Advertisement

ಹೆಬ್ರಿ ಗಡಿಯಲ್ಲಿ ಅಪರಿಚಿತರ ಪ್ರವೇಶ: ಹೆಚ್ಚಿದ ಆತಂಕ

10:38 AM Apr 14, 2020 | sudhir |

ಹೆಬ್ರಿ: ಉಡುಪಿ ಜಿಲ್ಲೆಯೊಳಗೆ ಬೇರೆ ಜಿಲ್ಲೆಯ ವಾಹನಗಳು ಪ್ರವೇಶಿಸುವುದಕ್ಕೆ ನಿಷೇಧ ಹೇರಿ, ಗಡಿ ಪ್ರದೇಶಗಳನ್ನು ಸೀಲ್‌ ಮಾಡಿದ್ದರೂ ಹಲವು ವಾಹನಗಳು ಹಾಗೂ ವ್ಯಕ್ತಿಗಳು ನುಸುಳಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಮಹಾರಾಷ್ಟ್ರದ ರೋಗಿಯೊಬ್ಬರನ್ನು ರವಿವಾರ ಆ್ಯಂಬುಲೆನ್ಸ್‌ನಲ್ಲಿ ಕರೆತರಲಾಗಿತ್ತು. ಆಗುಂಬೆ ಚೆಕ್‌ಪೋಸ್ಟ್‌ ನಲ್ಲಿ ರಾತ್ರಿ 9 ಗಂಟೆಗೆ ಈ ವಾಹನ ಸಂಚರಿಸಿದ್ದು, ವರದಿ ಪುಸ್ತಕದಲ್ಲಿ ಮೃತದೇಹ ಎಂದು ನಮೂದಿಸಿದ್ದು ಅಚ್ಚರಿ ಮೂಡಿಸಿದೆ.
ಅಲ್ಲದೆ, ರವಿವಾರ ರಾತ್ರಿ 7 ಗಂಟೆ ಸುಮಾರಿಗೆ ಮುಂಬಯಿ ಮೂಲದ 10 ಜನರು ಗೇಟ್‌ ಮೂಲಕ ಕಾಲ್ನಡಿಗೆಯಲ್ಲಿ ಬಂದಿದ್ದಾರೆ.

7ನೇ ತಿರುವಿನಲ್ಲಿ ನಡೆದು ಬರುತ್ತಿದ್ದ ಅವರನ್ನು ಹೆಬ್ರಿ ಪೊಲೀಸರು ಓಡಿಸಿದ್ದಾರೆ. ಅವರು ಎಲ್ಲಿ ಹೋದರು ಎನ್ನುವುದು ತಿಳಿದುಬಂದಿಲ್ಲ. ರವಿವಾರ ಕುಚ್ಚಾರು, ಪಡುಕುಡೂರು ಪ್ರದೇಶದಲ್ಲಿ ಬೆಂಗಳೂರಿನ ಕೆಲವರು ಬಂದಿದ್ದಾರೆ ಎಂಬ ಮಾಹಿತಿ ಇದ್ದು, ಚೆಕ್‌ಪೋಸ್ಟ್‌ನ ಭದ್ರತೆ ಕುರಿತು ಅನುಮಾನ ಮೂಡಿಸಿದೆ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ರೋಗಿಯನ್ನು ರಸ್ತೆಯಲ್ಲೇ ಬಿಟ್ಟುಹೋದರು!
ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೆಬ್ರಿ ಸಮೀಪದ ಕಬ್ಬಿನಾಲೆಯ ವ್ಯಕ್ತಿ ಅನಾರೋಗ್ಯ ಪೀಡಿತನಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೇರೆ ಕಡೆ ತೋರಿಸಿ ಎಂದು ಸೂಚಿಸಿದ್ದರು. ಆದರೆ, ಕೆಲಸ ಕೊಟ್ಟಿದ್ದ ಮನೆಯ ಮಾಲಕರು ಇಲ್ಲದ ಕಾರಣ ಆ್ಯಂಬುಲೆನ್ಸ್‌ನಲ್ಲಿ ಊರಿಗೆ ಕಳುಹಿಸಿದ್ದರು. ಆದರೆ, ಆ್ಯಂಬುಲೆನ್ಸ್‌ ನವರು ಈ ರೋಗಿಯನ್ನು ಮುದ್ರಾಡಿ ಪೇಟೆಯಲ್ಲಿ ಬಿಟ್ಟುಹೋಗಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸ್ಥಳೀಯರು ಗಮನಿಸಿ ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅವರನ್ನು ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪರಿಚಿತ ವ್ಯಕ್ತಿ ಪತ್ತೆ
ಕುಚ್ಚಾರು ಬಸ್ಸು ತಂಗುದಾಣದಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೋರ್ವ ಸೋಮವಾರ ಸಂಜೆ 5ರಿಂದ ಮಲಗಿದ್ದು, ಪೊಲೀಸರಿಗೆ ಸ್ಥಳೀಯರಾದ ಪಾಂಡುರಂಗ ಪೂಜಾರಿ ಮಾಹಿತಿ ನೀಡಿದ್ದಾರೆ. ರಾತ್ರಿಯಾದರೂ ಆ ವ್ಯಕ್ತಿ ಅಲ್ಲೇ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next