಕಿಯಾದ ಪರಿಣಾಮ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿಗೆ ಗಾಯಗಳಾಗಿವೆ. ಓರ್ವರಿಗೆ ಮೂಳೆ ಮುರಿತವುಂಟಾಗಿದ್ದು ಎಲ್ಲರೂ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

Advertisement

ಮಳೆಗಾಲದಲ್ಲಿ ತೀರಾ ಅಪಾಯಕಾರಿ ಎನಿಸಿರುವ ಹೆಜಮಾಡಿಯ ಬಿಟ್ಟು ದಾಭಾದೆದುರಿನ ರಾಷ್ಟ್ರೀಯ ಹೆದ್ದಾರಿ 66ರ ತಿರುವೊಂದರಲ್ಲಿ ಈ ಅಪಘಾತವು ಸಂಭವಿಸಿದೆ.

ಗಾಯಾಳುಗಳನ್ನು ಭವಾನಿ, ಅಮೀನಾ, ಫಾತೀಮಾ, ಸಿಯಾ, ಸಚಿನ್‌, ಸನತ್‌ ಕುಮಾರ್‌, ಸಚಿನ್‌ ಎ., ಪೌಲ್‌, ಮಾತುಮ್‌, ಆನಂದ ಪ್ರಭು, ನಸೀಮ್‌ ಶೇಖ್‌, ಅಶೋಕ್‌, ನಂದನ, ಬಸ್‌ ಚಾಲಕ ವಿಕ್ರಮ್‌, ಸಿದ್ದು, ಅಮಿತ್‌, ಶಕುಂತಳಾ, ಪ್ರದೀಪ್‌, ಸುಮತಿ, ಈಶ್ವರಮೂರ್ತಿ ಎಂದು ಗುರುತಿಸಲಾಗಿದೆ.

ಉಡುಪಿ-ಮಂಗಳೂರು ದ್ವಿಪಥ ಹೆದ್ದಾರಿಯಲ್ಲಿ ರಸ್ತೆಯ ಎಡಭಾಗದಲ್ಲೇ ಚಲಿಸುತ್ತಿದ್ದ ಬಸ್ಸಿನ ಬಲಭಾಗದಲ್ಲೂ ಈ ಅಪಘಾತವು ಸಂಭವಿಸಿದ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರೇ ವಾಹನಗಳಿದ್ದವು. ಹಾಗಾಗಿ ಕಂಟೈನರ್‌ ಲಾರಿ ಚಾಲಕನು ಯಾವುದೇ ಮುನ್ಸೂಚನೆಗಳಿಲ್ಲದೇ ನಿಲ್ಲಿಸಿದಾಗ ಈ ಘಟನೆಯು ಸಂಭವಿಸಿದೆ.

ಹೆದ್ದಾರಿಯಿಂದ ರಸ್ತೆ ಬದಿಗೆ ಸರಿಸದೇ ಹೆದ್ದಾರಿಯಲ್ಲೇ ಲಾರಿಯನ್ನು ನಿಲ್ಲಿಸಿದ್ದರಿಂದ ಹಿಂಬದಿಯಲ್ಲಿದ್ದ ಬಸ್ಸನ್ನು ನಿಲ್ಲಿಸಲು ಬ್ರೇಕ್‌ ಹಾಕಿದಾಗಲೂ ಮಳೆಗೆ ಬಸ್ಸು ನಿಯಂತ್ರಣಕ್ಕೆ ಬಂದಿರಲಿಲ್ಲ. ತನ್ನ ಬಲಗಡೆಗೆ ತೆಗೆದುಕೊಳ್ಳಲೂ ಆಗದ ಸ್ಥಿತಿಯಲ್ಲಿ ಬಸ್ಸು ಕಂಟೈನರ್‌ ಹಿಂಬದಿಗೆ ಢಿಕ್ಕಿಯಾಗಿದೆ.

Advertisement

ಸ್ಥಳಕ್ಕೆ ಪಡುಬಿದ್ರಿ ಠಾಣಾ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿಗಳು ಭೇಟಿ ನೀಡಿದ್ದಾರೆ.

ಕಂಟೈನರ್‌ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next