Advertisement
ಜ. 14 ರಂದು ಐರೋಲಿಯ ಹೆಗ್ಗಡೆ ಭವನ ಸಮೀಪದ ಸೆಕ್ಟರ್ 15 ರಲ್ಲಿರುವ ಎನ್‌ಎಂಸಿ ಮೈದಾನದಲ್ಲಿ ಬೆಳಗ್ಗೆ ನಡೆದ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಇವರು, ಹೆಗ್ಗಡೆ ಸೇವಾ ಸಂಘವು ಪ್ರತೀ ವರ್ಷವೂ ಆಯೋಜಿಸುವ ಕ್ರೀಡಾಕೂಟವು ಸಮಾಜ ಬಾಂಧವರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ನೀಡಿದಂತಾಗುತ್ತದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಸಮಾಜದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ನಾನು ಸಿದ್ಧನಿದ್ದೇನೆ. ಅವರಿಗೆ ಯಾವುದೇ ರೀತಿಯ ಸಹಾಯ, ಸಹಕಾರವನ್ನು ನೀಡಲು ಹಿಂಜರಿಯುವುದಿಲ್ಲ ಎಂದು ನುಡಿದು ಕ್ರೀಡಾಳುಗಳಿಗೆ ಶುಭಹಾರೈಸಿದರು.
Related Articles
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಪ್ರತೀ ವರ್ಷವೂ ಕ್ರೀಡೋತ್ಸವವನ್ನು ಆಚರಿಸುತ್ತಿದೆ. ಯುವ ಜನಾಂಗ ಇದರ ಸದುಪಯೋಗಪಡಿಸಿಕೊಂಡು ಸಂಘದ ಸಮಾಜಪರ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ನುಡಿದು ಶುಭಹಾರೈಸಿದರು.
Advertisement
ಸಂಘದ ಜೊತೆ ಕಾರ್ಯದರ್ಶಿ ರವಿ ಎಸ್. ಹೆಗ್ಡೆ ಹೆರ್ಮುಂಡೆ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಗೌರವ ಕಾರ್ಯಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಆರ್. ಹೆಗ್ಡೆ, ಗೌರವ ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ, ಉಪಾಧ್ಯಕ್ಷ ಸುರೇಶ ಎಸ್. ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಎಸ್. ಹೆಗ್ಡೆ, ಯುವ ಸಮಿತಿಯ ಕಾರ್ಯಾಧ್ಯಕ್ಷ ಅಭಿಷೇಕ್ ಎಸ್. ಹೆಗ್ಡೆ, ಜೊತೆ ಕೋಶಾಧಿಕಾರಿ ಚಂದ್ರಶೇಖರ ಬಿ. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಕಾರ್ಯಕ್ರಮವನ್ನು ಪ್ರಭಾಕರ ಎಸ್. ಹೆಗ್ಡೆ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ನಿರ್ವಹಿಸಿದರು.
ಆಡಳಿತ ಮಂಡಳಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಸಹಕರಿಸಿದರು. ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ಬಿ. ಗೋಪಾಲ್ ಹೆಗ್ಡೆ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಬಿ. ಹೆಗ್ಡೆ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಲೀಲಾವತಿ ಆರ್. ಹೆಗ್ಡೆ, ಮೆಂಟೆನೆನ್ಸ್ ಆ್ಯಂಡ್ ರಿಪೇರ್ ಸಮಿತಿಯ ಕಾರ್ಯಾಧ್ಯಕ್ಷ ಕೆ. ಪ್ರಸನ್ನ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮಂಜುನಾಥ ಎಂ. ಹೆಗ್ಡೆ, ಸಂತೋಷ್ ಆರ್. ಹೆಗ್ಡೆ, ಸೇವಂತಿ ಎಲ್. ಹೆಗ್ಡೆ, ರಾಜೇಶ್ ಆರ್. ಹೆಗ್ಡೆ, ಸಂದೇಶ್ ಜೆ. ಹೆಗ್ಡೆ, ಭಾರತಿ ಎಂ. ಹೆಗ್ಡೆ, ವಿಶ್ವನಾಥ ಆರ್. ಹೆಗ್ಡೆ, ನವೀನ್ ಆರ್. ಹೆಗ್ಡೆ, ಸುಜಾತಾ ಎಸ್. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.
ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಸಮಾಜ ಭಾಂದವರ ವಯೋಮಿತಿಗೆ ಅನುಗುಣವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಆಡಳಿತ ಮಂಡಳಿ ಸದಸ್ಯರು, ಯುವ ವಿಭಾಗ ಮತ್ತು ಮಹಿಳಾ ವಿಭಾಗದವರ ಸಹಕಾರದಿಂದ ನಡೆಯಿತು. ಸಂಜೆ 7 ರಿಂದ ಹೆಗ್ಗಡೆ ಭವನದಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ, ಸಂಜೆ ಚಹಾದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ನಗರದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು.
ವಿಶೇಷ ಆಕರ್ಷಣೆದಿನಪೂರ್ತಿ ನಡೆದ ಕ್ರೀಡೋತ್ಸವದಲ್ಲಿ ಸಮಾಜ ಬಾಂಧವರು, ಸದಸ್ಯ ಬಾಂಧವರು ಬೆಳಗ್ಗೆ 7.30ಕ್ಕೆ ಹೆಗ್ಗಡೆ ಭವನದಿಂದ ಎನ್‌ಎಮ್‌ಎಂಸಿ ಮೈದಾನದವರೆಗೆ ಕ್ರೀಡಾಳುಗಳನ್ನು ಮತ್ತು ಅತಿಥಿಗಳನ್ನು ವೈವಿಧ್ಯಮಯ ಭಾರತೀಯ ಸಂಸ್ಕೃತಿ ಬಿಂಬಿಸುವ ಪಥ ಸಂಚಲನದ ಮೂಲಕ ಕರೆತಂದು ಸ್ವಾಗತಿಸಿದರು. ನಾಡಿನ ಯಕ್ಷಗಾನ ಕುಣಿತ, ಬೊಂಬೆ ಕುಣಿತ, ಡೋಲು-ಚೆಂಡೆಯ ನಿನಾದ ಇನ್ನಿತರ ಪ್ರಾತ್ಯಕ್ಷಿಕೆ, ಕುಣಿತಗಳು ಕ್ರೀಡಾಳುಗಳನ್ನು ರಂಜಿಸಿತು. ಅಪರಾಹ್ನ ದಿ| ಇಸರಮಾರು ಅಚ್ಚಣ್ಣ ಹೆಗ್ಡೆ ಅಡಂದಾಲು ಸ್ಮರಣಾರ್ಥ ಕ್ರಿಕೆಟ್ ಟ್ರೋಫಿ ಮತ್ತು ಮಹಿಳೆಯರಿಗಾಗಿ ದಿವಂಗತ ಅಡಂದಾಲು ಚೆನ್ನಕ್ಕ ಹೆಗ್ಗಡ್ತಿ ಸ್ಮರಣಾರ್ಥ ಥ್ರೋ ಬಾಲ್ ಪಂದ್ಯಾಟ, ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಹಗ್ಗ ಜಗ್ಗಾಟ ಪಂದ್ಯಾಟಗಳು ನೆರವೇದವು. ಚಿತ್ರ-ವರದಿ: ಸುಭಾಷ್ ಶಿರಿಯಾ